
ಮಳೆ, ನದಿ, ತೊರೆಗಳನ್ನೇ ಕಾಣದ ಜಗತ್ತಿನ ನೂರಾರು ದೇಶಗಳು ನೀರಿನ ಸಮೃದ್ಧಿಯನ್ನು ಕಂಡುಕೊಂಡಿರುವ ಸಂಗತಿ ಗೊತ್ತಲ್ಲವೇ? ಆದರೆ ಆ ಎಲ್ಲವೂ ಇರುವ ನಾವುಗಳು ಮಾತ್ರ ನದಿ ನೀರಿನ ವ್ಯಾಜ್ಯದಲ್ಲೇ ಮುಳುಗಿಬಿಟ್ಟಿದ್ದೇವೆ. ಅದೇನು ವಿಚಿತ್ರ ಅಂತೀರಿ? ಮಹದಾಯಿ ನದಿ ನೀರಿನ ಪಾಲಿಗಾಗಿ ಉತ್ತರ ಕರ್ನಾಟಕದ ರೈತರು ಹೋರಾಟ ನಡೆಸುತ್ತಿರುವುದು ಇಂದು ನಿನ್ನೆಯಿಂದಲ್ಲ. ಮಹದಾಯಿ ಹೋರಾಟಕ್ಕೆ ಒಂದು ಸುದೀರ್ಘ ಇತಿಹಾಸವೇ ಇದೆ. ಒಂದೊಂದು ಸಲವೂ ಒಂದೊಂದು ತಿರುವು; ಆರೋಪ ಪ್ರತ್ಯಾರೋಪಗಳಿಗೆ ಮಾತ್ರ ಕೊನೆಯಿಲ್ಲ. ನೀರಿನ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣಗಳೂ […]