
ಭಾರತದ ಮೂರು ರಾಜ್ಯಗಳಲ್ಲಿ ಮಿಡತೆಗಳ ದಾಳಿ ಭಾರಿ ಹಾವಳಿ ಎಬ್ಬಿಸಿದೆ. ಚಂಡಮಾರುತದಂತೆ ಬೀಸಿ ಬರುವ ಮಿಡತೆಗಳು ಕ್ಷಣಾರ್ಧದಲ್ಲಿ ಬೆಳೆದು ನಿಂತ ಬೆಳೆಯನ್ನು ಖಾಲಿ ಮಾಡುತ್ತಿವೆ. ಇವು ಎಲ್ಲಿಂದ ಬಂದವು? ಇವುಗಳಿಂದ ಏನು ನಷ್ಟ? ಒಂದು ಚಿತ್ರಣ ಇಲ್ಲಿದೆ. ರಾಜಸ್ಥಾನದಲ್ಲಿ ಮಿಡತೆಗಳು ಬಿರುಗಾಳಿಯಂತೆ ದಾಳಿ ಮಾಡಿವೆ. ಈ ಬಾರಿ ಗ್ರಾಮೀಣ ಪ್ರದೇಶದ ಹೊಲಗಳನ್ನೆಲ್ಲ ಮುಕ್ಕಿ ಮುಗಿಸಿ, ರಾಜಧಾನಿ ಜೈಪುರಕ್ಕೂ ದಾಳಿ ಮಾಡಿದ್ದು, ವಸತಿ ಪ್ರದೇಶಗಳಲ್ಲಿ ದೂಳಿನ ಮೋಡಗಳಂತೆ ಗುಂಪಾಗಿ ನೆರೆದಿರುವ ಚಿತ್ರಗಳು, ವಿಡಿಯೋಗಳನ್ನು ಅಲ್ಲಿನ ನಿವಾಸಿಗಳು ಹಂಚಿಕೊಳ್ಳುತ್ತಿದ್ದಾರೆ. ಅಕ್ಕಪಕ್ಕದ […]