ಓರ್ವ ವ್ಯಕ್ತಿ ಮಾಡಿದ್ದಕ್ಕೆಲ್ಲ ಜೈ ಎನ್ನಬೇಕೆಂಬುದು ಸರಿಯಾದ ವಾದವಲ್ಲ. ಆದರೆ ಸರಿಯಾದ, ಕಠಿಣವಾದ ಮತ್ತು ಬಹು ಅಪೇಕ್ಷಿತವಾದ ಕಾರ್ಯಕ್ಕೆ ಮುಂದಾದಾಗ ಸಹಾಯ, ಸಹಕಾರ ಕೊಡದಿದ್ದರೆ ಆ ವ್ಯಕ್ತಿಗೆ ಮಾತ್ರವಲ್ಲ ರಾಷ್ಟ್ರಕ್ಕೂ ನಷ್ಟವಾಗುತ್ತದೆ. ಈಗಿನ ಸನ್ನಿವೇಶದಲ್ಲಿ ಈ ಮಾತು ಹೆಚ್ಚು ಅರ್ಥಪೂರ್ಣ. ಭಾರತೀಯರಾದ ನಾವು ಬೆಳೆಸಿಕೊಂಡಿರುವ ರೂಢಿಯೇ ಹಾಗೆ. ಯಾರು ಯಾವುದೇ ಯೋಜನೆ ರೂಪಿಸಲಿ ಉಪಯೋಗಕ್ಕಿಂತ ಅದರ ದುರುಪಯೋಗದ ಕಡೆಗೇ ಮೊದಲು ಗಮನ ಕೊಡುತ್ತೇವೆ. ಹೀಗಾಗಿ ಮೂಲಯೋಜನೆ ರೂಪಿಸುವವರು ಅದರ ದುರ್ಬಳಕೆ ಮಾಡಿಕೊಳ್ಳುವವರಿಗೆ ಚಳ್ಳೆಹಣ್ಣು ತಿನ್ನಿಸುವುದು ಹೇಗೆಂಬುದರ ಕುರಿತೇ […]