
ದೇಶದ ಮತದಾರ ರಾಜಕೀಯ ಪ್ರಬುದ್ಧತೆ ಮೆರೆಯುತ್ತಿದ್ದಾನೆ. ಜಾತಿ, ಮತ, ಪಂಥ, ಪ್ರದೇಶ ಮೀರಿದ ಪ್ರಜ್ಞಾವಂತಿಕೆ ತೋರುತ್ತಿದ್ದಾನೆ. ಹೀಗಾಗಿ ಕೋಮುವಾದಕ್ಕೆ ವಿರೋಧ, ಸೆಕ್ಯುಲರ್ ಸಿದ್ಧಾಂತದ ಪರ ಇತ್ಯಾದಿಗಳ ಹೆಸರಲ್ಲಿ ನಡೆಯುತ್ತಿದ್ದ ರಾಜಕೀಯ ಅಸ್ಪೃಶ್ಯತೆಯನ್ನು ತಿರಸ್ಕರಿಸುತ್ತಿದ್ದಾನೆ. ಇದಕ್ಕೆ ಉತ್ತಮ ಉದಾಹರಣೆ ಈಶಾನ್ಯದ ಮೂರು ರಾಜ್ಯಗಳ ಫಲಿತಾಂಶ. ಭಾರತದಲ್ಲಿ ಹಿಂದೆ ಅನೇಕ ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿದ್ದವು ಎಂಬುದನ್ನು ನಾವು ಕೇಳಿದ್ದೇವೆ ಮತ್ತು ಓದಿದ್ದೇವೆ. ಕಾಲಾನಂತರದಲ್ಲಿ ಅಂಥ ಪದ್ಧತಿಗಳಿಗೆ ನಮ್ಮವರು ತಿಲಾಂಜಲಿ ಇಡುತ್ತ ಬಂದರು. ಅಂಥ ಅನಿಷ್ಟಗಳಲ್ಲಿ ಅಸ್ಪೃಶ್ಯತೆ ಆಚರಣೆ ಕೂಡ ಒಂದು. […]