
– ಹಣಕ್ಕಾಗಿ ಪತ್ನಿಯ ಕೊಲೆ, ಸ್ನೇಹಿತನ ಮರ್ಡರ್ ವಿಕ ಸುದ್ದಿಲೋಕ ಬೆಂಗಳೂರು ಲಾಕ್ಡೌನ್ ಅವಧಿಯಲ್ಲಿ ಕುಡಿತದಿಂದಾಗುವ ಕೌಟುಂಬಿಕ ಹಿಂಸೆ ಪ್ರಕರಣಗಳು ಮತ್ತು ಅಪರಾಧಗಳ ಸಂಖ್ಯೆ ತಳ ಮುಟ್ಟಿತ್ತು. ಮದ್ಯ ಮಾರಾಟಕ್ಕೆ ಅವಕಾಶ ಸಿಕ್ಕ ಎರಡೇ ದಿನದಲ್ಲಿ ಕುಡುಕರ ಹಾವಳಿ ಮಿತಿಮೀರಿದೆ. ‘ಮದ್ಯಾಸುರ’ ಕುಟುಂಬಗಳ ನೆಮ್ಮದಿಗೆ ಕೊಳ್ಳಿ ಇಟ್ಟಿದ್ದಾನೆ. ಮೈಸೂರು ಮತ್ತು ಇಳಕಲ್ನಲ್ಲಿ ಮದ್ಯದ ಅಮಲಿನಿಂದಾದ ಪ್ರತ್ಯೇಕ ಎರಡು ಘಟನೆಗಳಲ್ಲಿ ಇಬ್ಬರು ಬಲಿಯಾಗಿದ್ದಾರೆ. ಮತ್ತೊಂದು ಕಡೆ, ಕೋಲಾರ ಜಿಲ್ಲೆಯಲ್ಲಿ ಭೂಪನೊಬ್ಬ ಎಣ್ಣೆ ಮತ್ತಿನಲ್ಲಿ ಹಾವನ್ನೇ ಕಚ್ಚಿ ಬಿಸಾಡಿದ್ದಾನೆ! ಇಳಕಲ್ನಲ್ಲಿ […]