
– ಡಿ ಜೀವಸತ್ವ ಕಡಿಮೆಯಾದರೆ ಸೋಂಕಿನ ಹಾವಳಿ, ಹೆಚ್ಚಾದರೆ ಪ್ರತಿರೋಧದ ಸುಂಟರಗಾಳಿ. – ಸುಧೀಂದ್ರ ಹಾಲ್ದೊಡ್ಡೇರಿ. ಕೋವಿಡ್-19 ಹಾವಳಿ ಕುರಿತಂತೆ ಜಗತ್ತಿನಾದ್ಯಂತ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು ಜರುಗುತ್ತಿರುವುದು ನಿಮಗೆ ಗೊತ್ತು. ಅಮೆರಿಕದ ಇಲಿನಾಯ್ಸ್ನಲ್ಲಿರುವ ನಾರ್ಥ್ ವೆಸ್ಟರ್ನ್ ಯೂನಿವರ್ಸಿಟಿಯ ವೈದ್ಯ ವಿಜ್ಞಾನಿಗಳು ತಮ್ಮ ಅಧ್ಯಯನಕ್ಕೆ ಕೋವಿಡ್-19 ಸೋಂಕಿನಿಂದ ಹೆಚ್ಚು ನಲುಗಿದ ದೇಶಗಳಾದ ಚೀನಾ, ಫ್ರಾನ್ಸ್, ಜರ್ಮನಿ, ಇಟಲಿ, ಇರಾನ್, ಸೌತ್ಕೊರಿಯ, ಸ್ಪೇನ್, ಸ್ವಿಝರ್ಲೆಂಡ್, ಬ್ರಿಟನ್ ಹಾಗೂ ಅಮೆರಿಕವನ್ನು ಆಯ್ದುಕೊಂಡರು. ಈ ಎಲ್ಲ ದೇಶಗಳಲ್ಲಿ ಸೋಂಕಿನಿಂದ ಸತ್ತವರ ಆಸ್ಪತ್ರೆ ದಾಖಲೆಗಳನ್ನು […]