
ಕನ್ನಡಿಗರ ಅಭಿಮಾನದ ನಿತ್ಯಮಂತ್ರವೆನಿಸುವ ನಿತ್ಯೋತ್ಸವ ಹಾಡು ಕೊಟ್ಟ, ರಾಜಕಾರಣಿಗಳಿಗೆ ಚಾಟಿ ಏಟಾಗಿ ಕುರಿಗಳು ಸಾರ್ ಕುರಿಗಳು ಪದ್ಯ ರಚಿಸಿದ, ಬೆಣ್ಣೆ ಕದ್ದ ನಮ್ಮ ಕೃಷ್ಣ ಎಂದು ಪುಳಕಗೊಳಿಸಿದ ಕವಿ ನಿಸಾರ್ ಅಹಮದ್ ಇನ್ನು ನೆನಪು. ಕನ್ನಡದ ಕಾವ್ಯ ರಸಿಕರ ಎದೆಯಾಳದಿಂದ ಸದಾ ಪುಟಿದು ಬರುವ ಹಾಡು ‘ನಿತ್ಯೋತ್ಸವ.’ ಶಿವಮೊಗ್ಗೆಯ ತುಂಗಾನದಿಯ ಬಳುಕು, ಜೋಗ ಜಲಪಾತದಿಂದ ಹುಟ್ಟಿಕೊಂಡ ಬೆಳಕು, ಸಹ್ಯಾದ್ರಿಯ ಕಬ್ಬಿಣದ ಗಣಿಯ ಉತ್ತುಂಗದ ನಿಲುಕು, ತೇಗ ಗಂಧ ನಿತ್ಯ ಹರಿದ್ವರ್ಣ ತರುಗಳು, ಕನ್ನಡಿಗರ ಸದ್ವಿಕಾಸ ಶೀಲ ನಡೆ […]