
– ಕಿರಣ್ಕುಮಾರ್ ಡಿ.ಕೆ. ಹದಗೆಟ್ಟ ಅರ್ಥವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಹರಸಾಹಸಪಡುತ್ತಿದ್ದ ಕೇಂದ್ರ ಸರಕಾರಕ್ಕೆ ಮತ್ತೆ ಪುಟಿದೇಳಲು ಕೊರೊನಾ ಲಾಕ್ಡೌನ್ ಅವಕಾಶ ನೀಡಿದೆ! ಕೊರೊನಾ ವೈರಸ್ ನಿಯಂತ್ರಣ ಹಾಗೂ ಆರ್ಥಿಕ ಪುನಶ್ಚೇತನ ಈ ಎರಡೂ ಸವಾಲುಗಳನ್ನು ಮೆಟ್ಟಿನಿಲ್ಲುವುದು ಸುಲಭವಲ್ಲವಾದರೂ ದೇಶಾದ್ಯಂತ ಸೋಂಕಿನ ಪ್ರಮಾಣ ಸಂಪೂರ್ಣ ನಿಯಂತ್ರಣಕ್ಕೆ ಬರುವ ಮೊದಲೇ ಆರ್ಥಿಕತೆಗೆ ಚೇತರಿಕೆ ನೀಡುವತ್ತ ಗಂಭೀರವಾಗಿ ಹೆಜ್ಜೆ ಇರಿಸಲು ಕೇಂದ್ರ ಸರಕಾರ ಮುಂದಡಿ ಇಡಲಾರಂಭಿಸಿದೆ. ದೇಶಾದ್ಯಂತ ಉತ್ಪಾದಕತೆಗೇ ಬ್ರೇಕ್ ಬಿದ್ದಿದೆ. ಹಣಕಾಸಿನ ಹರಿವು ಸಂಪೂರ್ಣ ಸ್ತಬ್ಧ ಎನ್ನುವಂತಾಗಿದೆ. ಹೀಗಿರುವಾಗ ಕೊರೊನಾ […]