ಬಿಜೆಪಿ ವರಿಷ್ಠರಿಗೆ ಪಕ್ಷದ ಭವಿಷ್ಯದ ಚಿಂತೆ ಕಿಂಚಿತ್ತಾದರೂ ಇದ್ದರೆ, ಹಗರಣದ ನೆರಳಿನಲ್ಲಿ ಯುಪಿಎ ಸರ್ಕಾರದ ಸಾಲುಸಾಲು ಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ತಲೆದಂಡ ಪಡೆದ ನೆನಪು ತುಸುವಾದರೂ ಇದ್ದರೆ, ಮೊದಲು ಸುಷ್ಮಾ ಮತ್ತು ವಸುಂಧರಾ ರಾಜೆ ರಾಜೀನಾಮೆ ಪಡೆಯಬೇಕು. ಸರ್ಕಾರ ನಡೆಸುವುದು ಅಂದರೆ ಅಷ್ಟು ಸಲೀಸೇ? ಕುರ್ಚಿ ಅಂದರೆ ಸುಖದ ಸುಪ್ಪತ್ತಿಗೆ ಮಾತ್ರವೇ? ಸರ್ಕಾರದ ಚುಕ್ಕಾಣಿ ಹಿಡಿದವರು ಕೀರ್ತಿಯ ಹಾರ ತುರಾಯಿಗಳಿಗೆ ಮಾತ್ರ ಕೊರಳೊಡ್ಡಿದರೆ ಸಾಕೇ? ಅದರ ಜೊತೆಜೊತೆಗೇ ಬರುವ ಅಪಮಾನ, ಅಪವಾದ, ಕಳಂಕಗಳಿಗೂ ಹೆಗಲು ಕೊಡುವುದು ಬೇಡವೇ? […]