ಪಿಒಕೆ ಗಡಿದಾಟಿ ಹೋಗಿ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ದಿಟ್ಟಕ್ರಮದಿಂದಾಗಿ ಕೇಂದ್ರ ಸರ್ಕಾರದ ಮೇಲೆ ಜನರಲ್ಲಿ ಮೆಚ್ಚುಗೆ ಮೂಡಿತ್ತು. ಇದೀಗ ಕಪ್ಪುಹಣದ ಮೇಲೆ ನಡೆದ ಸರ್ಜಿಕಲ್ ದಾಳಿ ಸರ್ಕಾರದ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಇದು ವಿಪಕ್ಷಗಳವರ ನಿದ್ದೆಗಡಿಸಿದೆ ಎಂಬುದು ಸ್ಪಷ್ಟ. ಭ್ರಷ್ಟಾಚಾರ ಕುರಿತ ಚರ್ಚೆ ಇಂದು ನಿನ್ನೆಯದಲ್ಲ. ಅದಕ್ಕೊಂದು ಸುದೀರ್ಘ ಇತಿಹಾಸವೇ ಇದೆ. ಅದರ ಸ್ವರೂಪಗಳೂ ಹಲವು. ಆದರೆ ಕಾಲಾಂತರದಲ್ಲಿ ಅದು ಲಂಚಸ್ವೀಕಾರಕ್ಕೆ ಸೀಮಿತವಾಗಿಬಿಟ್ಟಿದೆ ಅಷ್ಟೆ. ವಾಸ್ತವದಲ್ಲಿ ಭ್ರಷ್ಟಾಚಾರ ಎನ್ನುವುದು ಮನುಷ್ಯನ ಮಾನಸಿಕತೆಗೆ […]