
ದೇಶದಲ್ಲೇ ಮೊದಲ ಕೊರೊನಾ ಪ್ರಕರಣ ಪತ್ತೆಯಾದ ಕೇರಳದಲ್ಲೀಗ ಬಹುತೇಕ ಸೋಂಕು ಹತೋಟಿಗೆ ಬಂದಿದೆ. ಈ ಯಶಸ್ಸಿಗೆ ಕೇರಳದ ಆರೋಗ್ಯ ಸಚಿವೆ ಶೈಲಜಾ ಟೀಚರ್ ಅವರ ದೂರದೃಷ್ಟಿ, ಮಾರ್ಗದರ್ಶನ ಮತ್ತು ಪ್ರಯತ್ನವೇ ಕಾರಣ. – ಮಲ್ಲಿಕಾರ್ಜುನ ತಿಪ್ಪಾರ. ಕೆ.ಕೆ.ಶೈಲಜಾ ಅಂದರೆ ಬಹುಶಃ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಅದೇ ‘ಶೈಲಜಾ ಟೀಚರ್’ ಎಂದರೆ ಸಾಕು, ಕೇರಳ ಮಾತ್ರವಲ್ಲ, ಇಡೀ ದೇಶದ ಜನರ ಕಣ್ಣು ಮುಂದೆ ಅವರ ಮುಖ ಸುಳಿಯುತ್ತದೆ. ಇಡೀ ಜಗತ್ತೇ ಕೊರೊನಾ ವಿರುದ್ಧ ಸೆಣೆಸಾಡುತ್ತಿರುವಾಗ ಕೇರಳದ ಆರೋಗ್ಯ ಮತ್ತು ಸಾಮಾಜಿಕ […]