
ಬೇಡಿಕೆ ಹೆಚ್ಚಿಸುವುದೇ ಈಗ ಸರಕಾರದ ಮುಂದಿರುವ ಸವಾಲು. ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲವಾದರೆ ಎಲ್ಲ ಬಗೆಯ ಉದ್ಯಮಗಳೂ ಕುಸಿದುಬೀಳುತ್ತವೆ. ತಜ್ಞರ ಸಲಹೆಗಳು ಮತ್ತು ಸರಕಾರದ ಪ್ಯಾಕೇಜ್ ಕೂಡ ಈ ನಿಟ್ಟಿನಲ್ಲಿದೆ. ಬೇಡಿಕೆ ಸೃಷ್ಟಿ ಹೇಗೆ? ಬೇಡಿಕೆ ಹೆಚ್ಚಳ ಅಗತ್ಯ. ಎಲ್ಲಬಗೆಯ ಮಾರುಕಟ್ಟೆಗಳೂ ಬೇಡಿಕೆಯ ಮೇಲೆ ನಿಂತಿವೆ. ಲಾಕ್ಡೌನ್ ಬಳಿಕ ಉತ್ಪಾದನೆ ನಡೆಸಲು ಎಲ್ಲ ಉದ್ಯಮಗಳೂ ಕಾತರವಾಗಿವೆ. ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರುವ ಕಂಪನಿಗಳು ದರಗಳಲ್ಲಿ ಕಡಿತ ಘೋಷಿಸಿವೆ. ಕೃಷಿ ಉತ್ಪನ್ನಗಳು, ಆಹಾರಧಾನ್ಯಗಳು ಸುಗ್ಗಿಯ ಬಳಿಕ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿವೆ. […]