ಪಿಒಕೆ ಗಡಿದಾಟಿ ಹೋಗಿ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ದಿಟ್ಟಕ್ರಮದಿಂದಾಗಿ ಕೇಂದ್ರ ಸರ್ಕಾರದ ಮೇಲೆ ಜನರಲ್ಲಿ ಮೆಚ್ಚುಗೆ ಮೂಡಿತ್ತು. ಇದೀಗ ಕಪ್ಪುಹಣದ ಮೇಲೆ ನಡೆದ ಸರ್ಜಿಕಲ್ ದಾಳಿ ಸರ್ಕಾರದ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಇದು ವಿಪಕ್ಷಗಳವರ ನಿದ್ದೆಗಡಿಸಿದೆ ಎಂಬುದು ಸ್ಪಷ್ಟ. ಭ್ರಷ್ಟಾಚಾರ ಕುರಿತ ಚರ್ಚೆ ಇಂದು ನಿನ್ನೆಯದಲ್ಲ. ಅದಕ್ಕೊಂದು ಸುದೀರ್ಘ ಇತಿಹಾಸವೇ ಇದೆ. ಅದರ ಸ್ವರೂಪಗಳೂ ಹಲವು. ಆದರೆ ಕಾಲಾಂತರದಲ್ಲಿ ಅದು ಲಂಚಸ್ವೀಕಾರಕ್ಕೆ ಸೀಮಿತವಾಗಿಬಿಟ್ಟಿದೆ ಅಷ್ಟೆ. ವಾಸ್ತವದಲ್ಲಿ ಭ್ರಷ್ಟಾಚಾರ ಎನ್ನುವುದು ಮನುಷ್ಯನ ಮಾನಸಿಕತೆಗೆ […]
Read More
ಘೋಷಣೆ ಮುಖ್ಯವೋ, ಆಚರಣೆ ಮುಖ್ಯವೋ ಎಂಬುದರ ಚಿಂತನ-ಮಂಥನ ನಡೆಸುವುದಾದರೆ ಆಮ್ ಆದ್ಮಿ ಪಕ್ಷದ ಪ್ರಣಾಳಿಕೆ ಮತ್ತು ಸುರೇಶ್ ಪ್ರಭು ಮಂಡಿಸಿರುವ ರೈಲ್ವೆ ಮುಂಗಡಪತ್ರ ಇವೆರಡೂ ಉತ್ತಮ ಸರಕಾಗುವುದರಲ್ಲಿ ಯಾವ ಅನುಮಾನವೂ ಇಲ್ಲ, ಅಲ್ಲವೇ? ರೈಲ್ವೆ ಮುಂಗಡಪತ್ರವೆಂಬ ನಿರೀಕ್ಷೆಗಳ ಗಂಟು ಈಗಷ್ಟೇ ಬಿಚ್ಚಿಕೊಂಡಿದೆ. ಇಂದು ಮಧ್ಯಾಹ್ನ ಕಳೆಯುವ ಹೊತ್ತಿಗೆ ಮೋದಿ ಸರ್ಕಾರದ ಪೂರ್ಣಪ್ರಮಾಣದ ಮೊದಲ ಸಾಮಾನ್ಯ ಬಜೆಟ್ ಕೂಡ ನಮ್ಮೆದುರು ಅನಾವರಣಗೊಳ್ಳುತ್ತದೆ. ಈ ಎರಡು ಬಜೆಟ್ಗಳೆಂಬ ವಾರ್ಷಿಕ ವಿಧಿವಿಧಾನಗಳ ಸಂದರ್ಭವನ್ನು ಬಳಸಿಕೊಂಡು `ರಾಜಕೀಯ ಪಕ್ಷಗಳ ಘೋಷಣೆಗಳು ಮತ್ತು ಆಚರಣೆಗಳ’ […]
Read More