
– 27 ಪೆಸ್ಟಿಸೈಡ್ಸ್ ನಿಷೇಧಕ್ಕೆ ಕೇಂದ್ರದ ಪ್ರಸ್ತಾಪ – ಪರ್ಯಾಯ ನಾಶಕಗಳು ದುಬಾರಿ ಆತಂಕ. ಕಿರಣ್ ಕುಮಾರ್ ಡಿ. ಕೆ ಬೆಂಗಳೂರು. ಹಲವು ದಶಕಗಳಿಂದ ಜನಪ್ರಿಯವಾಗಿರುವ ಹಾಗೂ ಪರಿಣಾಮಕಾರಿ ಫಲಿತಾಂಶ ನೀಡುತ್ತಿರುವ 27 ಕೀಟನಾಶಕಗಳ ನಿಷೇಧಕ್ಕೆ ಕೇಂದ್ರ ಸರಕಾರ ಕರಡು ಪ್ರಸ್ತಾವನೆ ಸಿದ್ಧಪಡಿಸಿದೆ. ಇವುಗಳಲ್ಲಿ ಹೆಚ್ಚಿನವು ಕಡಿಮೆ ಅಪಾಯಕಾರಿಯಾಗಿರುವ ಅಗ್ಗದ ಜನರಿಕ್ ಕೀಟನಾಶಕಗಳೇ ಆಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಅಧಿಕ ನಿರ್ವಹಣಾ ವೆಚ್ಚ ಹಾಗೂ ಬೆಳೆದ ಉತ್ಪನ್ನಗಳಿಗೆ ದರ ಕುಸಿತದಿಂದ ಹೈರಾಣಾಗಿರುವ ರೈತರು, ದುಬಾರಿ ದರ […]