
ಜಗತ್ತನ್ನೇ ಪೀಡಿಸುತ್ತಿರುವ ಕೊರೊನಾ ವೈರಸ್ಗೆ ಬ್ರಹ್ಮಾಸ್ತ್ರವಾಗಬಲ್ಲ ಲಸಿಕೆ ಸಂಶೋಧನೆಗೆ ವೇಗ ಬಂದಿದೆ. ಈ ವಾರ ಲಸಿಕೆ ಸಂಶೋಧನೆ ಮಾನವ ಪ್ರಯೋಗ ಹಂತ ತಲುಪಿದೆ. ಇದರ ಬಗ್ಗೆ ಒಂದಿಷ್ಟು ನೋಟ ಇಲ್ಲಿದೆ. ಯಾವುದೇ ರೋಗಕ್ಕೆ ಲಸಿಕೆ ಕಂಡುಹಿಡಿಯುವ ಪ್ರಕ್ರಿಯೆಯಲ್ಲಿ ಎರಡು ಮುಖ್ಯವಾದ ಹಂತಗಳು. 1. ಪ್ರಾಣಿಗಳ ಮೇಲಿನ ಪ್ರಯೋಗ. 2. ಮನುಷ್ಯರ ಮೇಲಿನ ಪ್ರಯೋಗ. ಸದ್ಯ ನೊವೆಲ್ ಕೊರೊನಾ ವೈರಸ್ ಲಸಿಕೆಯನ್ನು ಕಂಡುಹಿಡಿಯುವ ಪ್ರಯತ್ನ ಎರಡನೇ ಹಂತ ತಲುಪಿದೆ. ಮೊದಲ ಹಂತದಲ್ಲಿ ಕೋವಿಡ್-19ನ ದುರ್ಬಲ ವೈರಾಣುಗಳನ್ನು ಸಂಸ್ಕರಿಸಿ ಅದನ್ನು […]