
ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಅನೇಕ ಸವಾಲುಗಳನ್ನು ಸೃಷ್ಟಿಸಿದೆ. ಅದೇ ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವ ಜಾಣ್ಮೆ ನಮ್ಮದಾಗಬೇಕಿದೆ. ಕೊರೊನಾ ಸೈಡ್ ಎಫೆಕ್ಟ್ಗಳು ಹಲವು. ಆ ಪೈಕಿ ಕೆಲವು ನಕಾರಾತ್ಮಕವಾಗಿದ್ದರೆ, ಮತ್ತೆ ಕೆಲವು ಸಕಾರಾತ್ಮಕವಾಗಿವೆ. ಸೋಂಕಿನ ಪರಿಣಾಮ ಅನಾರೋಗ್ಯ, ಸಾವು ನಕಾರಾತ್ಮಕ ಎನಿಸಿಕೊಂಡರೆ, ಜನರಲ್ಲಿ ವೈಯಕ್ತಿಕ ಆರೋಗ್ಯ, ಸ್ವಚ್ಛತೆ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಜ್ಞೆ ಮೂಡುತ್ತಿದೆ. ಇದು ಸಕಾರಾತ್ಮಕ ಬದಲಾವಣೆಗೆ ಸಾಕ್ಷಿ. ಇದರ ಜೊತೆಗೆ ಕೊರೊನಾ ಭೀತಿಯಿಂದಾಗಿ ಹಲವು ಪರಿಣಾಮಗಳ ವೈಯಕ್ತಿಕ ಮತ್ತು ಸಾಮಾಜಿಕ, ಆರ್ಥಿಕವಾಗಿಯೂ ಸವಾಲುಗಳನ್ನು […]