
ಗುಜರಾತ್ ಇರಲಿ, ಹಿಮಾಚಲವಿರಲಿ ಅಥವಾ ಕರ್ನಾಟಕವೇ ಇರಲಿ, ರಾಷ್ಟ್ರ ರಾಜಕಾರಣದ ಟ್ರೆಂಡ್ ಬಿಟ್ಟು ಫಲಿತಾಂಶ ಬೇರೆ ಆಗಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಸಮರ್ಥ ಪರ್ಯಾಯವನ್ನು ಬಿಂಬಿಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ಅದು ಮುಂದುವರಿಯುತ್ತಲೇ ಇರುತ್ತದೆ. ಕಳೆದೊಂದು ವರ್ಷದಿಂದ ಕಾಡುತ್ತಿದ್ದ ಗುಜರಾತ್ ಚುನಾವಣೆ ಎಂಬ ಗುಮ್ಮ ಕರಗಿ ಮೂವತ್ತಾರು ಗಂಟೆ ಕಳೆದಿದೆ. ಚುನಾವಣಾಪೂರ್ವ ಸಮೀಕ್ಷೆ, ಮತಗಟ್ಟೆ ಸಮೀಕ್ಷೆಗಳೆಂಬ ಅಬ್ಬರಗಳೂ ತಣ್ಣಗಾಗಿ ಸೋಮವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಸಿಗುವ ಖಚಿತ ಟ್ರೆಂಡ್ನ ಧ್ಯಾನದಲ್ಲಿ ಎಲ್ಲರೂ ಮುಳುಗಿದ್ದಾರೆ. ಈ ಹೊತ್ತಿನಲ್ಲಿ ನಮ್ಮ ಮನದಲ್ಲಿ ಮೂಡಬಹುದಾದ ಆಲೋಚನೆಗಳೇನು […]