
ಹೀಗೊಂದು ಕಥೆ…ಸಾವಿಲ್ಲದ ಮನೆಯಿಂದ ಸಾಸಿವೆ ಕಾಳು ತೆಗೆದುಕೊಂಡು ಬಾ ಎಂದು ಬುದ್ಧ ಕಿಸಾಗೌತಮಿಗೆ ಹೇಳಿದ ಕಥೆಯ ರೀತಿಯಲ್ಲಿರುವ ಇನ್ನೊಂದು ಕಥೆಯಿದು. ಒಂದಾನೊಂದು ಕಾಲದಲ್ಲಿ ಬಲೇ ಪ್ರಖ್ಯಾತನಾದ ಓರ್ವ ರಾಜ ಇದ್ದ. ಅಧಿಕಾರ, ಐಶ್ವರ್ಯ, ಆರೋಗ್ಯ ಎಲ್ಲವೂ ಅವನಲ್ಲಿ ಇತ್ತು. ಅಪಾರ ಪ್ರಜಾ ಬೆಂಬಲವೂ ಇತ್ತು. ವಿರೋಧಿಗಳಿಗೂ ಆತನೆಂದರೆ ಒಂದು ತೆರನಾದ ಭಯ. ಕಾಲಕಾಲಕ್ಕೆ ಮಳೆ ಬೆಳೆ ಆಗಿ ರಾಜ್ಯ ಸುಭಿಕ್ಷ ವಾಗಿತ್ತು. ಇಷ್ಟಾದರೂ ರಾಜನಿಗೆ ನೆಮ್ಮದಿ ಎಂಬುದಿರಲಿಲ್ಲ. ಸದಾ ದುಃಖ, ಕೊರಗಿನಲ್ಲೇ ಇರುತ್ತಿದ್ದ. ಮನೋ ಸಂತೋಷ ಅರಸಿಕೊಂಡು […]