ಸಿದ್ದರಾಮಯ್ಯ ಕುರ್ಚಿ ಭದ್ರ ಮಾಡಿಕೊಳ್ಳಲು ಇತ್ತೀಚಿನ ಪರಿಷತ್ ಚುನಾವಣೆಯೂ ಅನುಕೂಲಕ್ಕೆ ಬಂತು. ಅದರ ಜೊತೆಗೆ ಮುನಿಯಪ್ಪ, ಮೊಯ್ಲಿ, ಪರಮೇಶ್ವರ್, ಖರ್ಗೆ ತವರಲ್ಲಿ ಕಾಂಗ್ರೆಸ್ಗೆ ಆದ ಹಿನ್ನಡೆ ದಲಿತ ಸಿಎಂ ಗದ್ದಲವನ್ನು ಬದಿಗೆ ಸರಿಸಿತು.ಒಮ್ಮೊಮ್ಮೆ ಅನ್ನಿಸಿಬಿಡುತ್ತದೆ ಹೀಗೂ ಉಂಟೇ ಅಂತ! ರಾಜಕೀಯದಲ್ಲಾದರೆ ಜಾತಿಗೀತಿ ಲಾಬಿ ಎಲ್ಲ ಮಾಮೂಲು. ಬರಬರುತ್ತ ಅದು ಹೆಚ್ಚಾಗುತ್ತ ಹೋಗುತ್ತದೆಯೇ ಹೊರತೂ ಕಡಿಮೆ ಆಗುವ ಲಕ್ಷಣಗಳು ಯಾವ ರೀತಿಯಿಂದ ನೋಡಿದರೂ ಕಾಣಿಸುತ್ತಿಲ್ಲ. ಆದರೆ ನಮಗೆ ಅಚ್ಚರಿ ಆಗುವುದು ಪ್ರತಿಷ್ಠಿತ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕಾತಿ ಸಂದರ್ಭದಲ್ಲೂ […]