ಜನರು ಸದಾ ಪರಿವರ್ತನೆ, ಸುಧಾರಣೆಯ ಬೆನ್ನುಹತ್ತಿ ಹುಡುಕುತ್ತಿರುತ್ತಾರೆ. ಅದರ ಲಾಭ ಯಾರೋ ಕೆಲವರಿಗೆ ಆಗುತ್ತದೆ. ಈ ಹುಡುಕಾಟ, ಆಯ್ಕೆ ಬದಲಾವಣೆಯ ಜಂಜಾಟದಲ್ಲಿ ಒಂದು ತಲೆಮಾರೇ ಕಳೆದುಹೋಗುವುದೂ ಇದೆ. ಇದು ಬಹಳ ದುಬಾರಿ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಭೂತಪೂರ್ವ ವಿಕ್ರಮ ಸಾಧಿಸಿ ಹತ್ತಿರ ಹತ್ತಿರ ತಿಂಗಳಾಗುತ್ತ ಬಂತು. ಎಷ್ಟು ವಿಚಿತ್ರ ನೋಡಿ, ಈ ಒಂದೇ ತಿಂಗಳೊಳಗೆ ನಾವು ಎರಡು ಪರಸ್ಪರ ವಿರುದ್ಧದ ಮತ್ತು ವಿರೋಧಾಭಾಸದ ಬೆಳವಣಿಗೆಗೆ ಸಾಕ್ಷಿಯಾಗುತ್ತಿದ್ದೇವೆ! ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ನಿಚ್ಚಳ ಬಹುಮತ ಪಡೆಯುತ್ತದೆ […]