
– ಎನ್ ರವಿಶಂಕರ್. ದಿಗ್ಬಂಧನ 3.0 ಮುಗಿದು, ನಾಲ್ಕನೆಯದನ್ನು ಎದುರುಗೊಳ್ಳುತ್ತಿರುವ ಹೊತ್ತಿನಲ್ಲಿ ಕೊರೊನಾ ವಿರುದ್ಧದ ನಮ್ಮ ಹೋರಾಟದ ಪರಿಭಾಷೆ ಬದಲಾಗಿದೆ. ಕೊರೊನಾ ತೊಲಗಿಸೋಣ, ಹೊಡೆದೋಡಿಸೋಣ, ಬಗ್ಗು ಬಡಿಯೋಣ, ನಿಗ್ರಹಿಸೋಣ ಎಂಬಿತ್ಯಾದಿಯಾದ ಈವರೆಗೂ ಇದ್ದ ‘ಸಮರದ ಭಾಷೆ’ ಬದಲಾಗಿ, ಹೊಂದಾಣಿಕೆಯ ಭಾಷೆಗೆ ದಾರಿ ಮಾಡಿಕೊಟ್ಟಿದೆ. ನಾವು ಈ ವೈರಸ್ನೊಡನೆ ಹೊಂದಿಕೊಂಡು ಬಾಳು ಕಟ್ಟಿಕೊಳ್ಳಬೇಕು. ಇದು ನಮ್ಮೊಡನೆಯೇ ಬಹುಕಾಲ ಇರುತ್ತದೆ ಎನ್ನುವ ಪರಿಸ್ಥಿತಿಗೆ ಒಗ್ಗಿಕೊಂಡು, ನಮ್ಮ ಜೀವನಶೈಲಿಯಲ್ಲಿ ಅದಕ್ಕನುಗುಣವಾದ ಬದಲಾವಣೆಗಳನ್ನು ತಂದುಕೊಳ್ಳಬೇಕು. ಹೀಗೆ, ಬಿಕ್ಕಟ್ಟಿನಲ್ಲಿ ಬದಲಾಗುತ್ತಿರುವ ಭಾಷ್ಯವನ್ನು ಗಮನಿಸುತ್ತಾ, ಇಡೀ […]