ಅಂತರಿಕ್ಷವೇರಿದ ಮೊದಲ ಖಾಸಗಿ ತೇರು

– ಸುಧೀಂದ್ರ ಹಾಲ್ದೊಡ್ಡೇರಿ.  ಬಸ್ಸಿರಲಿ, ವಿಮಾನವಿರಲಿ ಸಾರಿಗೆ ಸೇವೆ ‘ಖಾಸಗಿ’ ಎಂದರೆ ನಮ್ಮ ಜನರಿಗೆ ರೋಮಾಂಚನ. ಖಾಸಗಿಯೆಂದರೆ ಸೇವೆ ಉತ್ಕೃಷ್ಟವಾಗಿರಲೇಬೇಕು ಎಂಬ ನಿರೀಕ್ಷೆ. ಈ ವಿಷಯದಲ್ಲಿ ಅಮೆರಿಕವೂ ಹೊರತಲ್ಲ. ಮೊನ್ನೆ ಶನಿವಾರ ರಾತ್ರಿ ಫ್ಲಾರಿಡಾದ ಕೇಪ್‌ ಕ್ಯಾನವೆರಲ್‌ನಲ್ಲಿ ಲಕ್ಷಾಂತರ ಮಂದಿ ನೆರೆದಿದ್ದರು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ನೂರಾರು ನೌಕೆಗಳನ್ನು ಬಾಹ್ಯಾಕಾಶಕ್ಕೆ ತೂರಿದೆ. ಅವೆಲ್ಲದರ ಉಡ್ಡಯನ ಸಮಯದಲ್ಲಿ ಇಷ್ಟೊಂದು ಜನ ಜಮಾಯಿಸಿರಲಿಲ್ಲ. ಆದರೆ, ಈ ಬಾರಿ ಸಾರ್ವಜನಿಕ ಪ್ರವೇಶಕ್ಕೆ ನೂರೆಂಟು ನಿರ್ಬಂಧಗಳಿದ್ದರೂ ಜನ ಕಾದಿದ್ದರು. ಮಾಧ್ಯಮ ಪ್ರತಿನಿಧಿಗಳು, […]

Read More

ಸವಾಲುಗಳ ನಡುವೆ ಮೋದಿ ಸೆಕೆಂಡ್‌ ಇನಿಂಗ್ಸ್‌ ಸಾಧನೆ

ಕೊರೊನಾದಿಂದ ನೆಲಕಚ್ಚಿದ ಆರ್ಥಿಕತೆಯ ನಡುವೆಯೂ ಆತ್ಮನಿರ್ಭರ ಭಾರತದ ಕನಸಿನ ಹಾದಿಯಲ್ಲಿ. – ಹರಿಪ್ರಕಾಶ್‌ ಕೋಣೆಮನೆ. ಎಷ್ಟು ಬೇಗ ದಿನಗಳು ಉರುಳಿ ಹೋದವು! ಹದಿನೈದು ವರ್ಷದಷ್ಟು ದೀರ್ಘ ಕಾಲ ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ರಾಷ್ಟ್ರ ರಾಜಕಾರಣ ಮುಖ್ಯ ಭೂಮಿಕೆಗೆ ಬರುತ್ತಾರೆಂಬ ಊಹಾತ್ಮಕ ಚರ್ಚೆ ಶುರುವಾದದ್ದು, ಅದರ ಬೆನ್ನಲ್ಲೇ 2014ರ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡದ್ದು, ಮತ್ತೆ ಕೆಲವೇ ದಿನಗಳಲ್ಲಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಹೊರ ಹೊಮ್ಮಿದ್ದೆಲ್ಲ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. […]

Read More

ಚೀನಾ ಕಾಯಿದೆಗೆ ಊಹೂಂ ಅನ್ನುತ್ತಿದೆ ಹಾಂಕಾಂಗ್

ಹಾಂಕಾಂಗ್‌ನ ಸ್ವಾಯತ್ತತೆಯನ್ನು ಸಂಪೂರ್ಣ ನಿರಾಕರಿಸಿ, ತನ್ನ ಸರ್ವಾಧಿಪತ್ಯವನ್ನು ಅಲ್ಲಿ ಸ್ಥಾಪಿಸಲು ಚೀನಾ ಮುಂದಾಗಿದೆ. ಇದು ಹಾಂಕಾಂಗ್‌ನಲ್ಲಿ ಇನ್ನೊಂದು ಸುತ್ತಿನ ಪ್ರತಿರೋಧದ ಅಲೆ ಹಾಗೂ ಅಮೆರಿಕದೊಂದಿಗಿನ ಸಂಬಂಧದಲ್ಲಿ ಮತ್ತಷ್ಟು ಬಿರುಕು ಮೂಡಿಸಲಿದೆ. ಕಾಯಿದೆಯಲ್ಲಿ ಏನಿದೆ? ಹೊಸ ಕಾಯಿದೆಯ ಬಗ್ಗೆ ಚೀನಾ ಹೇಳುವ ಪ್ರಕಾರ ಅದು ‘ಒಂದೇ ದೇಶ, ಎರಡು ಆಡಳಿತ’ ಪದ್ಧತಿಯನ್ನು ಬಲಪಡಿಸಲಿದೆ. ಆದರೆ ಇದು ಸಾಧ್ಯವಿಲ್ಲ. ಯಾಕೆಂದರೆ, ಹೊಸ ಕಾಯಿದೆಯಲ್ಲಿ ಹಾಂಕಾಂಗ್ ಎಲ್ಲ ನಿರ್ಣಯಗಳಿಗೂ ಚೀನಾದ ಸರಕಾರಕ್ಕೆ ಕಾಯಬೇಕಾಗಿದೆ. ಹೊಸ ಕಾಯಿದೆಯ ಪ್ರಕಾರ ದೇಶದ ಸ್ವಾಯತ್ತತೆಗಾಗಿ ಒತ್ತಾಯಿಸುವುದು, […]

Read More

ಚೀನಾಗೆ ಜಾಗತಿಕ ಮುಖಭಂಗ – ಮತ್ತೆ ಗಡಿ ಕ್ಯಾತೆಯ ಹಿಂದಿನ ನಿಜ ಮರ್ಮ

ಏಷ್ಯಾದ ‘ದೊಡ್ಡಣ್ಣ’ನಾಗುವ ಚಪಲಕ್ಕೆ ಬಿದ್ದಿರುವ ಚೀನಾ, ಭಾರತದ ಜೊತೆಗೆ ಗಡಿ ವಿಷಯದಲ್ಲಿ ಸದಾ ಜಗಳ ತೆಗೆಯುವ ತನ್ನ ಚಾಳಿಯನ್ನು ಮುಂದುವರೆಸಿದೆ. ಇಡೀ ಜಗತ್ತೇ ಕೊರೊನಾದಿಂದ ತತ್ತರಿಸಿರುವ ಹೊತ್ತಿನಲ್ಲಿ ಚೀನಾ ಮಾತ್ರ ಭಾರತದ ಜೊತೆಗೆ ಗಡಿ ಕ್ಯಾತೆಗೆ ಮುಂದಾಗಿದೆ ಎಂದರೆ ಆ ದೇಶದ ಅಂತರಾಳದ ಉದ್ದೇಶ ಎಲ್ಲರಿಗೂ ಅರ್ಥವಾಗುವಂಥದ್ದೇನೆ. ಕೊರೊನಾ ವೈರಸ್ ಚೀನ ನಿರ್ಮಿತ ಎಂಬುದು ಅಮೆರಿಕ ಆದಿಯಾಗಿ ಹಲವು ರಾಷ್ಟ್ರಗಳ ಅನುಮಾನ. ಕೊರೊನಾ ವೈರಸ್ಸಿಗೆ ಸಂಬಂಧಿಸಿದ ಮಾಹಿತಿಯನ್ನು ಆ ದೇಶ ಮುಚ್ಚಿಟ್ಟಿದ್ದು ಅನುಮಾನಕ್ಕೆ ಇಂಬು ನೀಡುವಂತಿದೆ. ಆ […]

Read More

ಅಮೆರಿಕ ಚೀನಾ ಶೀತಲ ಸಮರ ಆರಂಭವೇ?

ಕಳೆದ ಶತಮಾನದ ಕೊನೆಯಲ್ಲಿ, ಸುಮಾರು ಐವತ್ತು ವರ್ಷಗಳ ಕಾಲ ಜಗತ್ತು ಅಮೆರಿಕ- ಸೋವಿಯತ್‌ ರಷ್ಯದ ಶೀತಲ ಸಮರದಿಂದ ಬಳಲಿತ್ತು. ಈಗ ಮತ್ತೊಮ್ಮೆ ಚೀನಾ ಹಾಗೂ ಅಮೆರಿಕದ ನಡುವೆ ತಿಕ್ಕಾಟ ಉಲ್ಬಣಕ್ಕೆ ಹೋಗುತ್ತಿದ್ದು, ಇನ್ನೊಂದು ಶೀತಲ ಸಮರ ಆರಂಭವಾಗಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಶೀತಲ ಸಮರ ಅಂದರೇನು? ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ, ಅಂದರೆ ಸುಮಾರು 1947ರಲ್ಲಿ ಎರಡನೇ ಮಹಾಯುದ್ಧ ನಿಂತ ಬಳಿಕ, ಅಮೆರಿಕ ಹಾಗೂ ಸೋವಿಯತ್‌ ರಷ್ಯಗಳ ನಡುವೆ ರಾಜಕೀಯ- ಆರ್ಥಿಕ ತಿಕ್ಕಾಟ ಆರಂಭವಾಯಿತು. ಮಹಾಯುದ್ಧದ ವೇಳೆ […]

Read More

ಧ್ವನಿವರ್ಧಕ ನಿಯಂತ್ರಣಕ್ಕೆ ಕಠಿಣ ಕ್ರಮ ಅಗತ್ಯ

– ಡಾ. ಮಲ್ಲಿಕಾರ್ಜುನ ಗುಮ್ಮಗೋಳ. ಅನ್ಯರಿಗೆ ಇರಸುಮುರಸು ಆಗುವ ಧ್ವನಿವರ್ಧಕ ಬಳಕೆಯನ್ನು ಮಸೀದಿಗಳು ನಿಲ್ಲಿಸಬೇಕು ಎಂದು ಲೇಖಕ, ಚಿತ್ರ ಸಾಹಿತಿ ಜಾವೇದ್ ಅಕ್ತರ್ ಟ್ವೀಟ್ ಮಾಡಿದ್ದಾರೆ. ‘‘ಯಾವ ಧರ್ಮವೂ ಧ್ವನಿವರ್ಧಕದ ಮೂಲಕ ಪ್ರಾರ್ಥನೆ ಮಾಡಬೇಕೆಂದು ಪ್ರತಿಪಾದಿಸುವುದಿಲ್ಲ. ಆದ್ದರಿಂದ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಬೇಕು,’’ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶದ ಬೆನ್ನಲ್ಲೆ ಬಂದಿರುವ ಈ ಟ್ವೀಟ್‌ಗೆ ಹೆಚ್ಚಿನ ಮಹತ್ವವಿದೆ. ಅದೇ ಸಮುದಾಯದ ಮತಧರ್ಮದ ಬಗ್ಗೆ ಹೆಚ್ಚು ತಿಳಿದುಕೊಂಡ ವ್ಯಕ್ತಿ, ಈ ಆಚರಣೆಗಳಲ್ಲಿ ಅರ್ಥವಿಲ್ಲ ಎಂದು ಹೇಳುವುದರಲ್ಲಿ ಅರ್ಥವಿದೆ. ಧಾರ್ಮಿಕ […]

Read More

ಸ್ವದೇಶಿ ಭಾರತಕ್ಕೆ ಕೊರೊನಾ ಪ್ರೇರಣೆಯಾಗಲಿ

– ನಾ. ತಿಪ್ಪೇಸ್ವಾಮಿ. ಕೊರೊನಾ ಮಹಾಮಾರಿಯಿಂದಾಗಿ ಅಮೆರಿಕ, ರಷ್ಯಾ, ಚೀನಾ, ಸ್ಪೇನ್ ಮುಂತಾದ ಶ್ರೀಮಂತ ರಾಷ್ಟ್ರಗಳು ತತ್ತರಿಸಿ ಹೋಗಿವೆ. ಅತ್ಯಧಿಕ ಸಂಖ್ಯೆಯಲ್ಲಿಸಾವು ನೋವುಗಳು ಸಂಭವಿಸಿವೆ. ಈ ವೈರಸ್ ಭಾರತದಲ್ಲಿಯೂ ಹರಡಿದೆ. ಆದರೆ ಅಷ್ಟೊಂದು ದೊಡ್ಡ ಪ್ರಮಾಣದ ಪ್ರಾಣಹಾನಿಯನ್ನು ಮಾಡಲಿಲ್ಲ. ಇದಕ್ಕೆ ಮುಖ್ಯ ಕಾರಣ ಭಾರತದ ನಾಯಕತ್ವ ತೆಗೆದುಕೊಂಡ ನಿರ್ಣಯಗಳು ಹಾಗೂ ಈ ದೇಶದಲ್ಲಿಆಚರಣೆಯಲ್ಲಿರುವ ರೀತಿ ನೀತಿಗಳು. ಪ್ರಧಾನಿ ಮೋದಿ ಮಾ.22ರಂದು 21ದಿನಗಳ ಕಾಲ ಲಾಕ್‌ಡೌನ್‌ ಘೋಷಿಸಿದರು. ಇದು ಅನೇಕರನ್ನು ದಿಗ್ಭ್ರಮೆಗೊಳಿಸಿತು. 130 ಕೋಟಿ ಜನರಿರುವ ಭಾರತದಲ್ಲಿ ಅನೇಕ […]

Read More

ಕೋವಿಡ್ ಲಸಿಕೆ ಮನುಷ್ಯನ ಮೇಲೆ ಪ್ರಯೋಗಕ್ಕೆ ಓಕೆ

ಜಗತ್ತನ್ನೇ ಪೀಡಿಸುತ್ತಿರುವ ಕೊರೊನಾ ವೈರಸ್‌ಗೆ ಬ್ರಹ್ಮಾಸ್ತ್ರವಾಗಬಲ್ಲ ಲಸಿಕೆ ಸಂಶೋಧನೆಗೆ ವೇಗ ಬಂದಿದೆ. ಈ ವಾರ ಲಸಿಕೆ ಸಂಶೋಧನೆ ಮಾನವ ಪ್ರಯೋಗ ಹಂತ ತಲುಪಿದೆ. ಇದರ ಬಗ್ಗೆ ಒಂದಿಷ್ಟು ನೋಟ ಇಲ್ಲಿದೆ. ಯಾವುದೇ ರೋಗಕ್ಕೆ ಲಸಿಕೆ ಕಂಡುಹಿಡಿಯುವ ಪ್ರಕ್ರಿಯೆಯಲ್ಲಿ ಎರಡು ಮುಖ್ಯವಾದ ಹಂತಗಳು. 1. ಪ್ರಾಣಿಗಳ ಮೇಲಿನ ಪ್ರಯೋಗ. 2. ಮನುಷ್ಯರ ಮೇಲಿನ ಪ್ರಯೋಗ. ಸದ್ಯ ನೊವೆಲ್ ಕೊರೊನಾ ವೈರಸ್ ಲಸಿಕೆಯನ್ನು ಕಂಡುಹಿಡಿಯುವ ಪ್ರಯತ್ನ ಎರಡನೇ ಹಂತ ತಲುಪಿದೆ. ಮೊದಲ ಹಂತದಲ್ಲಿ ಕೋವಿಡ್-19ನ ದುರ್ಬಲ ವೈರಾಣುಗಳನ್ನು ಸಂಸ್ಕರಿಸಿ ಅದನ್ನು […]

Read More

ಈ ಹೊತ್ತಿನ ಎಲ್ಲ ಸವಾಲುಗಳಿಗೆ ಅಂಬೇಡ್ಕರ್ ಪರಿಹಾರ

ಈ ಹೊತ್ತಿನ ಎಲ್ಲ ಸವಾಲುಗಳಿಗೆ ಅಂಬೇಡ್ಕರ್ ಪರಿಹಾರ – ದಲಿತರು ಮತ ಅಸವನ್ನು ಸರಿಯಾಗಿ ಬಳಸಿಕೊಳ್ಳದ ಹೊರತು ಅಂಬೇಡ್ಕರ್ ಬಯಸಿದ ಸ್ವಾತಂತ್ರ್ಯ ಸಿಗದು. – ಬಿ. ಸೋಮಶೇಖರ್.   ಸಾವಿರಾರು ಶ್ರೇಷ್ಠ ವ್ಯಕ್ತಿಗಳು ಜಗತ್ತಿನ ಇತಿಹಾಸ ನಿರ್ಮಿಸಿದ್ದಾರೆ. ಒಂದು ದೇಶದ ಇತಿಹಾಸವನ್ನು ನೂರಾರು ಮಂದಿ ಶ್ರೇಷ್ಠ ವ್ಯಕ್ತಿಗಳು ನಿರ್ಮಾಣ ಮಾಡುತ್ತಾರೆ. ಇಂಥ ಇತಿಹಾಸ ಶಿಲ್ಪಿಗಳಲ್ಲಿ ಹೆಚ್ಚಿನವರು ನಮಗೆ ಇತಿಹಾಸದ ಪುಸ್ತಕಗಳನ್ನು ಓದುವಾಗ ನೆನಪಿಗೆ ಬರುತ್ತಾರೆ, ಮತ್ತೆ ಮರೆತುಹೋಗುತ್ತಾರೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಇದಕ್ಕೊಂದು ಅಪವಾದ. ಅವರು ಪ್ರಜ್ಞಾ […]

Read More

ನಮ್ಮ ಕಾಲಬುಡಕ್ಕೆ ಬಂದಾಗಲೇ ಕಷ್ಟ ಗೊತ್ತಾಗೋದು

ಧರ್ಮದ ಹೆಸರಿನಲ್ಲಿ ಹಾದಿ ತಪ್ಪಿರುವ ಒಂದು ವರ್ಗದ ಕೆಲವರನ್ನು ಸರಿದಾರಿಗೆ ತರಲು ಸಂಬಂಧಿಸಿದ ಧಾರ್ವಿುಕ ನಾಯಕರು ಯಾಕೆ ಪ್ರಯತ್ನಿಸಬಾರದು? ಕೆಲ ಮತಾಂಧರು ಮಾಡುವ ದುಷ್ಟ ಕಾರ್ಯದಿಂದ ಒಂದು ಉದಾತ್ತ ಧರ್ಮಕ್ಕೆ ಕಳಂಕ ಬರುತ್ತಿರುವುದನ್ನು ತಡೆಯುವುದಕ್ಕಾದರೂ ಧಾರ್ವಿುಕ ನಾಯಕರೆಲ್ಲ ಒಕ್ಕೊರಲ ಧ್ವನಿ ಮೊಳಗಿಸಿದರೆ ಒಳಿತಾಗಬಹುದು.  ಅಮೆರಿಕದಲ್ಲಿ ಗುಂಡಿನ ದಾಳಿ ನಡೆಯುವುದು ಹೊಸತೇನಲ್ಲ. ಪ್ರತಿ ವರ್ಷವೂ ಅಲ್ಲಿ ಅಂಥ ಹಲವು ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಹತ್ತಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಜಗತ್ತಿಗೆಲ್ಲ ‘ದೊಡ್ಡಣ್ಣ’ ಎಂದು ಬೀಗುವ ಆ ದೇಶಕ್ಕೆ ಇದು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top