
ಇದನ್ನು ಅಮೆರಿಕದ ಪ್ರಜಾತಂತ್ರದ ಸೊಬಗು ಅಂತ ಕರೆಯೋಣವಾ, ಇಲ್ಲ ಅಮೆರಿಕದ ರಾಜಕೀಯ ಇತಿಹಾಸದಲ್ಲಿನ ಕಪ್ಪುಚುಕ್ಕೆ ಅನ್ನೋಣವಾ? ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಆಯ್ಕೆಯೇ ಮಹಾ ಮೋಸ ಎಂಬ ಜಪವನ್ನೇ ಮಾಡುತ್ತಿದ್ದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ ಡಿಸಿಯಲ್ಲಿರಿಪಬ್ಲಿಕನ್ ಪಕ್ಷ ದ ಬೆಂಬಲಿಗರ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವ ವೇಳೆ, ‘‘ಹೋಗಿ, ಪ್ರತಿಭಟಿಸಿ, ನುಗ್ಗಿ, ಸಂಸತ್ತನ್ನು ವಶಕ್ಕೆ ಪಡೆದುಕೊಳ್ಳಿ,’’ ಎಂಬ ಮಾತುಗಳಿಂದ ಉದ್ರೇಕಿತರಾದ ರಿಪಬ್ಲಿಕನ್ ಪಕ್ಷದ ಪುಂಡ ಬೆಂಬಲಿಗರು ಐತಿಹಾಸಿಕ ಕ್ಯಾಪಿಟಲ್ ಹಿಲ್ನಲ್ಲಿರುವ ಅಮೆರಿಕ […]