ಜಪಾನ್ನ ನೀತಿ, ಕಟ್ಟುಪಾಡುಗಳು ಭಾರತಕ್ಕೆ ಅಥವಾ ಇನ್ನಾವುದೇ ದೇಶಕ್ಕೆ ಅನ್ವಯವಾಗಲು ಸಾಧ್ಯವಿಲ್ಲ. ಆದರೆ, ಸತತವಾಗಿ ಭಯೋತ್ಪಾದನೆಯಿಂದ ನರಳುವ ನಮ್ಮ ದೇಶದಲ್ಲಿ ನಾವು ಮತ್ತು ಸರ್ಕಾರ ಕೆಲವೊಂದು ಸಂಗತಿಗಳನ್ನು ಗಂಭೀರವಾಗಿ ಆಲೋಚಿಸಿ ಅನುಸರಿಸಬಹುದು ಅನ್ನಿಸುತ್ತದೆ. ಸರ್ಕಾರಗಳು ಖಡಕ್ತನ ತೋರಿದರೆ ಎಂತಹ ಬದಲಾವಣೆ ಸಾಧ್ಯ ಎಂಬುದನ್ನು ನೀವೇ ನೋಡಿ. ಭಯೋತ್ಪಾದನೆ ದಮನಕ್ಕೆಂದೇ ಸ್ಥಾಪನೆಯಾದ ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಖದರಿಗೆ ಹೆದರಿ ಐಸಿಸ್ ಉಗ್ರರು ಸದ್ಯ ಭಾರತದ ಸಹವಾಸದಿಂದ ದೂರ ಇರಲು ತೀರ್ವನಿಸಿಬಿಟ್ಟಿದ್ದಾರಂತೆ! ಒಂದು ವಾರದ ಅವಧಿಯಲ್ಲಿ ಎರಡು ತದ್ವಿರುದ್ಧ ಬೆಳವಣಿಗೆಗಳು. […]