
ಕೊರೊನಾದಿಂದ ನೆಲಕಚ್ಚಿದ ಆರ್ಥಿಕತೆಯ ನಡುವೆಯೂ ಆತ್ಮನಿರ್ಭರ ಭಾರತದ ಕನಸಿನ ಹಾದಿಯಲ್ಲಿ. – ಹರಿಪ್ರಕಾಶ್ ಕೋಣೆಮನೆ. ಎಷ್ಟು ಬೇಗ ದಿನಗಳು ಉರುಳಿ ಹೋದವು! ಹದಿನೈದು ವರ್ಷದಷ್ಟು ದೀರ್ಘ ಕಾಲ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ರಾಷ್ಟ್ರ ರಾಜಕಾರಣ ಮುಖ್ಯ ಭೂಮಿಕೆಗೆ ಬರುತ್ತಾರೆಂಬ ಊಹಾತ್ಮಕ ಚರ್ಚೆ ಶುರುವಾದದ್ದು, ಅದರ ಬೆನ್ನಲ್ಲೇ 2014ರ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡದ್ದು, ಮತ್ತೆ ಕೆಲವೇ ದಿನಗಳಲ್ಲಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಹೊರ ಹೊಮ್ಮಿದ್ದೆಲ್ಲ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. […]