
– ಮಲ್ಲಿಕಾರ್ಜುನ ತಿಪ್ಪಾರ. ಲಾಕ್ಡೌನ್ನ ವೇಳೆ ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ಸಿದ್ಧವಾಗಿರುವ ಶ್ರಮಿಕ್ ರೈಲುಗಳ ವೆಚ್ಚವನ್ನು ಯಾರು ಭರಿಸಬೇಕು ಎಂದು ಸರಕಾರಗಳು ಕಚ್ಚಾಡುತ್ತಿರುವಾಗ, ಬಸ್ಗಳನ್ನು ರಾಜ್ಯದೊಳಗೆ ಬಿಡಬೇಕೋ ಬೇಡವೋ ಎಂದು ರಾಜಕಾರಣಿಗಳು ಪರಸ್ಪರ ಕೆಸರೆರಚಾಡುತ್ತಿರುವ ಸಂದರ್ಭದಲ್ಲೇ ಮುಂಬಯಿನಲ್ಲಿ ‘ಖಳನಾಯಕ’ರೊಬ್ಬರು ಸದ್ದಿಲ್ಲದೇ ಬಸ್ಗಳ ಮೂಲಕ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಿ ತಮ್ಮದು ‘ಶುದ್ಧ ಬಂಗಾರ’ದ ಹೃದಯ ಎಂಬುದನ್ನು ತೋರಿಸಿಕೊಟ್ಟರು! ಅವರು ಯಾರೆಂದು ಗೊತ್ತಾಗಿರಬಹುದು. ನಿಮ್ಮ ಊಹೆ ನಿಜ. ಅವರು ಬೇರೆ ಯಾರೂ ಅಲ್ಲ, ‘ವಿಲನ್’ […]