
ಕಳೆದ ಶತಮಾನದ ಕೊನೆಯಲ್ಲಿ, ಸುಮಾರು ಐವತ್ತು ವರ್ಷಗಳ ಕಾಲ ಜಗತ್ತು ಅಮೆರಿಕ- ಸೋವಿಯತ್ ರಷ್ಯದ ಶೀತಲ ಸಮರದಿಂದ ಬಳಲಿತ್ತು. ಈಗ ಮತ್ತೊಮ್ಮೆ ಚೀನಾ ಹಾಗೂ ಅಮೆರಿಕದ ನಡುವೆ ತಿಕ್ಕಾಟ ಉಲ್ಬಣಕ್ಕೆ ಹೋಗುತ್ತಿದ್ದು, ಇನ್ನೊಂದು ಶೀತಲ ಸಮರ ಆರಂಭವಾಗಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಶೀತಲ ಸಮರ ಅಂದರೇನು? ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ, ಅಂದರೆ ಸುಮಾರು 1947ರಲ್ಲಿ ಎರಡನೇ ಮಹಾಯುದ್ಧ ನಿಂತ ಬಳಿಕ, ಅಮೆರಿಕ ಹಾಗೂ ಸೋವಿಯತ್ ರಷ್ಯಗಳ ನಡುವೆ ರಾಜಕೀಯ- ಆರ್ಥಿಕ ತಿಕ್ಕಾಟ ಆರಂಭವಾಯಿತು. ಮಹಾಯುದ್ಧದ ವೇಳೆ […]