
ಕರ್ನಾಟಕ ಮಾತೆ ಭಾರತ ಜನನಿಯ ತನುಜಾತೆ ಎಂದ ಕುವೆಂಪು ಅವರನ್ನು ನೆನಪಿಸಿಕೊಳ್ಳೋಣ. -ಡಾ. ರೋಹಿಣಾಕ್ಷ ಶಿರ್ಲಾಲು. ಮೇಲ್ಸೇತುವೆಯೊಂದಕ್ಕೆ ಸ್ವಾತಂತ್ರ್ಯವೀರ ಸಾವರ್ಕರ್ ಹೆಸರು ಪ್ರಸ್ತಾಪಗೊಂಡಾಗ ಅವರು ಕನ್ನಡಿಗರಲ್ಲ, ಕರ್ನಾಟಕದೊಳಗೆ ಕನ್ನಡಿಗರ ಹೆಸರನ್ನೇ ಇಡಬೇಕು ಎಂದು ಆರಂಭಗೊಂಡ ವಾದ ‘ಮೊದಲು ನಾನು ಕನ್ನಡಿಗ, ನಂತರ ಭಾರತೀಯ, ಕರ್ನಾಟಕದಿಂದ ಭಾರತ’ ಎನ್ನುವ ಮಾತುಗಳಾಗಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ತಮ್ಮನ್ನು ತಾವು ಕನ್ನಡಪರ ಹೋರಾಟಗಾರರೆಂದು ಕರೆದುಕೊಳ್ಳುವ ಕೆಲವರು ತಮ್ಮ ಕನ್ನಡ ಹೋರಾಟದ ಮುಖವಾಣಿಯಂತೆ ಈ ಮಾತುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಹಾಗಾದರೆ ಕನ್ನಡದ […]