
ಒಂದು ವೇಳೆ ಮುಂಬಯಿಗೆ ‘ನಿಸರ್ಗ’ ಚಂಡಮಾರುತವೇನಾದರೂ ಅಪ್ಪಳಿಸಿದರೆ ಇತಿಹಾಸ ಸೃಷ್ಟಿಯಾಗಲಿದೆ. ಯಾಕೆಂದರೆ, 138 ವರ್ಷದ ಬಳಿಕ ಮುಂಬಯಿ ಮಹಾನಗರ ಚಂಡಮಾರುತವನ್ನು ಎದುರಿಸಲಿದೆ! ಕೊರೊನಾ ಸಂಕಟ ಅನುಭವಿಸುತ್ತಿರುವ ಮುಂಬಯಿಗೆ ‘ನಿಸರ್ಗ’ ಮತ್ತೊಂದು ಹೊಡೆತ ನೀಡುವಂತಿದೆ. ಈಗಾಗಲೇ ಮುಂಬಯಿ ನಗರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಚಂಡಮಾರುತವು ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿದ್ದು, ಅಂಫಾನ್ ಬಳಿಕ ದೇಶ ಎದುರಿಸುತ್ತಿರುವ ಎರಡನೇ ಚಂಡಮಾರುತವಾಗಿದೆ. ಆದರೆ, ಅದರಷ್ಟು ಪ್ರಭಾವಶಾಲಿಯಾಗಿಲ್ಲ. ಈ ಚಂಡಮಾರುತವು ಜೂನ್ 3ರಂದು ಉತ್ತರ ಮುಂಬಯಿಗೆ ಅಪ್ಪಳಿಸುವ ಸಾಧ್ಯತೆ ಇದೆ. ಮಹಾರಾಷ್ಟ್ರ ಕರಾವಳಿಯಲ್ಲಿ […]