
ಕೊರೊನಾ ಸೋಂಕಿನ ಕಾರಣದಿಂದ ಜಗತ್ತಿನೆಲ್ಲೆಡೆ ನಿಂತು ಹೋಗಿರುವ ಎಲ್ಲ ಬಗೆಯ ಆರ್ಥಿಕ ಚಟುವಟಿಕೆಗಳಿಂದಾಗಿ, ದೊಡ್ಡ ಪ್ರಮಾಣದಲ್ಲಿರುವ ಕಾರ್ಮಿಕ ವಲಯ ತತ್ತರಿಸುತ್ತಿದೆ. ಬಡವರು, ಕೆಳ ಮಧ್ಯಮವರ್ಗ ಹಾಗೂ ಮಧ್ಯಮವರ್ಗದಲ್ಲಿ ಹಂಚಿಹೋಗಿರುವ ಈ ಜನತೆಯ ಪಡಿಪಾಟಲು ಬಗ್ಗೆ ಈ ಕಾರ್ಮಿಕರ ದಿನ(ಮೇ 1) ಒಂದು ಚಿಂತನೆ. ದಿ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ಲೆಕ್ಕಾ ಹಾಕಿರುವಂತೆ, ಕೊರೊನಾ ವೈರಸ್ ಲಾಕ್ಡೌನ್ನಿಂದಾಗಿಯೇ ಇದುವರೆಗೆ ಕೆಲಸ ಕಳೆದುಕೊಂಡಿರುವವರ ಸಂಖ್ಯೆ 14 ಕೋಟಿ. ಈ ಬಿಕ್ಕಟ್ಟಿಗೆ ಮೊದಲು ನಿರುದ್ಯೋಗ ದರ 8 […]