ನಾಯಕತ್ವ ನಿರ್ಮಾಣಕ್ಕೆ ವೇದಿಕೆ

ಪ್ರತಿವರ್ಷ ನಡೆಯುವ ಈ ನಾಯಕತ್ವ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಪೈಕಿ ವಿವಿಧ ದೇಶ, ರಾಜ್ಯಗಳ 300 ಹೆಚ್ಚು ಮಂದಿ ಹಾಲಿ ಮತ್ತು ಮಾಜಿ ಸರ್ಕಾರಿ ಮುಖ್ಯಸ್ಥರೂ ಸೇರಿರುವುದು ಮತ್ತು ಐನೂರಕ್ಕೂ ಹೆಚ್ಚು ಮಂದಿ ವಿವಿಧ ದೇಶಗಳಲ್ಲಿ ರಾಜಕೀಯ, ಸಾಮಾಜಿಕ ಮತ್ತು ಖಾಸಗಿ ಉದ್ಯಮ ಕ್ಷೇತ್ರಗಳಲ್ಲಿ ಉತ್ತಮ ನಾಯಕತ್ವ ನೀಡಿದ ಖ್ಯಾತಿಗೆ ಪಾತ್ರರಾಗಿರುವುದು `ಅಮೆರಿಕ ನಾಯಕತ್ವ ವಿನಿಮಯ ಕಾರ್ಯಕ್ರಮ’ದ ವಿಶೇಷತೆಗಳಲ್ಲೊಂದು. ಇದೇ ಕಾರ್ಯಕ್ರದಲ್ಲಿ ಈ ಹಿಂದೆ ಪಾಲ್ಗೊಂಡ ಪ್ರತಿನಿಧಿಗಳಲ್ಲಿ ಹಲವರು ಪ್ರಪಂಚದ ನಾನಾ ದೇಶಗಳಲ್ಲಿ ಉನ್ನತ ಸರ್ಕಾರಿ ಅಧಿಕಾರಿಗಳಾಗಿ, ಉತ್ತಮ ಪತ್ರಿಕೋದ್ಯಮಿಗಳಾಗಿ, ಶೈಕ್ಷಣಿಕ ತಜ್ಞರಾಗಿ, ನ್ಯಾಯಾಧೀಶರಾಗಿ, ಆರ್ಥಿಕ ತಜ್ಞರಾಗಿ, ಪರಿಸರ ತಜ್ಞರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ತಮ್ಮ ತಮ್ಮ ದೇಶಗಳ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆಂದು ಅಮೆರಿಕ ಕಾನ್ಸುಲೇಟ್ ಜನರಲ್‍ನ ಪ್ರಕಟಣೆ ತಿಳಿಸಿದೆ.

– ಭಾರತದ ಇಬ್ಬರು ಪ್ರತಿನಿಧಿಗಳಲ್ಲಿ ಪೈಕಿ ಕರ್ನಾಟಕಕ್ಕೂ ಅವಕಾಶ
 
– ಅ.27 – ನ.15ರ ವರೆಗೆ ವಾಷಿಂಗ್ಟನ್ ಡಿಸಿಯಲ್ಲಿ ಸಮಾರಂಭ

HPK IN US

 
ಬೆಂಗಳೂರು: ಅಮೆರಿಕದಲ್ಲಿ ನಡೆಯುವ ಪ್ರತಿಷ್ಠಿತ ವಾರ್ಷಿಕ ನಾಯಕತ್ವ ವಿನಿಮಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು `ವಿಜಯವಾಣಿ’ ಪತ್ರಿಕೆಯ ಸಹ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಅಮೆರಿಕ ಸರ್ಕಾರದ ವಿದೇಶಾಂಗ ಇಲಾಖೆ ಆಹ್ವಾನದ ಮೇರೆಗೆ ವಾಷಿಂಗ್ಟನ್‍ಗೆ ತೆರಳಿದರು.
 
`ಎಡ್ವರ್ಡ್ ಆರ್. ಮ್ಯುರೋ’ ಪತ್ರಕರ್ತರ ಕಾರ್ಯಕ್ರಮದಡಿ ವಾರ್ಷಿಕವಾಗಿ ನಡೆಯುವ ಜಾಗತಿಕ ನಾಯಕತ್ವ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಬಾರಿ ಕರ್ನಾಟಕದ ಪ್ರತಿನಿಧಿಗೆ ಅವಕಾಶ ಸಿಕ್ಕಿರುವುದು ವಿಶೇಷ. ಅ.27-ನ.15ರ ವರೆಗೆ ವಾಷಿಂಗ್ಟನ್ ಡಿಸಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹರಿಪ್ರಕಾಶ್ ಕೋಣೆಮನೆ ಅವರು ಶುಕ್ರವಾರ ರಾತ್ರಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದರು.
 
ಅಮೆರಿಕದ ವಿದೇಶಾಂಗ ಸಚಿವಾಲಯ ಮತ್ತು ಶೈಕ್ಷಣಿಕ ಹಾಗೂ ಮತ್ತು ಸಾಂಸ್ಕøತಿಕ ಇಲಾಖೆ ಜಂಟಿ ಸಹಯೋಗದಲ್ಲಿ ಪ್ರತಿವರ್ಷ ಈ ನಾಯಕತ್ವ ವಿನಿಮಯ ಕಾರ್ಯಕ್ರಮ ಆಯೋಜಿಸುತ್ತಿದೆ. ಅಮೆರಿಕದ ವೃತ್ತಿಪರ ಜನರೊಂದಿಗೆ ವೈಯಕ್ತಿಕ ಮಟ್ಟದಲ್ಲಿ ಒಡನಾಡಿ, ಅಮೆರಿಕ ಮತ್ತು ಜಗತ್ತಿನ ಇತರೆ ರಾಷ್ಟ್ರಗಳ ಮನೋಭಾವವನ್ನು ಅರ್ಥ ಮಾಡಿಕೊಳ್ಳಲು ಈ ಕಾರ್ಯಕ್ರಮ ವೇದಿಕೆ ಒದಗಿಸುತ್ತದೆ. ಆಯಾ ರಾಷ್ಟ್ರಗಳಲ್ಲಿರುವ ಅಮೆರಿಕ ರಾಯಭಾರ ಕಚೇರಿ ಸಿಬ್ಬಂದಿ, ರಾಜಕೀಯ, ಆರೋಗ್ಯ, ಪರಿಸರ ಸೇರಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವ ಜಗತ್ತಿನ ವಿವಿಧ ದೇಶಗಳ ಇಬ್ಬರನ್ನು ಗುರುತಿಸಿ, ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ. ಹೀಗೆ ಭಾರತದಿಂದ ಈ ಬಾರಿ ಆಯ್ಕೆಯಾದ ಇಬ್ಬರು ಪ್ರತಿನಿಧಿಗಳ ಪೈಕಿ `ವಿಜಯವಾಣಿ’ ಪ್ರತಿನಿಧಿಗೆ ಆಹ್ವಾನ ನೀಡಿರುವುದು ವಿಶೇಷವಾಗಿದೆ.
 
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪತ್ರಿಕಾ ಸ್ವಾತಂತ್ರೃದ ಜವಾಬ್ದಾರಿ ಮತ್ತು ಹಕ್ಕುಗಳ ಬಗ್ಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿನಿಧಿಗಳು ವಿಚಾರ ವಿನಿಮಯ ನಡೆಸಲಿದ್ದಾರೆ. ಅಲ್ಲದೆ, ಅಮೆರಿಕದ ಮಾಧ್ಯಮ ಸಂಸ್ಥೆಗಳ ಗುಣಮಟ್ಟ, ಅನುಸರಿಸುತ್ತಿರುವ ಕಾರ್ಯಸೂಚಿಗಳನ್ನು ವಿಶ್ಲೇಷಿಸುವ ಮೂಲಕ ಅಮೆರಿಕದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಂದರವನ್ನು ಅರ್ಥ ಮಾಡಿಕೊಳ್ಳುವುದೂ ಸಹ ಈ ಕಾರ್ಯಕ್ರಮದ ಭಾಗವಾಗಿದೆ.
 
ವಿದೇಶಾಂಗ ನೀತಿಗಳ ವರದಿಗಾರಿಕೆಯಲ್ಲಿ ಮಾಧ್ಯಮಗಳ ಕಾರ್ಯಸೂಚಿ, ಪ್ರಸಕ್ತ ಸನ್ನಿವೇಶದಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ವಿಶೇಷ ಚರ್ಚಾಗೋಷ್ಠಿ ನಡೆಯಲಿವೆ. ಇದೇ ಸಂದರ್ಭದಲ್ಲಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮದ ತತ್ವಾನುಷ್ಠಾನದ ಕುರಿತು ಪ್ರತಿನಿಧಿಗಳು ಚರ್ಚೆ ನಡೆಸಲಿದ್ದಾರೆ. ಬಳಿಕ ಪ್ರತಿನಿಧಿಗಳು ಅಮೆರಿಕದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಸಂಸ್ಕøತಿ, ರಾಜಕೀಯ, ಸಾಮಾಜಿಕ ಸ್ಥಿತಿಗತಿ ಮತ್ತು ಆರ್ಥಿಕ ವ್ಯವಸ್ಥೆ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಲಿದ್ದಾರೆ.
Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top