ಆಯ್ತು ವರ್ಷ 3, ಅಡ್ಡಿ ಹತ್ತಾರು

2017ರ ಜುಲೈ 1ರಂದು ಮಧ್ಯರಾತ್ರಿ ನಡೆದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಜಾರಿಯಾದ  ಸರಕು ಮತ್ತು ಸೇವಾ ತೆರಿಗೆಗೆ(ಜಿಎಸ್‌ಟಿ) ಈಗ ಮೂರು ವರ್ಷ ಭರ್ತಿ. ಜಿಎಸ್‌ಟಿ ಸಾಧಕ – ಬಾಧಕಗಳತ್ತ ಕ್ವಿಕ್‌ ಲುಕ್‌.

ಮುಂದಿರುವ ಸವಾಲುಗಳು ಏನು?

– ಕೊರೊನಾ ಬಿಕ್ಕಟ್ಟಿನ ಪರಿಣಾಮ ಜಿಎಸ್‌ಟಿ ಸಂಗ್ರಹ ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರ್ಚ್‌ನಲ್ಲಿ ಜಿಎಎಸ್‌ಟಿಟಿ ಸಂಗ್ರಹ 87 ಪಸೆಂರ್‍ಟ್‌ ಕುಸಿದಿದೆ. ಸಂಗ್ರಹ ಕುಸಿತದ ಪರಿಣಾಮ ಏಪ್ರಿಲ್‌-ಮೇ ತಿಂಗಳಿನ ಜಿಎಸ್‌- ಸಂಗ್ರಹದ ಅಂಕಿ ಅಂಶ ಬಿಡುಗಡೆಯಾಗಿಲ್ಲ.

– ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ವಿತರಣೆ ಸಮರ್ಪಕವಾಗಿಲ್ಲ. 

– ಪೆಟ್ರೋಲಿಯಂ ಉತ್ಪನ್ನಗಳು, ತಂಬಾಕು, ಆಲ್ಕೊಹಾಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದು ಬಾಕಿ ಇದೆ.

– ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಈಗಲೂ ಗೊಂದಲಮಯವಾಗಿದ್ದು ಬಗೆಹರಿಸಿಲ್ಲ.

– ಐಜಿಎಸ್‌ಟಿ ರಿಫಂಡ್‌ ಪಾವತಿಯಲ್ಲಿವಿಳಂಬವಾದ್ದರಿಂದ ರಫ್ತುದಾರಿಗೆ ಸಂಕಷ್ಟ

– ಸಾಫ್ಟ್‌ವೇರ್‌ ಖರೀದಿ ಅಗತ್ಯವಾದ್ದರಿಂದ ಸಣ್ಣ ಉದ್ದಿಮೆಗೆ ನಿರ್ವಹಣೆ ವೆಚ್ಚದಲ್ಲಿ ಸಾಕಷ್ಟು ಹೆಚ್ಚಳವಾಗಿದೆ.

ಜಿಎಸ್‌ಟಿ ವ್ಯಾಪ್ತಿ ಸೇರದ ವಸ್ತುಗಳು

– ಮದ್ಯ, ಕಚ್ಚಾ ತೈಲ, ಡೀಸೆಲ್‌, ಪೆಟ್ರೋಲ್‌, ನೈಸರ್ಗಿಕ ಅನಿಲ, ಎಟಿಎಫ್‌, ತಂಬಾಕು, ಸ್ಥಳೀಯ ಸಂಸ್ಥೆಗಳು ವಿಧಿಸುವ ಮನರಂಜನೆ ತೆರಿಗೆ

ಉದ್ದೇಶವೇನು?

– ದೇಶದಲ್ಲಿ ಏಕರೂಪದ ಪರೋಕ್ಷ ತೆರಿಗೆ. ಬಹುತೇಕ ಎಲ್ಲ ಸರಕು ಮತ್ತು ಸೇವೆಗಳನ್ನು ಒಳಗೊಳ್ಳುವುದು. ತೆರಿಗೆ ಪದ್ಧತಿಯಲ್ಲಿ ಪಾರದರ್ಶಕತೆ. ಸೋರಿಕೆ ತಡೆಗಟ್ಟುವುದು. ಒಟ್ಟಾರೆ ತೆರಿಗೆ ಹೊರೆ ಇಳಿಸುವುದು. ತೆರಿಗೆಯ ವ್ಯಾಪ್ತಿ ಹೆಚ್ಚಿಸುವುದು. ತೆರಿಗೆಯ ವ್ಯಾಪ್ತಿ ಹಿಗ್ಗಿಸಿ ಸರಕಾರದ ಬೊಕ್ಕಸಕ್ಕೆ ಆದಾಯ ವೃದ್ಧಿಸುವುದು. ಕೇಂದ್ರ ಹಾಗೂ ರಾಜ್ಯ ಸರಕಾರದ 12ಕ್ಕೂ ಹೆಚ್ಚು ಪರೋಕ್ಷ ತೆರಿಗೆಗಳನ್ನು ವಿಲೀನಗೊಳಿಸಿ ಒಂದೇ ತೆರಿಗೆ ಪದ್ಧತಿ ರೂಪಿಸುವುದು.

ಜಿಎಸ್‌ಟಿ ಮಂಡಳಿಯಲ್ಲಿ 1,006 ನಿರ್ಧಾರ

ಜಿಎಸ್‌ಟಿ ಮಂಡಳಿಯು ಕಳೆದ 3 ವರ್ಷಗಳಲ್ಲಿ 36 ಸಲ ಸಭೆ ಸೇರಿದೆ. ಇದುವರೆಗೂ ಧ್ವನಿ ಮತದಿಂದ ನಿರ್ಧರಿಸಬೇಕಾದ ಸಂದರ್ಭ ಸೃಷ್ಟಿಯಾಗಿಲ್ಲ. 34ನೇ ಸಭೆಯ ತನಕ ಒಟ್ಟು 1,064 ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. 1,006 ನಿರ್ಧಾರಗಳು ಅನುಷ್ಠಾನ.

ಜಿಎಸ್‌ಟಿ ಗಳಿಸಿದ್ದು ಏನು ?

1. ತೆರಿಗೆ ಸಂಗ್ರಹ ಏರಿಕೆ

ಹೊಸ ತೆರಿಗೆ ಪದ್ಧತಿಯಲ್ಲಿ 2019ರ ಡಿಸೆಂಬರ್‌ ವೇಳೆಗೆ ತೆರಿಗೆ ಸಂಗ್ರಹ ಹೆಚ್ಚಳದ ವಾರ್ಷಿಕ ಶೇ.8.9ಕ್ಕೆ ವೃದ್ಧಿಸಿದೆ. 2019 ಏಪ್ರಿಲ್‌ನಿಂದ 2020 ಫೆಬ್ರವರಿ ತನಕ ಜಿಎಎಸ್‌ಟಿಟಿ ಒಟ್ಟು ಸಂಗ್ರಹ 16.88 ಲಕ್ಷ ಕೋಟಿ ರೂ.

2. ತೆರಿಗೆ ದರ ಇಳಿಕೆ

ಕಳೆದ 3 ವರ್ಷಗಳಲ್ಲಿ ಶೇ.28ರ ಶ್ರೇಣಿಯಲ್ಲಿದ್ದ ಸರಕು, ಸೇವೆಗಳ ಸಂಖ್ಯೆ 228ರಿಂದ 37ಕ್ಕೆ ಇಳಿಕೆಯಾಗಿದೆ.

3. ರಿಟರ್ನ್ಸ್‌ ಸಲ್ಲಿಕೆ ಹೆಚ್ಚಳ

ಜಿಎಸ್‌ಟಿ ಜಾರಿಯ ನಂತರ ಮಾಸಿಕ ರಿಟರ್ನ್ಸ್‌ ಸಲ್ಲಿಕೆಯಲ್ಲಿ ಸರಾಸರಿ 10 ಲಕ್ಷದಂತೆ ಏರಿಕೆಯಾಗಿದೆ.

4. ಬಿಸಿನೆಸ್‌ ಸಂಘಟಿತ

ಅಸಂಘಟಿತ ವಲಯದ ಹಲವಾರು ಉದ್ದಿಮೆಗಳು ಸಂಘಟಿತವಾಗುತ್ತಿದ್ದು ಸಾಲ ಮತ್ತು ಇತರೆ ಸೌಲಭ್ಯ ಪಡೆಯಲು, ಹಾದಿ ಸುಗಮವಾಗಿದೆ. ಜಿಎಸ್‌ಟಿ ನೋಂದಣಿಗೆ ಅರ್ಹ ವಹಿವಾಟು ಮಿತಿ ಏರಿಸಿರುವುದರಿಂದ ವರ್ತಕರಿಗೆ ಅನುಕೂಲ ಎನ್ನುತ್ತಾರೆ ಜಿಎಸ್‌ಟಿ ತಜ್ಞ ಸತ್ಯ ಪ್ರಮೋದ್‌.

5. ಲಾಜಿಸ್ಟಿಕ್ಸ್‌ ದಕ್ಷತೆ

ಜಿಎಸ್‌ಟಿ ಪರಿಣಾಮ ಲಾಜಿಸ್ಟಿಕ್ಸ್‌ ವಲಯದ ದಕ್ಷತೆ ಸುಧಾರಿಸಿದೆ. ಈ ಹಿಂದೆ ಎಲ್ಲ ರಾಜ್ಯಗಳಲ್ಲಿ ಭಿನ್ನ ದರದ ತೆರಿಗೆ ಕಟ್ಟಬೇಕಾಗುತ್ತಿತ್ತು. ಈಗ ಏಕೀಕೃತ
ತೆರಿಗೆಯಾದ್ದರಿಂದ ತೆರಿಗೆ ಹೊರೆ ತಗ್ಗಿದೆ. ಸರಕು ಸಾಗಣೆ ಸಮಯದಲ್ಲಿ ಉಳಿತಾಯವಾಗುತ್ತಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top