ಕೊರೊನಾ ಸಾವು 25% ಮಾತ್ರ

-ಎಲ್ಲ ಮೃತ್ಯುವಿಗೂ ಸೋಂಕು ಕಾರಣವಲ್ಲ
-ಅನ್ಯ ರೋಗಗಳಿದ್ದವರ ಸಂಖ್ಯೆಯೇ ಅಧಿಕ
-850 ಸಾವಿನಲ್ಲಿ  ಕೊರೊನಾದಿಂದಲೇ ಪ್ರಾಣ ಕಳೆದುಕೊಂಡವರು 212 ಮಂದಿ ಮಾತ್ರ.

ರಾಜ್ಯದಲ್ಲಿ ದಿನೇದಿನೆ ಕೊರೊನಾ ಸೋಂಕು ಮತ್ತು ಸಾವು ಹೆಚ್ಚಾಗುತ್ತಿದೆ. ಆದರೆ, ಸಂಭವಿಸುತ್ತಿರುವ ಸಾವುಗಳಿಗೆಲ್ಲ ಕೊರೊನಾ ಒಂದೇ ಕಾರಣವಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ  ಜುಲೈ 14ರವರೆಗೆ ದಾಖಲಾದ ಸುಮಾರು 850 ಸಾವುಗಳಲ್ಲಿ ಶೇಕಡಾ ೭೫ರಷ್ಟು ಪ್ರಕರಣಗಳಲ್ಲಿ ಮೃತರು ಈಗಾಗಲೇ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದವರು ಮತ್ತು ಹಲವಾರು ಕಾರಣಗಳಿಂದ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಾಗಿದ್ದಾರೆ. ಕೊರೊನಾದಿಂದಲೇ ತೊಂದರೆಗೆ ಒಳಗಾಗಿ ಮೃತಪಟ್ಟವರ ಸಂಖ್ಯೆ 212 ಮಾತ್ರ. ಅಂದರೆ ಒಟ್ಟು ಸಾವಿನ ಶೇಕಡಾ ೨೫ರಷ್ಟು. ಆದರೆ, ಎಲ್ಲ ಸಾವುಗಳಿಗೂ ಕೊರೊನಾ ಒಂದೇ ಕಾರಣ ಎಂಬಂತೆ ಬಿಂಬಿಸುತ್ತಿರುವುದು ಜನಸಾಮಾನ್ಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಾಮಾನ್ಯ ಜ್ವರ ಮತ್ತು ಶೀತದಷ್ಟೇ ಪ್ರಭಾವ ಹೊಂದಿರುವ ಕೊರೊನಾ ಹಂತಕ ಕಾಯಿಲೆ ಎಂಬಂತೆ ಬಿಂಬಿಸುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿ ಅದೇ ಸಾವಿಗೆ ಕಾರಣವಾಗುವ ಅಪಾಯವೂ ಇದೆ.

ಸಾವಿನ ವೇಗವರ್ಧಕ: ಕೊರೊನಾ ಪೂರ್ವದಲ್ಲಿ ಕಿಡ್ನಿ ಸಮಸ್ಯೆ, ಹೃದ್ರೋಗ, ಶ್ವಾಸಕೋಶ ಸಮಸ್ಯೆ, ಕ್ಯಾನ್ಸರ್, ಎಚ್‌ಐವಿ, ಸಕ್ಕರೆ ಕಾಯಿಲೆ ಜೊತೆಗೆ ಇನ್ನಿತರ ಆರೋಗ್ಯ ಸಮಸ್ಯೆ ಇರುವವರು ಮತ್ತು ರೋಗ ನಿರೋಧಕ ಶಕ್ತಿ ಇಲ್ಲದವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಸಾಯುವ ಘಟನೆಗಳು ವ್ಯಾಪಕವಾಗಿಯೇ ಇದ್ದವು. ಈಗ ಮೃತರ ಕೊರೊನಾ ಪರೀಕ್ಷೆ ಕಡ್ಡಾಯವಾಗಿರುವುದರಿಂದ ಪರೀಕ್ಷೆ ವೇಳೆ ಕೊರೊನಾ ಪಾಸಿಟಿವ್ ಎಂಬ ದಾಖಲೆ ಸಿಗುತ್ತಿದೆ.
ಮೊದಲೇ ಆರೋಗ್ಯ ಸಮಸ್ಯೆ ಇರುವವರಲ್ಲಿ ಸೋಂಕು ಬೇಗ ಆಕ್ರಮಿಸುತ್ತದೆ. ಹಾಗಂತ ಅದುವೇ ಸಾವಿನ ಮೂಲ ಕಾರಣ ಎಂದು ಹೇಳಲಾಗದು ಎನ್ನುತ್ತಾರೆ ತಜ್ಞ ವೈದ್ಯರು. ಪ್ರಸಕ್ತ ಐಸಿಯುನಲ್ಲಿರುವ ರೋಗಿಗಳ ಪೈಕಿ ಬಹುತೇಕರು ಅನ್ಯ ಅನಾರೋಗ್ಯಗಳಿಂದ ಬಳಲುತ್ತಿರುವವರೇ ಆಗಿದ್ದಾರೆ. ಆರೋಗ್ಯವಂತರು ಐಸಿಯುಗೆ ದಾಖಲಾಗುವುದು ಕಡಿಮೆ. ದಾಖಲಾದರೂ ಬೇಗ ಹೊರ ಬರುತ್ತಾರೆ. ದೀರ್ಘಾವಗೆ ಐಸಿಯುನಲ್ಲಿ ಇರುವವರು ಕಾಯಿಲೆಗಳು ಇರುವವರು, ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವ ವೃದ್ಧರು ಮಾತ್ರ.
ಕೊರೊನಾ ಎಂದರೆ ಸಾವಲ್ಲ…ರೋಗನಿರೋಧಕ ಶಕ್ತಿ ಪ್ರಬಲವಾಗಿದ್ದರೆ ಕೊರೊನಾ ಬಂದದ್ದೇ ಗೊತ್ತಾಗುವುದಿಲ್ಲ.
-ಕೆಲವರಲ್ಲಿ ಲಕ್ಷಣ ಕಂಡರೂ ಸಾಮಾನ್ಯ ಜ್ವರದ ಚಿಕಿತ್ಸೆಯೇ ಸಾಕಾಗುತ್ತದೆ.
-ಬೇರೆ ರೋಗಗಳಿದ್ದು, ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರು ಜಾಗರೂಕರಾಗಿರಿ.
-ವೃದ್ಧರಿಗೆ ಸಾವು ಕಾಡುತ್ತದೆ ಎನ್ನುವುದು ಸುಳ್ಳು. 100 ವರ್ಷ ದಾಟಿದವರೂ ಗೆದ್ದು ಬಂದಿದ್ದಾರೆ.

-ಭಯ, ಆತಂಕಗಳಿಲ್ಲದೆ ಎದುರಿಸಿದರೆ ಕೊರೊನಾ ಶೀತಜ್ವರದಷ್ಟೂ ಬಾಧಕವಲ್ಲ.

ಬೆಂಗಳೂರಿನಲ್ಲೇಕೆ  ಸಾವು ಹೆಚ್ಚು?
ಮೃತರಲ್ಲಿ ಹೆಚ್ಚಿನವರು ಹಿರಿಯರು. ಹೃದ್ರೋಗ, ಮಧುಮೇಹ, ಅಸ್ತಮಾ,  ಕಿಡ್ನಿ ವೈಫಲ್ಯ ಇರುವವರು. ಬೆಂಗಳೂರಿನಲ್ಲಿ  ೭.೫ ಲಕ್ಷ ಮಂದಿ ಅನ್ಯ ರೋಗಗಳಿಂದ ಬಳಲುತ್ತಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಕೆಲವರು ಸೋಂಕು ಬಂತೆಂದು ಹೆದರಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ.

ಅನ್ಯ ಕಾಯಿಲೆಯವರ ರಕ್ಷಣೆ ಹೇಗೆ? ಕಾಯಿಲೆಗೆ ಸಂಬಂಸಿದ ಚಿಕಿತ್ಸೆ ತೆಗೆದುಕೊಳ್ಳುತ್ತಿರಬೇಕು.ಮನೆಯಲ್ಲೇ ಸುರಕ್ಷಿತವಾಗಿ ಇರಬೇಕು.ಮನೆಯಲ್ಲೂ ಇತರರಿಂದ ಸುರಕ್ಷಿತ ಅಂತರ ಕಾಯಬೇಕು.ವ್ಯಾಯಾಮ, ಪೌಷ್ಟಿಕ ಆಹಾರ ಸೇವನೆಶೀತ, ಗಂಟಲು ನೋವಿಗೆ ಕಾರಣವಾಗುವ ಆಹಾರ ಬೇಡ.ಯಾವುದೇ ಸಮಸ್ಯೆ ಕಂಡುಬಂದರೆ ತಕ್ಷಣ ಚಿಕಿತ್ಸೆ ಅಗತ್ಯ.
70% ಲಕ್ಷಣರಹಿತ ರಾಜ್ಯದಲ್ಲಿ  ದಾಖಲಾಗಿರುವ ಪ್ರಕರಣಗಳಲ್ಲಿ ಶೇ. 70 ಲಕ್ಷಣರಹಿತ ಕೇಸುಗಳು. ಅಂದರೆ, ಸೋಂಕು ಇದ್ದರೂ ಅವರಿಗೆ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಒಂದು ತಿಂಗಳ ಹಿಂದೆ ಶೇ. 2ರಷ್ಟು ಜನರಲ್ಲಿ ಮಾತ್ರ ಸೋಂಕಿನ ಲಕ್ಷಣಗಳು ಇರುತ್ತಿದ್ದವು. ಅದು ಕೂಡಾ ಅನ್ಯ ಕಾಯಿಲೆ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವವರಲ್ಲಿ  ಮಾತ್ರ ಲಕ್ಷಣಗಳು ಕಾಣಿಸುತ್ತಿದ್ದವು. ಸಂಪರ್ಕದ ಆಧಾರದಲ್ಲಿ  ಪರೀಕ್ಷೆ ನಡೆಸಿದವರಲ್ಲಿ ಹೆಚ್ಚಿನವರಿಗೆ ಸೋಂಕಿನ ಲಕ್ಷಣಗಳೇ ಇರಲಿಲ್ಲ. ಈ ನಡುವೆ, ಲಕ್ಷಣರಹಿತರೇ ಹೆಚ್ಚಾಗಿ ಸೋಂಕಿನ ಹರಡುವಿಕೆಯೂ ಹೆಚ್ಚಿರುವ ಸಾಧ್ಯತೆ ಇದೆ. ಕೆಮ್ಮು, ಜ್ವರ, ಗಂಟಲು ನೋವು, ಮೈಕೈ ನೋವು, ತಲೆ ನೋವು, ರುಚಿಸದಿರುವುದು, ವಾಸನೆ ಗ್ರಹಿಕೆ ಸಾಮರ್ಥ್ಯ ಕುಸಿತ, ಆಲಸ್ಯ ಸಹಿತ ಲಕ್ಷಣಗಳು ಕಂಡುಬಂದವರು ಮಾತ್ರ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಅವರಲ್ಲಿ ಪಾಸಿಟೀವ್ ಬರುವುದು ಹೆಚ್ಚುತ್ತಿದೆ ಎನ್ನುತ್ತಾರೆ  ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ. ಸಿ.ಎನ್ ಮಂಜುನಾಥ್.

ರಿವರ್ಸ್ ಐಸೊಲೇಷನ್ ಗೆ ಸಲಹೆರೋಗ ನಿರೋಧಕ ಶಕ್ತಿ ಇರುವವರಲ್ಲಿ ರೋಗ ಲಕ್ಷಣಗಳೂ ಕಾಣಿಸುವುದು ಕಡಿಮೆ.ಆರೋಗ್ಯ ಹೊಂದಿರುವವರೇ ಹೆಚ್ಚು ಸಾವನ್ನಪ್ಪುವುದರಿಂದ ಅವರನ್ನು ಅಪಾಯದಿಂದ ಪಾರು ಮಾಡಬೇಕಾಗಿದೆ. ಸೋಂಕಿನ ಅಪಾಯದಲ್ಲಿರುವವರನ್ನು ರಿವರ್ಸ್ ಐಸೋಲೇಷನ್  ಮಾಡಿ ಸೋಂಕು ತಗಲದಂತೆ ಮಾಡಬೇಕು. ಆಗ ಸಾವಿನ ಪ್ರಮಾಣ ಕಡಿಮೆಯಾಗುತ್ತದೆ. – ಡಾ. ಸುದರ್ಶನ್ ಬಲ್ಲಾಳ್ ಮುಖ್ಯಸ್ಥ, ಮಣಿಪಾಲ್ ಆಸ್ಪತ್ರೆ

ವಿವಿಧ ಕಾಯಿಲೆಗಳು, ಅಪೌಷ್ಟಿಕತೆ, ರಕ್ತಹೀನತೆ ಇರುವವರು ಮತ್ತು ಅವರ ವಾಸವಿರುವ ಸ್ಥಳಗಳಲ್ಲಿ ಸೂಕ್ತ ಗಾಳಿ ವ್ಯವಸ್ಥೆ ಇಲ್ಲದಿರುವುದು ಮತ್ತು ಶುಚಿತ್ವದ ಕೊರತೆ ಸಾವಿಗೆ ಕಾರಣವಾಗುತ್ತಿದೆ. ಈ ರೀತಿ ಸಮಸ್ಯೆ ಎದುರಿಸುವವರಲ್ಲೇ ಸಾವಿನ ಸಂಖ್ಯೆ ಹೆಚ್ಚು. -ಡಾ. ಸಿ.ಎನ್. ಮಂಜುನಾಥ್ ಜಯದೇವ ಹೃದ್ರೋಗ ಆಸ್ಪತ್ರೆ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top