ಧರ್ಮ ಬೋಧನೆಯ ಚಾತುರ್ಮಾಸ ಆರಂಭ

ಭಾರತೀಯ ಸಂಪ್ರದಾಯದಲ್ಲಿ ಆಷಾಢ ಮಾಸ ಶುಕ್ಲಪಕ್ಷದ ಏಕಾದಶಿಯಿಂದ ಆರಂಭಿಸಿ ಕಾರ್ತಿಕ ಮಾಸದ ಶುಕ್ಲ ಏಕಾದಶಿವರೆಗಿನ ಅವಧಿಯಲ್ಲಿ ಯತಿಗಳು ಚಾತುರ್ಮಾಸ ವ್ರತಾಚರಣೆ ಕೈಗೊಳ್ಳುತ್ತಾರೆ. ಯತಿಗಳು ಮಳೆಗಾಲದಲ್ಲಿ ಒಂದೆಡೆ ನೆಲೆ ನಿಂತು ಧರ್ಮ, ಹಿತವಚನ ಬೋಧಿಸುವ ಸುಸಂದರ್ಭ ಇದು. ಚಾತುರ್ಮಾಸದಲ್ಲಿ ನದಿ, ತೊರೆಗಳನ್ನು ದಾಟಬಾರದು ಎಂಬ ನಿಯಮವೂ ಇದೆ. ಆಹಾರದಲ್ಲೂ ಕಟ್ಟಳೆಗಳಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಯತಿಗಳ ಚಾತುರ್ಮಾಸ್ಯ ವ್ರತ ಆರಂಭವಾಗಲಿದೆ. ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ಯತಿಗಳು, ಶ್ರೀಗಳು ತಮ್ಮ ಮಠಗಳಲ್ಲೇ ಈ ಬಾರಿ ಚಾರ್ತುಮಾಸ ವ್ರತಾಚಾರಣೆ ಮಾಡುತ್ತಿದ್ದಾರೆ.

– ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀಭಾರತೀ ತೀರ್ಥ ಸ್ವಾಮೀಜಿ ಮತ್ತು ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ. ಸ್ಥಳ | ಶೃಂಗೇರಿಯ ನರಸಿಂಹವನದ ಗುರುನಿವಾಸ. ಜು. 5ರಿಂದ ಸೆ.2 ರವರೆಗೆ.

– ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಸುಬುಧೇಂದ್ರ ತೀರ್ಥರು. ಸ್ಥಳ: ಮಂತ್ರಾಲಯ, ಜು. 18 ರಿಂದ ಸೆ.2ರವರೆಗೆ.

– ಅದಮಾರು ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು. ಸ್ಥಳ | ಶ್ರೀಕೃಷ್ಣ ಮಠ, ಜು.5ರಿಂದ ಸೆ.2ರವರೆಗೆ.

– ಪೇಜಾವರದ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು. ಸ್ಥಳ | ಬ್ರಹ್ಮಾವರದ ನೀಲಾವರದ ಗೋಶಾಲೆ ಆವರಣದ ಶಾಖಾ ಮಠ. ಜು.5ರಿಂದ ಸೆ.2ರವರೆಗೆ.

– ಹೊಸನಗರ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ. ಸ್ಥಳ | ಗೋಕರ್ಣದ ಅಶೋಕೆಯ ಮೂಲಮಠ. ಜು.5ರಿಂದ ಸೆ.2ರವರೆಗೆ.

– ಉಡುಪಿ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು. ಸ್ಥಳ | ಉಡುಪಿಯ ಕೃಷ್ಣಾಪುರ ಮಠ, ಜು.10ರಿಂದ ಸೆ.2ರವರೆಗೆ

– ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥ ಶ್ರೀಪಾದರು. ಸ್ಥಳ | ಬೆಂಗಳೂರಿನ ಗಿರಿನಗರದ ಭಂಡಾರಕೇರಿ ಶಾಖಾ ಮಠ. ಜು.10ರಿಂದ ಸೆ.2ರ ವರೆಗೆ.

– ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಶ್ರೀಪಾದರು. ಸ್ಥಳ | ಸುಬ್ರಹ್ಮಣ್ಯ. ಜು.13ರಿಂದ ಸೆ.2ರವರೆಗೆ

– ಪರ್ಯಾಯ ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು. ಸ್ಥಳ | ಉಡುಪಿ ಶ್ರೀಕೃಷ್ಣ ಮಠ. ಜು.15ರಿಂದ ಸೆ.2ರವರೆಗೆ

– ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು. ಸ್ಥಳ | ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿರುವ ಮೂಲ ಕಾಣಿಯೂರು ಮಠ. ಜು.15ರಿಂದ ಸೆ.2ರವರೆಗೆ

– ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು.
ಸ್ಥಳ | ಹಿರಿಯಡ್ಕ ಬಳಿಯ ಪುತ್ತಿಗೆ ಮೂಲಮಠ. ಜು.19ರಿಂದ ಸೆ.2ರವರೆಗೆ

– ಮೈಸೂರಿನ ಸೋಸಲೆ ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮೀಜಿ.
ಸ್ಥಳ | ಮೈಸೂರಿನ ಕೃಷ್ಣಮೂರ್ತಿ ಪುರಂನಲ್ಲಿರುವ ಶ್ರೀವ್ಯಾಸತೀರ್ಥ ವಿದ್ಯಾಪೀಠ. ಜು. 18ರಿಂದ ಸೆ. 2ರವರೆಗೆ.

– ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ. ಸ್ಥಳ | ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ. ಜು. 5 ರಿಂದ ಸೆ.2ರವರೆಗೆ.

– ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ. ಸ್ಥಳ | ಸೋಂದಾ ಸ್ವರ್ಣವಲ್ಲೀ ಸಂಸ್ಥಾನ, ಶಿರಸಿ (ಉತ್ತರ ಕನ್ನಡ). ಜು.5ರಿಂದ ಸೆ.2ರ ವರೆಗೆ.

– ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು. ಸ್ಥಳ | ಸೋದೆ ವಾದಿರಾಜ ಮಠ (ಉತ್ತರ ಕನ್ನಡ). ಜು.5ರಿಂದ ಸೆ.2ರವರೆಗೆ.

– ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ. ಸ್ಥಳ | ಶ್ರೀ ಕ್ಷೇತ್ರ ಕರ್ಕಿ, ಹೊನ್ನಾವರ (ಉತ್ತರ ಕನ್ನಡ), ಜು.5ರಿಂದ ಸೆ.2ರವರೆಗೆ.

– ಶ್ರವಣಬೆಳಗೊಳ ಜೈನಮಠದ ಕರ್ಮಯೋಗಿ ಶ್ರೀ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ. ಸ್ಥಳ | ಶ್ರವಣಬೆಳಗೊಳ ಮಠ. ಜು. 4ರಿಂದ ಸೆ. 19ರವರೆಗೆ.

– ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಸ್ವಾಮೀಜಿ. ಸ್ಥಳ | ಮೂಡುಬಿದಿರೆ ಜೈನ ಮಠ. ಜು.5ರಿಂದ ಸೆ.5ರವರೆಗೆ
– ಮಧ್ಯಪ್ರದೇಶದ ಸನಾವದ್ನ ಆಚಾರ್ಯ 108 ಶ್ರೀ ವರ್ಧಮಾನ ಸಾಗರ ಮುನಿ ಮಹಾರಾಜರು. ಸ್ಥಳ | ಬೆಳಗಾವಿಯ ಮಾಣಿಕಬಾಗ್. ಜು.4ರಿಂದ ನವೆಂಬರ್ 5ರವರೆಗೆ.

– ಹರಿಹರಪುರ ಮಠ ಜಗದ್ಗುರು ಶ್ರೀಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ. ಸ್ಥಳ | ಕೊಪ್ಪ ತಾಲೂಕಿನ ಹರಿಹರಪುರ ಮಠ. ಜು.5ರಿಂದ ಸೆ.2ರವರೆಗೆ

– ಕೂಡಲಿ ಮೂಲ ಶ್ರೀಶಾರದಾ ಪೀಠದ ಜಗದ್ಗುರು ಶ್ರೀವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ. ಸ್ಥಳ | ಶ್ರೀಮಠ, ಕೂಡಲಿ ಮಹಾ ಕ್ಷೇತ್ರ. ಜು.5ರಿಂದ ಸೆ.2ರ ವರೆಗೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top