ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಹೇರಲಾಗಿರುವ ‘ಲಾಕ್ಡೌನ್’ ನಿಂದಾಗಿ ಆರ್ಥಿಕ ಚಟುವಟಿಕೆಗಳೆಲ್ಲವೂ ಸ್ಥಗಿತವಾಗಿವೆ. ಪರಿಣಾಮ ಸರಕಾರದ ಬೊಕ್ಕಸವೂ ಬರಿದಾಗುತ್ತಿದೆ. ಇದು ಅನಿರೀಕ್ಷಿತವೇನಲ್ಲ. ಆದರೆ, ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳು ಯಾವ ರೀತಿ ಪರಿಣಾಮ ಬೀರಲಿವೆ ಎಂಬುದರ ಬಗ್ಗೆ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ. ಖಜಾನೆ ಖಾಲಿಯಾಗುತ್ತಿದೆ ಎಂದು ಹೇಳುತ್ತ ಕೂರುವುದರಲ್ಲೂ ಯಾವುದೇ ಅರ್ಥವಿಲ್ಲ. ದೀರ್ಘಕಾಲೀನ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸಮಯೋಚಿತ ನಿರ್ಧಾರಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೈಗೊಳ್ಳಬೇಕು ಮತ್ತು ಅವುಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ಜನರ […]
Read More
ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ತೊಡಗಿಸಿಕೊಂಡಿದ್ದಾರೆ. ಆದರೆ, ಕರ್ನಾಟಕವೂ ಸೇರಿದಂತೆ ದೇಶದ ಅನೇಕ ಭಾಗಗಳಲ್ಲಿ ಈ ‘ಕೊರೊನಾ ವಾರಿಯರ್ಸ್’ ಮೇಲೆ ನಿರಂತರವಾಗಿ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ. ಆದರೆ, ಇಂಥ ಸಂದರ್ಭವನ್ನು ಎದುರಿಸುವ ಸಮರ್ಪಕ ಕಾನೂನು ಬಲ ನಮ್ಮ ಸರಕಾರಗಳಿಗೆ ಇರಲಿಲ್ಲ. ಆ ಕೊರತೆಯನ್ನು ಕೇಂದ್ರ ಮತ್ತು ಕರ್ನಾಟಕ ಸರಕಾರಗಳು ಸುಗ್ರೀವಾಜ್ಞೆಗಳ ಮೂಲಕ ತುಂಬಿಕೊಳ್ಳುತ್ತಿವೆ. ಕೊರೊನಾ ಸೇನಾನಿಗಳ ಮೇಲೆ ಹಲ್ಲೆ ಮಾಡುವವರನ್ನು ಹೆಡೆಮುರಿ […]
Read More
ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಗಡಚಿಂಚಲೆಯಲ್ಲಿ ಇಬ್ಬರು ಸಾಧುಗಳು ಮತ್ತು ಅವರ ಕಾರು ಚಾಲಕನನ್ನು ಸಾಮೂಹಿಕವಾಗಿ ಥಳಿಸಿ, ಭೀಕರವಾಗಿ ಕೊಲೆ ಮಾಡಿದ ಘಟನೆ ಮತ್ತೆ ಸದ್ದು ಮಾಡುತ್ತಿದೆ. ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಘಟನೆ ಸಂಬಂಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿ, ಉನ್ನತ ತನಿಖೆಗೆ ಆದೇಶಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಕ್ಕೂ ಹೆಚ್ಚು ಜನರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ಆದರೆ, ಮಹಾರಾಷ್ಟ್ರದಲ್ಲಿ […]
Read More
ಕೊರೊನಾ ವೈರಸ್ ಹರಡುವಿಕೆ ಕಾರಣದಿಂದಾಗಿ ಇಡೀ ದೇಶವೇ ತುರ್ತು ಸ್ಥಿತಿಗೆ ಸಿಲುಕಿದೆ. ಈ ಸಂಕಟದ ಸಮಯದಲ್ಲಿ ಜಾತಿ, ಧರ್ಮ, ನಂಬಿಕೆಗಳು ಮೇಲುಗೈ ಸಾಧಿಸಬಾರದು. ಮಂದಿರ, ಮಸೀದಿ, ಚರ್ಚುಗಳ ಚಟುವಟಿಕೆಗಳು ಸ್ತಬ್ಧವಾಗಿ, ಧಾರ್ಮಿಕ ಆಚರಣೆಗಳೆಲ್ಲ ಹೊಸ್ತಿಲೊಳಗೆ ಸೀಮಿತವಾಗಿವೆ. ಕೊರೊನಾ ಸೇನಾನಿಗಳು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಇದು ಇಡೀ ಭಾರತ ಕೊರೊನಾ ಮಹಾಮಾರಿ ವಿರುದ್ಧ ತೋರುತ್ತಿರುವ ಒಗ್ಗಟ್ಟಿನ ಝಲಕ್. ಆದರೆ, ಭಾನುವಾರ ರಾತ್ರಿ ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಘಟನೆ ಒಗ್ಗಟ್ಟಿನ ಹೋರಾಟಕ್ಕೆ ಭಂಗ ತರಲು ಕಾರಣವಾಗಿದೆ. […]
Read More
ಇಡೀ ವಿಶ್ವವೇ ತತ್ತರಿಸಿಹೋಗುವಂತೆ ಮಾಡಿರುವ ಕೊರೊನಾ ವೈರಸ್ ಪ್ರಾಕೃತಿಕವಾದುದ್ದಲ್ಲ, ಅದು ಮಾನವ ಸೃಷ್ಟಿಯಾಗಿರಬಹುದು ಎಂಬ ಒಂದು ವಾದ ಆರಂಭದಿಂದಲೇ ಚಾಲ್ತಿಯಲ್ಲಿತ್ತು. ಆದರೆ ಅದಕ್ಕೆ ಯಾರೂ ಹೆಚ್ಚು ಕಿವಿಗೊಟ್ಟಿರಲಿಲ್ಲ. ಈಗ ಫ್ರಾನ್ಸ್‌ನ ವೈದ್ಯಕೀಯ ತಜ್ಞ ಡಾ. ಲಕ್ ಮಾಂಟೆಗ್ನೈರ್ ಎಂಬುವರು, ಚೀನಾದ ವುಹಾನ್‌ನಲ್ಲಿನ ‘ನ್ಯಾಷನಲ್ ಬಯೋಸೇಫ್ಟಿ’ ಪ್ರಯೋಗಾಲಯದಲ್ಲಿಯೇ ಕೊರೊನಾ ವೈರಾಣು ಸೃಷ್ಟಿಯಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಾಣು ಕಣಗಳ ಅಧ್ಯಯನ ನಡೆಸಿರುವ ಅವರು “ಕೊರೊನಾ ವೈರಾಣು ರಚನೆಯನ್ನು ಗಮನಿಸಿದರೆ ಅದರಲ್ಲಿ ಎಚ್‌ಐವಿ ಮತ್ತು ಮಲೇರಿಯಾ ಕ್ರಿಮಿಯ ರಚನೆಗಳು […]
Read More
ಲಾಕ್ಡೌನ್ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು ಒಟ್ಟು 1 ಲಕ್ಷ ಕೋಟಿ ರೂ.ಗಳ ನಾನಾ ನೆರವಿನ ಪ್ಯಾಕೇಜ್ ಅನ್ನು ಶುಕ್ರವಾರ ಘೋಷಿಸಿದೆ. ಇದರ ಪರಿಣಾಮ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಹೆಚ್ಚಿನ ಸಾಲ ವಿತರಿಸಲು ಹಣಕಾಸು ಸಿಗಲಿದೆ. ರೈತರು, ಸಣ್ಣ ವ್ಯಾಪಾರಿಗಳು, ಉದ್ದಿಮೆದಾರರಿಗೆ ಬ್ಯಾಂಕ್ ಸಾಲ ಸೌಲಭ್ಯ ಹೆಚ್ಚಲಿದೆ. ವಿಶೇಷ ಹಣಕಾಸು ಸಂಸ್ಥೆಗಳಿಗೂ ಹಣ ನೀಡಲಾಗಿದ್ದು, ಕಾಮಗಾರಿಗಳಿಗೆ ನೆರವಾಗಲಿದೆ. ಇದು ಶ್ಲಾಘನೀಯ ಕ್ರಮ. ಇಂಥದೊಂದು ನೆರವಿನ ನಿರೀಕ್ಷೆಯಲ್ಲಿ ದೇಶದ […]
Read More
ಒಂದು ಕಡೆ ಹೊರಗೆ ಬಂದರೆ ಕೊರೊನಾ ವೈರಸ್‌ನ ಭಯ. ಇನ್ನೊಂದು ಮನೆಯೊಳಗೇ ಇದ್ದರೂ ಆನ್‌ಲೈನ್‌ನಲ್ಲಿ ವಂಚಕರ ಸುಲಿಗೆಗೆ ತುತ್ತಾಗುವ ಆತಂಕ. ಇದು ಪ್ರಜೆಗಳ ಸದ್ಯದ ಸ್ಥಿತಿ! ಚೀನಾ ಮೂಲದ ‘ಜೂಮ್’ ಎಂಬ ಆ್ಯಪ್ ಅನ್ನು ಬಳಸುವವರು ಅದನ್ನು ಕೈಬಿಡುವುದು ಅಥವಾ ಹುಷಾರಾಗಿರುವುದು ಅಗತ್ಯ ಎಂದು ಕೇಂದ್ರ ಸರಕಾರ ಸೂಚಿಸಿದೆ. ಜೂಮ್‌ನ ಹಲವು ಭಾರತೀಯ ಬಳಕೆದಾರರ ಪಾಸ್‌ವರ್ಡ್‌ಗಳು ಹ್ಯಾಕ್ ಆಗಿರುವುದು ಹಾಗೂ ಕಾನ್ಫರೆನ್ಸ್ ಕರೆಯ ನಡುವೆ ಹ್ಯಾಕ್ ಆಗಿರುವುದು ಕಂಡುಬಂದ ನಂತರ ಸರಕಾರದ ಈ ಸೂಚನೆ ಬಂದಿದೆ. ಜೂಮ್‌ನ […]
Read More
ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ವಿಧಿಸಲಾದ ಮೂರು ವಾರಗಳ ಮೊದಲ ಲಾಕ್‌ಡೌನ್ ಮುಗಿದು ಈಗ ಮೇ.3ರವರೆಗೆ ಎರಡನೇ ಹಂತದ ನಿರ್ಬಂಧ ವಿಧಿಸಲಾಗಿದೆ. ಕೊರೊನಾ ಸೋಂಕು ಹರಡಿರುವ ಇತರ ಹಲವು ದೇಶಗಳಿಗೆ ಹೋಲಿಸಿದರೆ, ಲಾಕ್‌ಡೌನ್ ಅವಧಿಯಲ್ಲಿ ಸೋಂಕಿನ ಪ್ರಮಾಣವನ್ನು ಸಾಕಷ್ಟು ಪರಿಣಾಮಕಾರಿಯಾಗಿಯೇ ತಡೆಗಟ್ಟಲಾಗಿದೆ. ಸೋಂಕುಗಳು ಮಿತಿ ಮೀರಿ ಹೋಗದಂತೆ ಇದು ಸಹಕರಿಸಿದೆ. ಆದರೆ ಈ ಲಾಕ್‌ಡೌನ್ ದುಷ್ಪರಿಣಾಮವಾಗಿ ಆರ್ಥಿಕತೆ ದೊಡ್ಡ ಹೊಡೆತ ತಿಂದಿದೆ. ಇದನ್ನು ಸರಿದೂಗಿಸಿಕೊಂಡು ಹೋಗಲು ಮುಂದಿನ ಅವಧಿಯಲ್ಲಿ ಲಾಕ್‌ಡೌನ್‌ನ ಕೆಲವು ಉಪಕ್ರಮಗಳನ್ನು ಸಡಿಲಗೊಳಿಸುವ ಚಿಂತನೆಗೆ ಕೇಂದ್ರ […]
Read More
ಕೊರೊನಾ ಸೋಂಕನ್ನು ಎದುರಿಸಲು ರಾಜ್ಯಾಡಳಿತ ಸಮರೋಪಾದಿಯಲ್ಲಿ ಸಜ್ಜಾಗಿದೆ. ಸರಕಾರದ ಈ ಸನ್ನದ್ಧತೆಯನ್ನು ನಾವು ಶ್ಲಾಘಿಸಲೇಬೇಕು. ಆರೋಗ್ಯ ಸೇವೆ, ಗೃಹ ಸಚಿವಾಲಯ ಎಲ್ಲವೂ ಕೊರೊನಾ ಸೋಂಕಿನ ಹಿಂದೆ ಬಿದ್ದಿವೆ. ಒಟ್ಟಾರೆ ಆಡಳಿತವೇ ಕೋವಿಡ್ ಕೇಂದ್ರಿತವಾಗಿದೆ ಎಂದರೂ ತಪ್ಪಿಲ್ಲ. ಈ ಮಧ್ಯೆ ಇನ್ನೊಂದು ಮುಖ್ಯ ವಿಚಾರ ಹಿನ್ನೆಲೆಗೆ ಸರಿದಿದೆ – ಕುಡಿಯುವ ನೀರು. ಪ್ರತಿಬಾರಿ ಬೇಸಿಗೆ ಬಂದಾಗಲೂ ಈ ವಿಚಾರ ಮುನ್ನೆಲೆಗೆ ಬರುತ್ತದೆ. ಯಾಕೆಂದರೆ ಸಮಸ್ಯೆ ಬಿಗಡಾಯಿಸುವುದೇ ಆಗ. ಈ ಬಾರಿ ಪೂರ್ವಸಿದ್ಧತೆ ಇಲ್ಲದ ಕಾರಣ ಬಿರುಬೇಸಿಗೆಯ ಕುಡಿಯುವ ನೀರಿನ […]
Read More
ರಾಜ್ಯ ಮತ್ತು ಕೇಂದ್ರ ಸರಕಾರಗಳು ಪ್ರತ್ಯೇಕ ಅಸ್ತಿತ್ವ ಪಡೆದುಕೊಳ್ಳಲಿ ಎಂಬ ಕಾರಣಕ್ಕೆ ಭಾರತವು ‘ಒಕ್ಕೂಟ ವ್ಯವಸ್ಥೆ’ಯನ್ನು ಅನುಸರಿಸುತ್ತಿದೆ. ರಕ್ಷಣೆ, ಸಂವಹನ, ವಿದೇಶಾಂಗ ವ್ಯವಹಾರದಂಥ ಪ್ರಮುಖ ವಲಯಗಳನ್ನು ಹೊರತುಪಡಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮದೇ ಅಧಿಕಾರ ವ್ಯಾಪ್ತಿಯನ್ನು ಹೊಂದಿವೆ. ಸಂವಿಧಾನವೂ ಅಧಿಕಾರ ಹಂಚಿಕೆ ಸಂಬಂಧ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಸ್ಪಷ್ಟ ಗೆರೆ ಎಳೆದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆ ಗೆರೆ ಮಸುಕಾಗುತ್ತಿದೆ. ಕೊರೊನಾ ಸಂಕಟದ ಸಮಯದಲ್ಲಿಅದು ಇನ್ನಷ್ಟು ಬಹಿರಂಗವಾಗುತ್ತಿದೆ. ಕೊರೊನಾ ಮಹಾಮಾರಿಯಿಂದಾಗಿ ಎಲ್ಲ ರಾಜ್ಯಗಳ ಆರ್ಥಿಕ […]
Read More