ಕೊರೊನೋತ್ತರ ಬದುಕು ಎಂಬುದಿಲ್ಲ,ಅದರೊಂದಿಗೇ ಬದುಕು ಅಷ್ಟೆ!

  ಕೋವಿಡ್ 2ನೇ ಅಲೆ ಹೊತ್ತು ತಂದಿರುವ ಸಂಕಷ್ಟದ ಕುರಿತು ಚರ್ಚೆ ಮಾಡುವುದಕ್ಕೂ ಮುನ್ನ, ಕೋವಿಡ್ ಹೆಸರಿಸುವ ಮುನ್ನ ನಾವು ಅದಕ್ಕಿಟ್ಟಿರುವ ಇಲ್ಲವೇ ಸಂಬೋಧಿಸುವ ‘ಮಹಾಮಾರಿ’ ಎಂಬ ಪದದ ಕುರಿತು ಅರಿಯೋಣ. ಇಂಗ್ಲಿಷ್ ನಲ್ಲಿ ಎಪಿಡೆಮಿಕ್ ಹಾಗೂ ಪ್ಯಾಂಡೆಮಿಕ್ ಎಂಬ ಪದ ಬಳಕೆ ಇದೆ. ಇವೆರಡರ ಕುರಿತು ವಿಶ್ವ ಆರೋಗ್ಯ ಸಂಸ್ಥೆ ವ್ಯಾಖ್ಯಾನವನ್ನು ಹೊಂದಿದೆ. ಒಂದು ನಿರ್ದಿಷ್ಟ ಪ್ರದೇಶ, ರಾಜ್ಯ ಅಥವಾ ದೇಶದಲ್ಲಿ ಒಬ್ಬರಿಂದ ಒಬ್ಬರಿಗೆ ಹರಡುವ ಖಾಯಿಲೆಗೆ ಎಪಿಡೆಮಿಕ್(ಸಾಂಕ್ರಾಮಿಕ ರೋಗ) ಎನ್ನಲಾಗುತ್ತದೆ. ಅದೇ ಸಾಂಕ್ರಾಮಿಕ ರೋಗ […]

Read More

ಕೊರೊನಾದಿಂದ ಸರಕಾರ ಕಲಿತ ಪಾಠವಾದರೂ ಏನು?

2016ರಲ್ಲಿ ಕೇಂದ್ರ ಸರಕಾರ ಘೋಷಿಸಿದ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ತತ್ತರಿಸಿದ ಉದ್ಯಮಗಳಿಗೆ ಲೆಕ್ಕವಿಲ್ಲ. ಆಗ ಕೆಲಸ ಕಳೆದುಕೊಂಡವರು, ಮುಂದೆ ಉದ್ಯೋಗ ದೊರಕುತ್ತದೆ ಎಂದು ಇದೇ ಸಮಯಕ್ಕೆ ಇದ್ದ ಕೆಲಸಕ್ಕೆ ರಾಜೀನಾಮೆ ನೀಡಿದ್ದವರು ಇನ್ನೂ ಚೇತರಿಸಿಕೊಂಡಿಲ್ಲ. ಆದರೂ ಜನರು ಸಹಿಸಿಕೊಂಡಿದ್ದಾರೆ. ಕಾರಣ, ಇದು ದೇಶಕ್ಕೆ ಒಳಿತು ಮಾಡುವ ನಿರ್ಧಾರ ಎಂಬ ನಂಬಿಕೆಯಲ್ಲಿ. ಪ್ರಧಾನಿಯವರು ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಮುನ್ನ ಉನ್ನತ ಆದರ್ಶವನ್ನು ಹೊಂದಿರುತ್ತಾರೆ ಎಂದು. ಅದೇ ರೀತಿ, 2020ರಲ್ಲಿ ಇದ್ದಕ್ಕಿದ್ದಂತೆಕೊರೊನಾ ಅಪ್ಪಳಿಸಿದಾಗ ಪ್ರಧಾನಿಯವರ ಕರೆ ಮೇರೆಗೆ ದೇಶಾದ್ಯಂತ ಲಾಕ್ಡೌನ್ […]

Read More

ನಾನಲ್ಲ, ನಾವು ಎಂಬ ಭಾವ ರಾಜಕೀಯದಲ್ಲಿ ಮೂಡಲಿ

ಪಕ್ಷಕ್ಕಿಂತ ವ್ಯಕ್ತಿ ದೊಡ್ಡವ ಎಂದುಕೊಳ್ಳುವುದು ವಿಕೃತ ಮಾನಸಿಕತೆ ಎಂದಿದ್ದರು ಮೋದಿ  ! ಅನಿರೀಕ್ಷಿತ ಬೆಳವಣಿಗೆಯಲ್ಲಿ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿಯಾಗಿ ವಾರ ಕಳೆಯುವಷ್ಟರಲ್ಲೆ ಅಚ್ಚರಿಯ ಹೇಳಿಕೆಗಳನ್ನು ನೀಡಿದವರು ತೀರ್ಥ್ ಸಿಂಗ್ ರಾವತ್. ಹರಿದ್ವಾರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾವತ್, ಈ ಹಿಂದೆ ಶ್ರೀರಾಮನು ಸಮಾಜಕ್ಕೆ ಉತ್ತಮ ಕೆಲಸ ಮಾಡಿದ್ದರಿಂದ ನಂತರ ಜನರು ರಾಮನನ್ನು ದೇವರೆಂದು ಪರಿಗಣಿಸಲು ಆರಂಭಿಸಿದರು. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿಯವರನ್ನೂ ಮುದೊಂದು ದಿನ ಜನರು ದೇವರಂತೆ ಕಾಣುತ್ತಾರೆ ಎಂದರು. ಹೌದು. ಮಾನವನು ಮಾಧವನಾಗಬಲ್ಲ ಭಾರತ ದೇಶ […]

Read More

ಧರ್ಮಪೀಠಗಳು ದಂಡ ಪ್ರಯೋಗಿಸಲು ಸಕಾಲ

ನಾಯಕರ ಲಂಪಟತನದ ಬಗ್ಗೆ ಧಾರ್ಮಿಕ ಲೋಕ ಮೌನವಾಗಿದ್ದರೆ, ಹಿಂಸೆ ಜನರ ಬದುಕಾಗುತ್ತದೆ ಜೂಲಿಯಸ್ ಸೀಸರ್‌ನ ಹೆಂಡತಿ ಪೊಂಪೀಯಾ ಸುಲ್ಲಾ ‘ಬೋನಾ ಡೀ’ ಎಂಬ ಹಬ್ಬವೊಂದನ್ನು ಆಯೋಜಿಸಿದ್ದಳು. ಅದು ಮಹಿಳೆಯರಿಗೆ ಮಾತ್ರ ಮೀಸ-ಲಾಗಿದ್ದ ಹಬ್ಬ. ಆದರೆ ಸೀಸರನ ಸುಂದರ ಪತ್ನಿಯನ್ನು ಒಲಿಸಿಕೊಳ್ಳಬೇಕೆಂಬ ಆಸೆಯಿದ್ದ ಪಬ್ಲಿಯಸ್ ಕ್ಲಾಡಿಯಸ್ ಪಲ್ಚರ್ ಎಂಬ ಯುವಕ, ಮಹಿಳೆಯ ವೇಷ ಧರಿಸಿ ಹಬ್ಬದಲ್ಲಿ ಪಾಲ್ಗೊಂಡು, ಸಿಕ್ಕಿಬಿದ್ದ. ಅವನನ್ನು ಬಂಸಿ ವಿಚಾರಣೆ ನಡೆಸಲಾಯಿತಾದರೂ ಯಾವುದೇ ಸಾಕ್ಷಿ ಲಭಿಸದ ಕಾರಣ ಆತನ ವಿರುದ್ಧ ಸೀಸರ್ ಯಾವುದೇ ಕ್ರಮ ಕೈಗೊಳ್ಳಲಿಲ್ಲ, […]

Read More

ವಿಧಾನಮಂಡಲ ಸುಸ್ಥಿತಿಗೆ ಧರಣಿ ಮಂಡಲವೇ ಮದ್ದು

ಸದಾ ಗದ್ದಲ, ಗೋಜಲು, ಹೊಡೆದಾಟ ಬಡಿದಾಟ, ಅದಿಲ್ಲ ಅಂದರೆ ಸದನದಲ್ಲಿ ಬ್ಲೂ ಫಿಲ್ಮ್ ನೋಡುವ ಶಾಸಕರಿಂದಲೇ ಅಪಖ್ಯಾತಿಗೆ ಸುದ್ದಿಯಾಗುತ್ತಿದ್ದ ಕರ್ನಾಟಕ ವಿಧಾನಮಂಡಲದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಸದೀಯ ನಡವಳಿಕೆ ಸುಧಾರಣೆ ಮಾಡುವುದು ಹೇಗೆ ಎಂಬುದರ ಕುರಿತು ಆಲೋಚನೆ ಆರಂಭ ಆಗಿದೆ. ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆ ಮಟ್ಟಿಗೆ ಅಭಿನಂದನಾರ್ಹರು. ಒಂದು ಮಾತಿದೆ. ತಪ್ಪು ಮಾಡುವುದು ತೀರಾ ಪ್ರಮಾದವೇನಲ್ಲ. ಆದರೆ,ಅದನ್ನು ತಿದ್ದಿಕೊಳ್ಳಲು ಆಲೋಚನೆ ಮಾಡದೇ ಇರುವುದು ಮಾತ್ರ […]

Read More

ಟ್ರಂಪ್ ಬೌದ್ಧಿಕ ದಿವಾಳಿಗೆ ಸಾಕ್ಷಿ ಕ್ಯಾಪಿಟಲ್ ಹಿಲ್ ದಾಳಿ- ರಾಜಕೀಯ ಎಂದರೆ ಸೇವೆಯೇ ಹೊರತು ಪ್ರತಿಷ್ಠೆ, ಅಹಂಕಾರ, ಅಟಾಟೋಪಗಳಿಗೆ ಸ್ಥಾನವಿಲ್ಲ- ಗಾಂಧಿ ಮಾತೇ ಸತ್ಯ

ಇದನ್ನು ಅಮೆರಿಕದ ಪ್ರಜಾತಂತ್ರದ ಸೊಬಗು ಅಂತ ಕರೆಯೋಣವಾ, ಇಲ್ಲ ಅಮೆರಿಕದ ರಾಜಕೀಯ ಇತಿಹಾಸದಲ್ಲಿನ ಕಪ್ಪುಚುಕ್ಕೆ ಅನ್ನೋಣವಾ? ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್ ಆಯ್ಕೆಯೇ ಮಹಾ ಮೋಸ ಎಂಬ ಜಪವನ್ನೇ ಮಾಡುತ್ತಿದ್ದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ ಡಿಸಿಯಲ್ಲಿರಿಪಬ್ಲಿಕನ್ ಪಕ್ಷ ದ ಬೆಂಬಲಿಗರ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವ ವೇಳೆ, ‘‘ಹೋಗಿ, ಪ್ರತಿಭಟಿಸಿ, ನುಗ್ಗಿ, ಸಂಸತ್ತನ್ನು ವಶಕ್ಕೆ ಪಡೆದುಕೊಳ್ಳಿ,’’ ಎಂಬ ಮಾತುಗಳಿಂದ ಉದ್ರೇಕಿತರಾದ ರಿಪಬ್ಲಿಕನ್ ಪಕ್ಷದ ಪುಂಡ ಬೆಂಬಲಿಗರು ಐತಿಹಾಸಿಕ ಕ್ಯಾಪಿಟಲ್ ಹಿಲ್ನಲ್ಲಿರುವ ಅಮೆರಿಕ […]

Read More

ಮುಂದಿನ ವಾರವೆ ಕೊರೊನಾ ಲಸಿಕೆ..

ಮುಂಬೈ ದಾಳಿ ಮಾಸ್ಟರ್ ಮೈಂಡ್ ಗೆ ಪಾಕಿಸ್ತಾ‌ನದಲ್ಲೇ ಶಾಸ್ತಿ ಡಿಗ್ರಿ ತರಗತಿಗಳೂ ಶುರು ಆಗಬಹುದೇ? ದೆಹಲಿ ರೈತರ ಘರ್ ವಾಪಸಿ ಕಾಯಿದೆ ವಾಪಸಿ‌ ನಂತರವೆ.. ಅಮೆರಿಕದಲ್ಲಿ ಟ್ರಂಪ್ ಪದಚ್ಯುತಿಗೆ ಹೆಚ್ಚಿದ ಒತ್ತಡ ಟ್ರಂಪ್ ಸೋತಿದ್ದಲ್ಲ,ಒಂದು ಅವಧಿಗೆ ಗೆದ್ದಿದ್ದೇ ಅಚ್ಚರಿ

Read More

ಜಮ್ಮು ಕಾಶ್ಮೀರ, ಹೈದರಾಬಾದ್ ಚುನಾವಣೆ ಫಲಿತಾಂಶಗಳು ಜನಮನದ ದಿಕ್ಸೂಚಿಯಾಗಿವೆ

ಒಡೆಯುವವರಿಗೆ ತಿರಸ್ಕಾರ, ಬೆಸೆಯುವವರಿಗೆ ಜನಾದೇಶದ ಪುರಸ್ಕಾರ   ಜ್ಯೋತಿಷ್ಯ ಪಂಡಿತರ ಭಾಷೆಯಲ್ಲಿ ಹೇಳುವುದಾದರೆ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಗೆ ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಶುಕ್ರದೆಸೆ ಶುರು ಆದಂತೆ ತೋರುತ್ತಿದೆ. ಕೊರೊನಾ ಕಾಲಿಡುತ್ತಿದ್ದ ಹೊತ್ತಲ್ಲಿ ನಡೆದ ದಿಲ್ಲಿ ವಿಧಾನಸಭೆ ಚುನಾವಣೆ ಹೊರತು ಪಡಿಸಿ, ಬಳಿಕ ನಡೆದಿರುವ ಎಲ್ಲ ಸಾರ್ವತ್ರಿಕ ಚುನಾವಣೆ, ಉಪ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ. ಬಿಹಾರ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು, ಜಮ್ಮು ಕಾಶ್ಮೀರದ ಜಿಲ್ಲಾಭಿವೃದ್ಧಿ ಸಮಿತಿಗಳಿಗೆ ನಡೆದ ಚುನಾವಣೆವರೆಗೆ ಎಲ್ಲ ಕಡೆಯೂ […]

Read More

ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ ದೇಶಾದ್ಯಂತದ ರೈತ ಪ್ರತಿಭಟನೆ

ಕೃಷಿ ತಿದ್ದುಪಡಿ ಕಾಯಿದೆಗಳ ಭವಿಷ್ಯದ ಪರಿಣಾಮಗಳ ಕುರಿತು ವಿಕ ಫೋಕಸ್ ವರದಿ ವೈದ್ಯರ ಒಪಿಡಿ ಬಂದ್ ಪ್ರತಿಭಟನೆಗೆ ಉತ್ತಮ ಸ್ಪಂದನೆ ರಾಜ್ಯದ 429 ಪದವಿ ಕಾಲೇಜುಗಳಲ್ಲಿ ಪ್ರಾಂಶುಪಾಲರೇ ಇಲ್ಲದೇ ಹೋದರೆ ಹೇಗೆ? ರಿಯಲ್ ಎಸ್ಟೇಟ್ ಮಾರ್ಗಸೂಚಿ ದರ ಇಳಿಕೆಗೆ ಸರಕಾರದ ಚಿಂತನೆ ಸಂಧಾನ,ಸಂವನಹನವೇ ಸರಕಾರದ ಕಾರ್ಯನಿರ್ವಹಣೆಯ ಮಾರ್ಗವಾಗಲಿ… ಕಾಯಿದೆ,ಸುಗ್ರೀವಾಜ್ಞೆ ನಂತರ ಬರಲಿ..

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top