
ರಂಗಸ್ವಾಮಿ ಮೂಕನಳ್ಳಿ ರವರ ‘ಷೇರು ಮಾರುಕಟ್ಟೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ
– ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಬಾಕಿ, ಪ್ರತಿಪಕ್ಷಗಳಿಂದ ಹೋರಾಟದ ಎಚ್ಚರಿಕೆ ವಿಕ ಸುದ್ದಿಲೋಕ ಬೆಂಗಳೂರು : ರೈತರು, ರೈತ ಸಂಘಟನೆಗಳು, ಪ್ರತಿಪಕ್ಷಗಳು ಹಾಗೂ ಇನ್ನಿತರ ಬಳಕೆದಾರರ ರಾಜ್ಯವಾಪಿ ತೀವ್ರ ವಿರೋಧದ ನಡುವೆಯೂ ವಿವಾದಿತ ಎಪಿಎಂಸಿ ಕಾಯಿದೆ ತಿದ್ದುಪಡಿ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಈಗಾಗಲೇ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ. ಇದಕ್ಕೆ ರಾಜ್ಯಪಾಲರ ಅಂಕಿತ ಬೀಳುವುದೊಂದು ಬಾಕಿಯಿದೆ. ಈ ಸಂಬಂಧ ಒತ್ತಡ ತಂದಿದ್ದ ಕೇಂದ್ರ ಸರಕಾರ ‘ಮಾದರಿ ಕಾಯಿದೆ’ಯ ಪ್ರತಿಯನ್ನೂ ಕಳುಹಿಸಿಕೊಟ್ಟಿತ್ತು. […]
– ರಾಮಸ್ವಾಮಿ ಹುಲಕೋಡು. ಇತ್ತೀಚೆಗಷ್ಟೇ ಬೆಂಗಳೂರಿನ ಸಂಸ್ಥೆಯೊಂದು ದೇಶದಲ್ಲಿಯೇ ಮೊತ್ತಮೊದಲ ಆಯುರ್ವೇದದ ಟೆಲಿಮೆಡಿಸಿನ್ ಸರ್ವಿಸ್ ಆರಂಭಿಸಿದೆ. ಜರ್ಮನಿ, ರಷ್ಯಾ, ಅಮೆರಿಕ, ಉತ್ತರ ಐರೋಪ್ಯ ರಾಷ್ಟ್ರಗಳಿಂದ ಒಂದರ ಹಿಂದೊಂದರಂತೆ ಕರೆಗಳು ಬರುತ್ತಿದ್ದು, ಆಯುರ್ವೇದ ಚಿಕಿತ್ಸಾ ಪದ್ಧತಿಯ ಬಗ್ಗೆ ತಿಳಿದುಕೊಳ್ಳುವುದರ ಜತೆಗೆ, ಕೆಲವರು ಚಿಕಿತ್ಸೆಯನ್ನೂ ಪಡೆಯಲಾರಂಭಿಸಿದ್ದಾರೆ. ಆನ್‌ಲೈನ್‌ನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿಗಳಿಗೆ ಬೇಡಿಕೆ ದುಪ್ಪಟ್ಟು ಹೆಚ್ಚಾಗಿದೆ. ಮಾರುಕಟ್ಟೆ ಇನ್ನಷ್ಟು ವಿಸ್ತರಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ ಕೆಲವು ಆನ್‌ಲೈನ್ ಔಷಧ ಮಾರಾಟ ಕಂಪನಿಗಳ ವಕ್ತಾರರು. ಕೊರೊನಾ ಕಾಣಿಸಿಕೊಂಡ ನಂತರ […]
– ಅಸಂಘಟಿತ ವಲಯದ 10 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಡೋಲಾಯಮಾನ – ದುಡಿಮೆಯ ಹಾದಿ ಕಾಯುತ್ತಿರುವ ವೃತ್ತಿಪರರು | ವಿಶೇಷ ಪ್ಯಾಕೇಜ್ ನಿರೀಕ್ಷೆ ವಿಕ ಸುದ್ದಿಲೋಕ ಬೆಂಗಳೂರು ಒಂದೆಡೆ ಕೊರೊನಾದಿಂದ ಜೀವಭಯ. ಇನ್ನೊಂದೆಡೆ ಅತಂತ್ರವಾಗಿರುವ ಜೀವನೋಪಾಯ. ಇದು ಸಾಂಪ್ರದಾಯಿಕ ವೃತ್ತಿಪರರೂ ಸೇರಿದಂತೆ 10 ಲಕ್ಷಕ್ಕೂ ಹೆಚ್ಚು ಕುಟುಂಬಗಳ ದಾರುಣ ಕತೆ. ಅನಿವಾರ್ಯವಾಗಿರುವ 35 ದಿನಗಳ ಲಾಕ್‌ಡೌನ್ ಅವಧಿಯು ನಿತ್ಯದ ದುಡಿಮೆಯಲ್ಲಿ ಬದುಕು ಸಾಗಿಸುತ್ತಿದ್ದವರನ್ನು ಹೈರಾಣಾಗಿಸಿದೆ. ಆಟೊ-ಟ್ಯಾಕ್ಸಿ ಚಾಲಕರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಮಾತ್ರವಲ್ಲದೆ ಸವಿತಾ […]
ಕೋವಿಡ್ ಟೆಸ್ಟ್ ನಿಖರತೆ, ಅದು ತೆಗೆದುಕೊಳ್ಳುವ ಸಮಯ ಇತ್ಯಾದಿಗಳ ಬಗ್ಗೆ ತಜ್ಞ ವೈದ್ಯರು ಇನ್ನೂ ತಲೆ ಕೆಡಿಸಿಕೊಳ್ಳುತ್ತ ಇದ್ದಾರೆ. ಇಂಥ ಸಮಯದಲ್ಲಿ, ರೂರ್ಕಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಪ್ರೊಫೆಸರ್ ಒಬ್ಬರು ಕೋವಿಡ್ ಟೆಸ್ಟ್‌ಗೆ ಸುಲಭ ವಿಧಾನವೊಂದನ್ನು ಆವಿಷ್ಕರಿಸಿದ್ದಾರೆ. ಅವರ ಪ್ರಕಾರ ಎಕ್ಸ್‌ರೇ ಸ್ಕ್ಯಾನಿಂಗ್ ಬಳಸಿಕೊಂಡು, ಅದನ್ನು ಒಂದು ಸುಧಾರಿತ ಸಾಫ್ಟ್‌ವೇರ್‌ಗೆ ಫೀಡ್ ಮಾಡುವ ಮೂಲಕ ಕೇವಲ ಐದೇ ನಿಮಿಷದಲ್ಲಿ ಕೋವಿಡ್ ಫಲಿತಾಂಶ ಪಡೆಯಬಹುದಾಗಿದೆ. ಈ ಸಾಫ್ಟ್‌ವೇರ್ ಅನ್ನು ಅವರು ಆವಿಷ್ಕರಿಸಿದ್ದಾರೆ. ಇದು ಪರೀಕ್ಷಾ ವೆಚ್ಚವನ್ನು ಮಾತ್ರವಲ್ಲ […]
ಬಾವಲಿಗಳಿಂದ ಕೋವಿಡ್-19 ಬರಲ್ಲ ಐಸಿಎಂಆರ್, ವಿಜ್ಞಾನಿಗಳ ಅಭಿಪ್ರಾಯ | ಮರಗಳನ್ನು ಕಡಿಯದಿರಲು ಮನವಿ ವಿಕ ಸುದ್ದಿಲೋಕ ಬೆಂಗಳೂರು : ಬಾವಲಿಗಳಿಂದ ಕೊರೊನಾ ವೈರಸ್(ಕೋವಿಡ್-19)ಗೆ ಹರಡುತ್ತಿದೆ ಎಂಬ ತಪ್ಪು ಮಾಹಿತಿಯನ್ನು ನಂಬಿದ ಅನೇಕರು ತಮ್ಮ ಮನೆ ಮಂದೆ ಇರುವ ಗಿಡ, ಮರಗಳ ಕೊಂಬೆಗಳನ್ನು ಕಡಿಯತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ, ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್) ಮತ್ತು ತಜ್ಞರು ಬಾವಲಿಗಳು ಕೋವಿಡ್-19 ವಾಹಕಗಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ಕೇರಳ, ಹಿಮಾಚಲ ಪ್ರದೇಶ, ಪುದುಚೇರಿ ಮತ್ತು ತಮಿಳುನಾಡು ಪ್ರದೇಶ ವ್ಯಾಪ್ತಿಯ […]
ಕೊರೊನಾ ವೈರಸ್‌ನಿಂದಾಗಿ ನಾವೀಗ ಒಂದು ರೀತಿಯ ಯುದ್ಧದ ಪರಿಸ್ಥಿತಿಯಲ್ಲಿದ್ದೇವೆ. ಕಣ್ಣಿಗೆ ಕಾಣುವ ವೈರಿಯ ವಿರುದ್ಧದ ಹೋರಾಟ ಸುಲಭ. ಆದರೆ, ಅದೃಶ್ಯ ವೈರಿ ವಿರುದ್ಧದ ಹೋರಾಟ ಕಷ್ಟ. ಹಾಗಂತ, ಮೈಮರೆತು ಕೂರುವಂತಿಲ್ಲ. ಇಡೀ ಮನುಕುಲಕ್ಕೆ ಕಂಟಕವಾಗುತ್ತಿರುವ ಈ ಕೊರೊನಾ ವಿರುದ್ಧ ಸರಕಾರಗಳ ಜೊತೆಗೆ ಕೈಜೋಡಿಸುತ್ತಲೇ ನಮ್ಮ ನೆಲೆಯಲ್ಲಿನಾವು ಮಾಡಬೇಕಾದ ಕರ್ತವ್ಯಗಳನ್ನು ಚಾಚೂ ತಪ್ಪದೆ ನೆರವೇರಿಸಬೇಕಿದೆ. ಸೋಂಕು ಮತ್ತಷ್ಟು ವಿಸ್ತರಿಸದಂತೆ ನೋಡಿಕೊಳ್ಳಬೇಕಿದೆ. ಕೊರೊನಾ ವೈರಾಣು ಸೃಷ್ಟಿಸಿರುವ ಈ ಸಂದಿಗ್ಧ ಪರಿಸ್ಥಿತಿಯು ನಮ್ಮ ಶಿಸ್ತು, ಸಂಯಮ, ಸ್ವಯಂ ನಿಯಂತ್ರಣ, ಸಾಮಾಜಿಕ ಕಾಳಜಿ, […]
ಶ್ರೀರಂಗ ಪಟ್ಟಣದ ಬಳಿಯ ಮಯೂರ ರಿವರ್ ವ್ಯೂ ರೆಸಾರ್ಟಲ್ಲಿ ನಡೆದ ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕರ ಕಾನ್ಫೆರೆನ್ಸ್ ಕೊನೆಯಲ್ಲಿ ಗ್ರೂಪ್ ಫೋಟೊ ಸೆಷನ್.