ವ್ಯಾಪಾರೀ ಗೀಳಿರುವವರೆಗೂ ಹೆಣ್ಣಿನ ಗೋಳು ತಪ್ಪಲ್ಲ ಬಿಡಿ

ಜಾಹೀರಾತಿಗೆ ಹೆಣ್ಣು, ಸಿನಿಮಾ ಗೆಲ್ಲಲು, ವ್ಯಾಪಾರಿ ಲಾಭಕ್ಕೆ ಹೆಣ್ಣು, ವಿವಾದ ಹುಟ್ಟುಹಾಕಿ ಲಾಭ ಮಾಡಿಕೊಳ್ಳಲು, ಭೋಗ ವೈಭೋಗಕ್ಕೆ ಹೆಣ್ಣು, ಅದರಾಚೆಗೆ ಕ್ರೀಡೆ, ಕಲೆ, ನೆಲೆ ಯಾವುದಕ್ಕಾದರೂ ಬೆಲೆ ಇದೆಯೇ? ಇದನ್ನೇ ಹೆಚ್ಚುಗಾರಿಕೆಯೆಂಬ ಹುಚ್ಚಿಗೆ ಬಿದ್ದವರೂ ಇದ್ದಾರಲ್ಲ. ಹೇಳಿಕೇಳಿ ಇದು ಸುದ್ದಿ ಯುಗ ತಾನೆ… ಹೀಗಾಗಿ ಮುಂಜಾನೆದ್ದು ಕಣ್ಣುಬಿಡುವ ಹೊತ್ತಿಗೆ ದಿನಪತ್ರಿಕೆಗಳು ನಮ್ಮ ಕೈಸೇರಿರುತ್ತವೆ. ಆಗ ಮೊದಲು ಕಣ್ಣನ್ನು ಸೆಳೆಯುವ ಸಮಾಚಾರಗಳಾದರೂ ಎಂಥವು? ಅತ್ಯಾಚಾರ, ಕೊಲೆ, ಮೋಸ, ಪ್ಯಾರ್ ಔರ್ ದೋಖಾ… ಮುಖಪುಟದಲ್ಲಿ ಇಂಥ ಒಂದೆರಡಾದರೂ ಬಾತ್ಮಿ ಇಲ್ಲದೇ […]

Read More

ಕಾರ್ಗಿಲ್ ವಿಜಯಪತಾಕೆಗೆ ಭರ್ತಿ ಹದಿನೈದು ವರ್ಷ

ನಮ್ಮದೇ ರಕ್ತಮಾಂಸಗಳನ್ನು ಹಂಚಿಕೊಂಡು ಹುಟ್ಟಿದ ಪಾಕಿಸ್ತಾನ ಇಂಥ ದೈನೇಸಿ ಸ್ಥಿತಿ ತಲುಪಲು ಆ ದೇಶ ಅನುಸರಿಸುತ್ತ ಬಂದ ವಕ್ರಬುದ್ಧಿ ಕಾರಣವಲ್ಲದೆ ಬೇರೇನು? ಅದೊಂದನ್ನು ಅರಿತುಕೊಂಡಿದ್ದರೆ ಪಾಕಿಸ್ತಾನವೂ ನಮ್ಮಂತೆಯೇ ನೆಮ್ಮದಿಯಿಂದ, ಸುಖವಾಗಿ ಬಾಳಿ ಬದುಕಬಹುದಿತ್ತು. ಸದ್ಯಕ್ಕಂತೂ ಅಂಥ ಭರವಸೆ ಕಾಣಿಸುತ್ತಿಲ್ಲ. ದಿನಗಳು ಎಷ್ಟುಬೇಗ ಉರುಳಿಹೋಗುತ್ತವೆ ನೋಡಿ. ಕಾರ್ಗಿಲ್ ಯುದ್ಧವೆಂಬ ದುಃಸ್ವಪ್ನದಿಂದ ದೇಶ ಮೈಕೊಡವಿಕೊಂಡು ಮೇಲೆದ್ದು ಹದಿನೈದು ವರ್ಷಗಳೇ ಕಳೆದುಹೋದವು. ಆದರೇನಂತೆ 1999ರ ಜುಲೈ 26ರ ಆ ದಿನದ ರೋಮಾಂಚನ ನಮ್ಮ ಕಣ್ಣಲ್ಲಿ, ಮನದಲ್ಲಿ, ಹೃದಯದಲ್ಲಿ ಅಷ್ಟೇ ಏಕೆ ನಮ್ಮ […]

Read More

ಈ ಕೊಚ್ಚೆಗಳ ನಡುವೆ ಅಚ್ಛೇ ದಿನ್ ಬರೋದಾದರೂ ಹೇಗೆ?

ಸಂಜೆ ಅಧಿಕಾರ ವಹಿಸಿಕೊಂಡ ತಹಶೀಲ್ದಾರರೊಬ್ಬರು ಮರುದಿನ ಬೆಳಗ್ಗೆ ಮರುವರ್ಗಾವಣೆ ಆದೇಶ ಪಡೆದ ಉದಾಹರಣೆಯನ್ನು ಎಲ್ಲಾದರೂ ಕೇಳಿದ್ದೀರಾ? ಯಲ್ಲಾಪುರದ ತಾಲೂಕು ಕಚೇರಿ ಅಂಥ ಅಪರೂಪದ ಬೆಳವಣಿಗೆಗೆ ಸಾಕ್ಷಿಯಾಗಿದ್ದನ್ನು ಕಂಡಾಗ ಮನಸ್ಸಿನಲ್ಲಿ ಸಹಜವಾಗಿ ಇಂಥ ಪ್ರಶ್ನೆ ಮೂಡಿತು!   `ಅಚ್ಛೇ ದಿನ್’ ಬರಬೇಕು ಅನ್ನುವುದು ಎಲ್ಲರ ಬಯಕೆ. ಅದರಲ್ಲಿ ದೂಸ್ರಾ ಮಾತೇ ಇಲ್ಲ. ದೂರದ ದಿಲ್ಲಿಯಿಂದ ಹಳ್ಳಿ ಮೂಲೆಯವರೆಗೆ ಪ್ರತಿ ಪ್ರಜೆಯೂ ಅಂಥ ಕನಸು ಕಾಣುತ್ತಾನೆ. ಒಳ್ಳೆಯ ನಾಳೆಗಳಿಗಾಗಿ ಆಕಾಶ ನೋಡುತ್ತ ದಿನ ದೂಡುತ್ತಾನೆ. ಆದರೆ ಹಾಗೆ ಅಂದುಕೊಂಡ ಮಾತ್ರಕ್ಕೆ […]

Read More

ಸಾವಿನ ಪೆಟ್ಟಿಗೆಗೆ ಕೊನೇ ಮೊಳೆ ಹೊಡೆದ ಪರಿಯಿದು

ಹತ್ಯೆಯಾದವರು ಮಕ್ಕಳಿಗೆ ಅಪ್ಪ-ಅಮ್ಮ, ಹೆಂಡತಿಗೆ ಗಂಡ ಎಂಬುದಕ್ಕಿಂತ ಹೆಚ್ಚಾಗಿ ಅವರು ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ವಾರಸುದಾರರು ಎಂಬುದು ಮುಖ್ಯ. ಇದು ಗೊತ್ತಿದ್ದೂ ಸಾವಿನ ಸತ್ಯದ ಮೇಲೆ ತೆರೆ ಎಳೆಯುವವರಿಗೆ ಏನೆನ್ನಬೇಕು?   ಜನಪ್ರಿಯ ಹೇಳಿಕೆಯೊಂದಿದೆ- Where there is a will, there is a way, there is an action, where there is no will there is a committee, there is an enquiry team, there is […]

Read More

ಈಗಿನ ಅರಬ್ ಸಂಘರ್ಷದ ಮೂಲ ಎಲ್ಲಿದೆ ಗೊತ್ತೇ..

ಶಿಯಾ-ಸುನ್ನಿಗಳ ಕಾರ್ಯಶೈಲಿಯನ್ನು ಗೊತ್ತುಗುರಿ ಇಲ್ಲದವರು ನಡೆಸುತ್ತಿರುವ ಹೋರಾಟ, ಹಾದಿತಪ್ಪಿದವರ ಹೋರಾಟ ಅಂತ ಕರೆಯಬಹುದೇ? ಭಯೋತ್ಪಾದನೆ, ಹಿಂಸಾಚಾರವನ್ನೇ ಅನುಸರಿಸಿಕೊಂಡು ಬಂದ ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾಕ್‍ಗಳಲ್ಲಿ ಜನರ ಆರ್ಥಿಕ, ಸಾಮಾಜಿಕ ಸ್ಥ್ಥಿತಿಗತಿಗಳು ಹೇಗಿರಬಹುದು? ಇತ್ತೀಚೆಗೆ ಇರಾಕ್‍ನಲ್ಲಿ ಮತ್ತೊಂದು ಸುತ್ತಿನ ಆಂತರಿಕ ಬಿಕ್ಕಟ್ಟು ಶುರುವಾದ ಲಾಗಾಯ್ತಿನಿಂದ ಹೊರಜಗತ್ತಿನ ಜನರ ಮನಸ್ಸಿನಲ್ಲಿ ಸಹಜವಾಗಿ ಒಂದು ಪ್ರಶ್ನೆ ಉದ್ಭವವಾಗಿದೆ. ಅದು- ಈ ಮುಸ್ಲಿಂ ಮತಾನುಯಾಯಿಗಳು ಅದೇಕೆ ತಮ್ಮತಮ್ಮೊಳಗೇ ಈ ಪರಿ ಬಡಿದಾಡಿಕೊಳ್ಳುತ್ತಿದ್ದಾರೆ ಅನ್ನುವುದು. ಅದಕ್ಕೆ ಥಟ್ ಅಂತ ಜವಾಬು ಕೊಡುವುದು ಅಷ್ಟು ಸುಲಭವಲ್ಲ. ಈಗ […]

Read More

ಕೈ ಕಾಯಿಲೆಗೆ ಮದ್ದಿದೆ; ಪಡೆಯುವ ಮನಸ್ಸು ಬೇಕಷ್ಟೆ

ರಾಹುಲ್ ಗಾಂಧಿ ಒಂದೋ ಪೂರ್ಣಾವಧಿ ರಾಜಕಾರಣಿ ಆಗಬೇಕು. ಅಥವಾ ಸಂಪೂರ್ಣವಾಗಿ ರಾಜಕೀಯ ತೊರೆಯಬೇಕು. ಅದಿಲ್ಲದೇ ಹೋದರೆ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲವೇ ಇಲ್ಲ. ಇವತ್ತು ರಾಹುಲ್ ಗಾಂಧಿ ಸ್ಥಿತಿ, ಬಿದ್ದವನ ಮೇಲೊಂದು ಕಲ್ಲು ಎನ್ನುವಂತಾಗಿದೆ. ಆ ಕಡೆಯಿಂದ ಈ ಕಡೆಯಿಂದ ಬೀಸುತ್ತಿರುವ ಹೊಡೆತಕ್ಕೆ ಸಿಲುಕಿ ಅವರು ಅಪ್ಪಚ್ಚಿಯಾಗುತ್ತಿದ್ದಾರೆ. ಪಕ್ಷದ ಈ ಪಾಟಿ ಸೋಲಿಗೆ ರಾಹುಲ್ ಗಾಂಧಿಯೇ ಕಾರಣ ಅಂತ ಮರಿಪುಢಾರಿಗಳಿಂದ ಹಿಡಿದು ಕಮಲನಾಥ, ಗುಲಾಮ್ ನಬಿ ಆಜಾದರಂಥ ಹಿರಿತಲೆಗಳವರೆಗೆ ಎಲ್ಲರೂ ಮುರಕೊಂಡು ಬೀಳುತ್ತಿದ್ದಾರೆ. ಬಹುಶಃ ಇಂತಹ ಒಂದು […]

Read More

ಒಂದು ವರ್ಷಕ್ಕೇ ಸರ್ಕಾರ ಏದುಸಿರು ಬಿಟ್ಟರೆ ಹೇಗೆ?

ಕುಸಿಯುತ್ತಿರುವ ಸರ್ಕಾರದ ವರ್ಚಸ್ಸಿಗೆ ಹೊಳಪು ತುಂಬಲು ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯಗಳಂಥ ಯೋಜನೆಗಳೂ ವಿಫಲವಾದರೆ ಸಿದ್ದರಾಮಯ್ಯ ಸರ್ಕಾರಕ್ಕೆ ನವಚೈತನ್ಯ ತುಂಬುವ ಪರ್ಯಾಯ ಮಾರ್ಗ ಯಾವುದು? ಗಳಿಸಿದ ಅಧಿಕಾರವನ್ನು ಉಳಿಸಿಕೊಳ್ಳಲು ಗಮನ ಕೊಡದೇ ಹೋದರೆ ನಿಮ್ಮವರೇ ಆದರೂ ಎಷ್ಟು ದಿನ ಅಂತ ನಿಮ್ಮನ್ನು ಸಹಿಸಿಕೊಂಡಾರು? ಹಗಲಿರುಳೂ ದುಡಿದು ಪಕ್ಷವನ್ನು ಅಧಿಕಾರಕ್ಕೆ ತಂದ ಕಾಂಗ್ರೆಸ್‍ನ ಲಕ್ಷಾಂತರ ಕಾರ್ಯಕರ್ತರು ಈ ಪ್ರಶ್ನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒಳಾಂತರ್ಯದಲ್ಲಾದರೂ ಕೇಳುತ್ತಿರಲು ಸಾಕು. ವನವಾಸ ಅನುಭವಿಸಿ, ಹೋರಾಟ ನಡೆಸಿ ಗಳಿಸಿದ ಅಧಿಕಾರ ಹೊಳಪು ಕಳೆದುಕೊಳ್ಳುತ್ತಾ ಹೋಗುತ್ತಿದ್ದರೆ ನಂಬಿಕೊಂಡವರ […]

Read More

ಮೋದಿಗೆ ಹೇಳಿದ ಮಾತನ್ನು ಸಿದ್ರಾಮಯ್ಯ ಕೇಳಿಸಿಕೊಳ್ತಾರಾ?

ಮಾರುಕಟ್ಟೆಯಲ್ಲಿ ನೂರು ರೂಪಾಯಿ ವಸ್ತು ಕೊಳ್ಳುವಾಗ ಗ್ಯಾರಂಟಿ ಕೇಳುವ ನಾವು, ಸರ್ಕಾರ ಹಮ್ಮಿಕೊಳ್ಳುವ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಯಾಕೆ ಗ್ಯಾರಂಟಿ ಕೇಳುತ್ತಿಲ್ಲ…   ಧೋರಣೆಗಳು ಹೇಗೆ, ಎಷ್ಟು ಬೇಗ ಬದಲಾಗುತ್ತವೆ ನೋಡಿ. ಏಪ್ರಿಲ್ ತಿಂಗಳ ಆರಂಭ ಅದು. ಆಗಷ್ಟೇ ಚುನಾವಣಾ ಕಾವು ಚಟಪಟಗುಡುತ್ತಿತ್ತು. ಲೋಕಸಭಾ ಚುನಾವಣೆ ಪಡೆದುಕೊಳ್ಳುತ್ತಿರುವ ತಿರುವುಗಳ ಕುರಿತು `ಟೈಮ್’ ಮ್ಯಾಗಜಿನ್‍ನಲ್ಲಿ ಪ್ರಧಾನ ವರದಿ ಪ್ರಕಟವಾಗಿತ್ತು. `ವಾಟ್ ಇಂಡಿಯಾ ವಾಂಟ್ಸ್’ ಅನ್ನುವುದು ಅದರ ತಲೆಬರಹ. `ಹತ್ತು ವರ್ಷ ದೇಶ ಆಳಿದ ಕಾಂಗ್ರೆಸ್ ಪಕ್ಷದ […]

Read More

ಶೂದ್ರನೊಬ್ಬನ ತಪಸ್ಸು ಫಲಿಸುವ ಪರ್ವಕಾಲ

ಶೂದ್ರ ನಾಯಕನೊಬ್ಬ ಕೇವಲ ತನ್ನ ಧೀಶಕ್ತಿಯಿಂದಲೇ ಭಾರತದ ಆಡಳಿತದ ಚುಕ್ಕಾಣಿ ಹಿಡಿದಿರುವುದು ಸಾಮಾನ್ಯ ಸಾಧನೆಯೇ? ದೇಶದ ಒಂದು ದೊಡ್ಡ ಸಮುದಾಯ ಈ ಗಳಿಗೆಗಾಗಿ ಅದೆಷ್ಟು ವರ್ಷಗಳಿಂದ ಕಾದು ಕುಳಿತಿತ್ತೋ? ಮೋದಿಯವರನ್ನು ಶಂಕರಸಿಂಘ್ ವಾಘೇಲಾ ಹೊಗಳಿದ್ದರಲ್ಲಿ ಅಚ್ಚರಿಯಾಗುವಂಥದ್ದೇನೂ ಇಲ್ಲ. ಯಾಕೆಂದರೆ ಅವರಿಬ್ಬರ ಮೂಲ ಒಂದೇ. ಆದರೆ ಚುನಾವಣಾ ಫಲಿತಾಂಶದ ನಂತರ ಕಾಂಗ್ರೆಸ್‍ನ ಘಟಾನುಘಟಿಗಳಿಂದ ಹಿಡಿದು ಎಲ್ಲ ಪಕ್ಷ, ಪಂಗಡಗಳಿಗೆ ಸೇರಿದವರು ಮೋದಿ ಮ್ಯಾಜಿಕ್ಕನ್ನು ಒಪ್ಪಿಕೊಳ್ಳುತ್ತಿರುವ ರೀತಿ ಇದೆಯಲ್ಲಾ, ಅದು ನಿಜಕ್ಕೂ ನಮ್ಮನ್ನು ಆಲೋಚನೆಗೆ ಹಚ್ಚುತ್ತದೆ. ಹಾಗಿದ್ದರೆ ಇದನ್ನು ನಾವು […]

Read More

ಮೋದಿ ಗೆಲ್ಲಿಸಲು ಅದೆಷ್ಟು ಕಾರಣಗಳಿದ್ದವು ಗೊತ್ತೇ?

ಒಂದು ಸ್ಥಿರ ಸರ್ಕಾರಕ್ಕೆ, ಸಮರ್ಥ ನಾಯಕತ್ವಕ್ಕೆ ಜನಾದೇಶ ನೀಡಿದ ಭಾರತದ ಮತದಾರರಿಗೆ ಏನು ಹೇಳಿದರೂ, ಎಷ್ಟು ಹೇಳಿದರೂ ಸಾಲದು. ಇನ್ನಾದರೂ ಮೋದಿ ಟೀಕಾಕಾರರು ಮತ್ತು ರಾಜಕೀಯ ಎದುರಾಳಿಗಳು ಆಲೋಚನಾ ಕ್ರಮವನ್ನು ಬದಲಿಸಿಕೊಳ್ಳುತ್ತಾರೆಂದು ಆಶಿಸೋಣವೇ? ಅಂತೂಇಂತೂ ಸೋನಿಯಾ ಕನಸು ನನಸಾಯಿತು ಬಿಡಿ. ಇದೇನಾಶ್ಚರ್ಯ ಅಂತೀರಾ? ಗುಜರಾತ್ ಸಿಎಂ ಪಟ್ಟದಿಂದ ಮೋದಿಯವರನ್ನು ಪದಚ್ಯುತಗೊಳಿಸಲು ಕಳೆದ ಹತ್ತು ವರ್ಷದಿಂದ ಅವರು ಪಣ ತೊಟ್ಟಿದ್ದರು. ಆ ಕನಸೀಗ ನನಸಾಗಿದೆ! ಈ ಗೆಲುವು ಮೋದಿ ಮತ್ತು ಮೋದಿ ಒಬ್ಬರದೇ ಗೆಲುವು. ಶಬಾಷ್ ಅನ್ನಬಾರದೆ… ಮೋದಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top