ಬೇಕಿದೆ ಕೇಂದ್ರದ ಬಿಗ್ ಪ್ಯಾಕೇಜ್ – ಕೊರಾನಾಘಾತದ ಚೇತರಿಕೆಗೆ ಬೃಹತ್ ಪರಿಹಾರ ಸೂತ್ರ ಅಗತ್ಯ

– ಕೇಶವ್‌ ಪ್ರಸಾದ್‌ ಬಿ ಬೆಂಗಳೂರು ಕೊರೊನಾ ಸಂಕಟದ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೆರವಿನ ಘೋಷಣೆಯ ಬೆನ್ನಲ್ಲೇ, ಕೇಂದ್ರ ಸರಕಾರದ ವಿಶೇಷ ಪ್ಯಾಕೇಜ್ ಬಗ್ಗೆ ಜನರ ನಿರೀಕ್ಷೆ ಹೆಚ್ಚಿದೆ. ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಕೇಂದ್ರ ಮೊದಲ ಹಂತದಲ್ಲಿ 1.7 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದೆ. ಹೀಗಿದ್ದರೂ, ಪರಿಸ್ಥಿತಿ ಸುಧಾರಿಸಬೇಕಿದ್ದರೆ ಇನ್ನೂ ಒಟ್ಟಾರೆಯಾಗಿ 10-15 ಲಕ್ಷ ಕೋಟಿ ರೂ. ಬೇಕು ಎಂಬುದು ಪರಿಣಿತರ ಅಭಿಮತ. ಕೇಂದ್ರ ಸರಕಾರ ಸಣ್ಣ ಮತ್ತು ಮಧ್ಯಮ ಉದ್ದಿಮೆ ಸೇರಿದಂತೆ […]

Read More

ಬೆಚ್ಚಿಬೀಳಿಸಿದ ವಿಷಾನಿಲ ಉಸಿರುಗಟ್ಟಿಸಿದ ಪಾಲಿಸ್ಟೈರೀನ್

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಎಲ್‌ಜಿ ಪಾಲಿಮರ್ಸ್ ಫ್ಯಾಕ್ಟರಿಯಲ್ಲಿ ನಡೆದ ವಿಷಾನಿಲ ದುರಂತ, ಮಧ್ಯಪ್ರದೇಶದ ಭೋಪಾಲ್ ವಿಷಾನಿಲ ದುರಂತವನ್ನು ನೆನಪಿಸಿಕೊಂಡು ಇಡೀ ದೇಶವೇ ಬೆಚ್ಚುವಂತೆ ಮಾಡಿದೆ. ಈ ಫ್ಯಾಕ್ಟರಿ ಯಾರದು, ವಿಷಾನಿಲ ಯಾವುದು, ಅದರಿಂದಾಗುವ ಪರಿಣಾಮವೇನು? ಇಲ್ಲಿದೆ ವಿವರ. ಯಾವುದೀ ಫ್ಯಾಕ್ಟರಿ? ವಿಷಾನಿಲ ದುರಂತ ನಡೆದ ಎಲ್‌ಜಿ ಪಾಲಿಮರ್ಸ್ ಫ್ಯಾಕ್ಟರಿ ವಿಶಾಖಪಟ್ಟಣದಿಂದ 15 ಕಿಲೋಮೀಟರ್ ದೂರದ ಗೋಪಾಲಪಟ್ಟಣಂ ಪೇಟೆಯ ಆರ್ ವೆಂಕಟಾಪುರಂ ಗ್ರಾಮದಲ್ಲಿದೆ. ಈ ಫ್ಯಾಕ್ಟರಿಯನ್ನು ಸ್ಥಾಪಿಸಿದ್ದು 1961ರಲ್ಲಿ ಹಿಂದೂಸ್ತಾನ್ ಪಾಲಿಮರ್ಸ್ ಎಂಬ ಹೆಸರಿನಿಂದ, ಪಾಲಿಸ್ಟಿರೀನ್ ರಾಸಾಯನಿಕ ಉತ್ಪಾದನೆಗಾಗಿ ಆರಂಭಿಸಲಾಯಿತು. […]

Read More

ಪ್ಯಾಕೇಜ್ ಘೋಷಣೆ ಭೇಷ್ – ಇನ್ನಷ್ಟು ಶ್ರಮಿಕರಿಗೆ ವಿಸ್ತರಣೆಯ ಅಪೇಕ್ಷೆ

ಕೊರೊನಾ ಲಾಕ್‌ಡೌನ್‌ ಹೊಡೆತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗ ಮತ್ತು ವೃತ್ತಿಪರರ ನೆರವಿಗೆ ರಾಜ್ಯ ಸರಕಾರ ಧಾವಿಸಿದ್ದು, 1610 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಿಸಿದೆ. ಕರ್ನಾಟಕ ಸರಕಾರದ ಈ ಕ್ರಮ ಇತರ ರಾಜ್ಯಗಳಿಗೆ ಮತ್ತು ಕೇಂದ್ರ ಸರಕಾರಕ್ಕೆ ಮಾದರಿ. ಅಗಸರು, ಕ್ಷೌರಿಕರು, ಆಟೋ- ಟ್ಯಾಕ್ಸಿ ಚಾಲಕರು, ಹೂವು ಬೆಳೆಗಾರರು, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಈ ನೆರವು ಘೋಷಿಸಲಾಗಿದ್ದು, ಫಲಾನುಭವಿಗಳ ಖಾತೆಗೆ ಹಣ ನೇರವಾಗಿ ಜಮೆಯಾಗಲಿದೆ. ಅದರಂತೆ ಹೂ ಬೆಳೆಗಾರರು ಹೆಕ್ಟೇರ್‌ಗೆ 25 […]

Read More

ಮೊದಲ ಪತ್ರಕರ್ತ ನಾರದ ಮುನಿ

ಇಂದು ನಾರದ ಜಯಂತಿ ವಿಶ್ವದ ಮೊದಲ ಪತ್ರಕರ್ತನೆಂದು ನಾರದ ಮುನಿಗಳನ್ನೇ ಹೆಸರಿಸಬೇಕಾಗುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ವಾರ್ತೆ, ವಿಶ್ಲೇಷಣೆಯನ್ನು ಒಯ್ಯುತ್ತಿದ್ದ ಈ ನಾರದ ಮುನಿಗಳು ಪರಮ ಹರಿಭಕ್ತರು. ತಮ್ಮ ಈ ಕಾಯಕದಿಂದಲೇ ದುಷ್ಟ ಶಿಕ್ಷೆ, ಶಿಷ್ಟ ರಕ್ಷಣೆಯ ಕಾರ್ಯವನ್ನು ಸಾಧಿಸುತ್ತಿದ್ದವರು. ಇಂದಿನ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ವಸ್ತುನಿಷ್ಠ ಪತ್ರಿಕೋದ್ಯಮಕ್ಕೆ ಅವರೇ ಪ್ರೇರಣೆ. ವೈಶಾಖ ಪೂರ್ಣಿಮೆಯ ನಂತರ ಕೃಷ್ಣ ಪಕ್ಷ ಪಾಡ್ಯದಂದು ನಾರದ ಜಯಂತಿ ಬರುತ್ತದೆ. ಹೆಚ್ಚಿನ ಎಲ್ಲ ಪುರಾಣಗಳಲ್ಲೂ ನಾರದ ಉಲ್ಲೇಖವಿದೆ. ರಾಮಾಯಣ ಮಹಾಭಾರತ ಭಾಗವತಗಳಲ್ಲೂ […]

Read More

ಈ ರೀತಿ ಆಲೋಚನೆ ಮಾಡುವ ಯುವಕರು‌ ಸರಕಾರಗಳಿಗೂ ಮಾದರಿ ಅಲ್ಲವೇ?

ಮಾರುಕಟ್ಟೆಗೆ ಬಂದಿದೆ ಆಗ್ರಾಪೇಠಾ, ಅದುವೇ ಕುಂಬಳಕಾಯಿ ಪೇಡಾ! – ವಿ-ಟೆಕ್‌ ಸಂಸ್ಥೆಯ ಶೋಧನೆ, ರೈತರ ಕೈ ಹಿಡಿದ ಕ್ರಿಯಾಶೀಲ ಕನಸುಗಾರ ಕುಂಟುವಳ್ಳಿ ವಿಶ್ವನಾಥ್‌ ತೀರ್ಥಹಳ್ಳಿ: ವಿ-ಟೆಕ್‌ ಮಲೆನಾಡಿನ ಪುಟ್ಟ ಹಳ್ಳಿ ಕುಂಟುವಳ್ಳಿಯಲ್ಲಿರುವ ರೈತಸ್ನೇಹಿ ಉದ್ಯಮ. 2 ದಶಕದ ಹಿಂದೆ ಅಡಕೆ ಸುಲಿಯುವ ಯಂತ್ರ ಆವಿಷ್ಕರಿಸಿ ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದ ಸಂಸ್ಥೆ. ಅನೇಕ ಪ್ರಯೋಗಗಳ ಮೂಲಕ ರೈತಸ್ನೇಹಿಯಾಗಿ ಯಶಸ್ಸು ಪಡೆದಿರುವ ವಿ-ಟೆಕ್‌ ಇದೀಗ ಕುಂಬಳಕಾಯಿ ಬೆಳೆದ ರೈತರ ಕೈ ಹಿಡಿಯುವ ಪ್ರಯತ್ನ ಮಾಡಿದೆ. ಉಪಯುಕ್ತ ಕ್ರಿಯಾಶೀಲ ಕನಸುಗಳ […]

Read More

ಇಂದು ಬುದ್ಧ ಪೂರ್ಣಿಮೆ: ತಿಳಿವಿನ ಬೆಳಕು ತಥಾಗತ

– ಬಿ. ಭಗವಾನ್‌‌.  ​‘ಬುದ್ಧ’ ಎಂದರೆ ಎಚ್ಚರಗೊಂಡವನು. ಬುದ್ಧ ತಾನು ದೇವರು, ಪ್ರವಾದಿ, ಸುಧಾರಕ ಎಂದು ಹೇಳಿಕೊಳ್ಳಲಿಲ್ಲ. ಬದುಕಿನ ಆಳ, ನಿರಾಳವನ್ನು ಸಾಧ್ಯವಾದಷ್ಟು ಅರ್ಥೈಸಿಕೊಳ್ಳಲು ಹೊರಟ ಮಾನವನಾಗಿದ್ದ. ಅರಮನೆಯಲ್ಲಿ ರಾಜಕುಮಾರನಾಗಿ ಸಕಲ ಭೋಗ, ವೈಭೋಗಗಳನ್ನು ಅನುಭವಿಸಬಹುದಾಗಿದ್ದವನು ವೃದ್ಧಾಪ್ಯ, ರೋಗ, ಸಾವು ಬದುಕಿನ ಅವಿಭಾಜ್ಯ ಅಂಗಗಳೆಂದು ಅರಿತ. ಜೀವನದ ವ್ಯಾಖ್ಯೆ ಅಷ್ಟು ಸರಳವಾದುದಲ್ಲ ಎನ್ನುವುದನ್ನು ಮನಗಂಡ. ನಿಜ ಬದುಕಿನ ಭಾಷ್ಯಕ್ಕಾಗಿ ಅಲೆಮಾರಿ ಸಂತನಾದ, ಲೋಕಾನುಭವಕ್ಕಾಗಿ ಅವನ ಪರ್ಯಟನ. ಬಲ್ಲವರನ್ನು ಕಂಡಲ್ಲಿ ಗುರುವಾಗಿಸಿಕೊಂಡ. ಅವರೊಡನೆ ಚರ್ಚಿಸಿದ, ಸಂವಾದಿಸಿದ. ಮುಂದೆ ವಿಶ್ವಗುರುವೆನ್ನಿಸಿದ. […]

Read More

ದುಷ್ಟ ಪ್ರವೃತ್ತಿಯ ಅನಾವರಣ – ದಿಲ್ಲಿಯ ಘಟನೆ ಮರುಕಳಿಸದಿರಲಿ

ಸಾಮಾಜಿಕ ಜಾಲತಾಣ ಇನ್ಸ್‌ಟಾಗ್ರಾಂನಲ್ಲಿ ರಹಸ್ಯ ಗ್ರೂಪ್ ರಚಿಸಿಕೊಂಡು ಸಹಪಾಠಿ ವಿದ್ಯಾರ್ಥಿನಿಯರನ್ನು ಗ್ಯಾಂಗ್ ರೇಪ್ ಮಾಡುವ ಬಗ್ಗೆ ಹೊಂಚು ಹಾಕುತ್ತಿದ್ದ ದಿಲ್ಲಿಯ ಪ್ರತಿಷ್ಠಿತ ವರ್ಗದ ವಿದ್ಯಾರ್ಥಿಗಳ ಬಳಗವೊಂದನ್ನು ದಿಲ್ಲಿ ಪೊಲೀಸರು ಭೇದಿಸಿದ್ದಾರೆ. ಇದರ ಅಡ್ಮಿನ್‌ನನ್ನು ಬಂಧಿಸಿದ್ದು, ಆತ ಸೇರಿದಂತೆ ಇತರ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. 18ರ ಹರೆಯದ ಈ ಅಡ್ಮಿನ್‌ನ್ನ ಗ್ರೂಪ್‌ನಲ್ಲಿ ಹಲವು ಅಪ್ರಾಪ್ತ ವಯಸ್ಕರೂ ಇದ್ದಾರೆ. ಈ ಪ್ರಕರಣವನ್ನು ಒಬ್ಬಾಕೆ ವಿದ್ಯಾರ್ಥಿನಿ ಬಯಲಿಗೆಳೆದಿದ್ದಳು. ಈ ವಿದ್ಯಾರ್ಥಿನಿಯ ಫೋಟೋವನ್ನೂ ತಿದ್ದಿ ನಗ್ನಚಿತ್ರಕ್ಕೆ ಜೋಡಿಸಿ ಈ ಗ್ರೂಪ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಈ […]

Read More

ಸವಾಲಿನ ನಡುವೆ ಉತ್ಪಾದನೆಗೆ ಕೈಗಾರಿಕೆಗಳು ರೆಡಿ

ಲಾಕ್‌ಡೌನ್‌ ಎರಡು ವಾರಗಳ ತನಕ ಮುಂದುವರಿದಿದ್ದರೂ, ಹಸಿರು ಮತ್ತು ಕೇಸರಿ ವಲಯಗಳಲ್ಲಿ ಗಣನೀಯ ಸಡಿಲವಾಗಿರುವುದರಿಂದ ರಾಜ್ಯದಲ್ಲಿ ಉದ್ದಿಮೆಗಳ ಚಟುವಟಿಕೆಗಳನ್ನು ಪುನರಾರಂಭಿಸಲು ನಾನಾ ಇಂಡಸ್ಟ್ರಿಗಳು ಪೂರ್ವ ಸಿದ್ಧತೆ ನಡೆಸುತ್ತಿವೆ. ಹಾಗಿದ್ದೂ, ರಾಜ್ಯವೂ ಸೇರಿದಂತೆ ದೇಶದ ಹಲವು ಉದ್ದಿಮೆಗಳು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದೂ ಸುಳ್ಳಲ್ಲ. ವಾಣಿಜ್ಯ ಪರ ಸಂಘಟನೆಗಳು ಶೀಘ್ರದಲ್ಲೇ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದರೂ, ಉದ್ಯಮಿಗಳು ಹಿಂದೆಂದೂ ಕಂಡರಿಯದ ಸವಾಲುಗಳು ಮತ್ತು ಅನಿಶ್ಚಿತತೆಯ ನಿರೀಕ್ಷೆಯಲ್ಲಿದ್ದಾರೆ. ಕೋವಿಡ್-19 ಬಿಕ್ಕಟ್ಟು ಮತ್ತು ಅನಿಶ್ಚಿತತೆಯ ಪರಿಣಾಮ ಗ್ರಾಹಕರ ಬೇಡಿಕೆ […]

Read More

ಬಾಲ್ಯದಲ್ಲಿ ವಾಸಯೋಗ್ಯ ಮನೆಯೇ ಇಲ್ಲದ ಹುಡುಗಿ ಕಲೆಕ್ಟರ್ ಆಗಬಹುದಾದರೆ ಸಾಧನೆಗೆ ಅಸಾಧ್ಯ ಯಾವುದು? ಧನ್ಯಾ ಪ್ರೇರಣೆ ಧನ್ಯ!

ಬುಡಕಟ್ಟು ಯುವತಿ ಈಗ ಅಸಿಸ್ಟಂಟ್ ಕಲೆಕ್ಟರ್ -ಮಲಯಾಳಂನಲ್ಲೇ ಐಎಎಸ್ ಪರೀಕ್ಷೆ ಬರೆದಿದ್ದರು ತಿರುವನಂತಪುರಂ: ಮುಂದೆ ಗುರಿ, ಹಿಂದೆ ಗುರು ಜತೆಗೊಂದಿಷ್ಟು ಛಲ, ಪರಿಶ್ರಮವಿದ್ದರೆ ನಿಜಕ್ಕೂ ಅಸಾಧ್ಯವಾದುದು ಯಾವುದೂ ಇಲ್ಲ. ಜಾತಿ, ಕುಲ, ಬಡತನ, ಸಾಮಾಜಿಕ ಸ್ಥಾನಮಾನ ಯಾವುದೂ ಸಾಧನೆಗೆ ಅಡ್ಡಿಯಾಗುವುದಿಲ್ಲ. ಇದನ್ನು ಕೇರಳದ ಬುಡಕಟ್ಟು ಸಮುದಾಯದ ಯುವತಿ ಶ್ರೀಧನ್ಯಾ ಸುರೇಶ್ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. 2018ರಲ್ಲಿ ಐಎಎಸ್ ಪರೀಕ್ಷೆಯನ್ನು ಪಾಸ್ ಮಾಡಿದ ಕೇರಳದ ಬುಡಕಟ್ಟು ಸಮುದಾಯದ ಮೊದಲ ಯುವತಿ ಎಂಬ ಹಿರಿಮೆಗೆ ಪಾತ್ರರಾದ ಶ್ರೀಧನ್ಯಾ ಈಗ ಕೊಯಿಕ್ಕೋಡ್‌ನ […]

Read More

ನೆಮ್ಮದಿಗೆ ಮದ್ಯ ಕೊಳ್ಳಿ

– ಹಣಕ್ಕಾಗಿ ಪತ್ನಿಯ ಕೊಲೆ, ಸ್ನೇಹಿತನ ಮರ್ಡರ್ ವಿಕ ಸುದ್ದಿಲೋಕ ಬೆಂಗಳೂರು ಲಾಕ್‌ಡೌನ್‌ ಅವಧಿಯಲ್ಲಿ ಕುಡಿತದಿಂದಾಗುವ ಕೌಟುಂಬಿಕ ಹಿಂಸೆ ಪ್ರಕರಣಗಳು ಮತ್ತು ಅಪರಾಧಗಳ ಸಂಖ್ಯೆ ತಳ ಮುಟ್ಟಿತ್ತು. ಮದ್ಯ ಮಾರಾಟಕ್ಕೆ ಅವಕಾಶ ಸಿಕ್ಕ ಎರಡೇ ದಿನದಲ್ಲಿ ಕುಡುಕರ ಹಾವಳಿ ಮಿತಿಮೀರಿದೆ. ‘ಮದ್ಯಾಸುರ’ ಕುಟುಂಬಗಳ ನೆಮ್ಮದಿಗೆ ಕೊಳ್ಳಿ ಇಟ್ಟಿದ್ದಾನೆ. ಮೈಸೂರು ಮತ್ತು ಇಳಕಲ್‌ನಲ್ಲಿ ಮದ್ಯದ ಅಮಲಿನಿಂದಾದ ಪ್ರತ್ಯೇಕ ಎರಡು ಘಟನೆಗಳಲ್ಲಿ ಇಬ್ಬರು ಬಲಿಯಾಗಿದ್ದಾರೆ. ಮತ್ತೊಂದು ಕಡೆ, ಕೋಲಾರ ಜಿಲ್ಲೆಯಲ್ಲಿ ಭೂಪನೊಬ್ಬ ಎಣ್ಣೆ ಮತ್ತಿನಲ್ಲಿ ಹಾವನ್ನೇ ಕಚ್ಚಿ ಬಿಸಾಡಿದ್ದಾನೆ! ಇಳಕಲ್‌ನಲ್ಲಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top