– ಡಾ. ಎಚ್ ಸುದರ್ಶನ್ ಬಲ್ಲಾಳ್. ಸದ್ಯ ನಾವೆಲ್ಲ ಎದುರಿಸುತ್ತಿರುವ ಕೊರೊನಾ ಸಾಂಕ್ರಾಮಿಕದಂತಹ ಮತ್ತೊಂದು ಸಾಂಕ್ರಾಮಿಕದ ತೀವ್ರತೆಯನ್ನು ನಾನು ಕಳೆದ 50 ವರ್ಷಗಳ ವೃತ್ತಿ ಜೀವನದಲ್ಲಿ ಕಂಡಿರಲಿಲ್ಲ. ಏಡ್ಸ್ ಪ್ರಸರಣದ ವೇಳೆ ಅಮೆರಿಕದಲ್ಲಿದ್ದೆ, ಅಲ್ಲದೆ ಎಚ್1ಎನ್1, ಸಾರ್ಸ್, ಮೆರ್ಸ್ ಮತ್ತು ಸಿಡುಬು ರೋಗಗಳಿದ್ದಂತಹ ಅನೇಕರಿಗೆ ಚಿಕಿತ್ಸೆ ನೀಡಿದ್ದೇನೆ. ಆದರೆ ಈ ಎಲ್ಲ ಸಂದರ್ಭಗಳಲ್ಲಿ ಎಂದಿಗೂ ನನಗೆ ಸದ್ಯದ ಕೊರೊನಾ ಮಾದರಿಯಂಥದ್ದು ಗೋಚರಿಸಲಿಲ್ಲ. ನಾವು ಈಗಲೂ ಈ ಕೋವಿಡ್-19 ವೈರಾಣು ಬಗ್ಗೆ ಅರಿತುಕೊಳ್ಳುವ ಸ್ಥಿತಿಯಲ್ಲಿಯೇ ಇದ್ದೇವೆ ಮತ್ತು ಜತೆಜತೆಗೆ […]