ಕೊರೊನಾದಿಂದ ಬದಲಾದ ಟ್ರೆಂಡ್: ಯೂಟ್ಯೂಬ್‌ನಲ್ಲೇ ಪೂಜೆ ನೇರ ಪ್ರಸಾರ, ನಿತ್ಯ ಪ್ರವಚನ, ಸತ್ಸಂಗ – ಗೌರಿಪುರ ಚಂದ್ರು ಬೆಂಗಳೂರು. ಕೊರೊನಾ ಲಾಕ್‌ಡೌನ್‌ನಿಂದಾಗಿ ಮಠ, ಮಂದಿರಗಳಿಗೆ ಹೋಗುವುದು ನಿಂತಿದೆ. ಆದರೆ ಆನ್‌ಲೈನ್ ಮಾರ್ಗದ ಮೂಲಕ ಮನೆಮನೆಗಳಲ್ಲಿ ಭಕ್ತಿ ದಾಸೋಹ ಮುಂದುವರಿದಿದೆ. ಸ್ಕೈಪ್, ಫೇಸ್‌ಬುಕ್ ಪೇಜ್ ಹಾಗೂ ವಿಡಿಯೊ ಚಾಟಿಂಗ್ ಮೂಲಕ ವೇದ, ಉಪನಿಷತ್, ಸುಧಾಮಂಗಳ ಪಾಠ ಕಲಿಯುವವರ ಸಂಖ್ಯೆ ಹೆಚ್ಚಿದೆ. ಪ್ರವಚನ ಪ್ರಿಯರು, ಅಧ್ಯಾತ್ಮ ಆಸಕ್ತರು ಯೂಟ್ಯೂಬ್ ಮೊರೆ ಹೋಗುತ್ತಿದ್ದಾರೆ. ಫೇಸ್‌ಬುಕ್‌ನಲ್ಲೂ ಸ್ಪಿರಿಚುಯಲ್ ಉಪನ್ಯಾಸಗಳು ನಿತ್ಯ ಬಿತ್ತರವಾಗುತ್ತಿವೆ. ಉತ್ತರಾದಿಮಠದ […]