ವಂಚಕರು ಮತ್ತು ಭ್ರಷ್ಟಾಚಾರಿಗಳು ತಮಗೆ ಸಿಗುವ ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ. ಇದಕ್ಕೆ ಸಾಕ್ಷಿ ಕೊರೊನಾ ಹುಟ್ಟಿಸಿರುವ ಭಯದ ವಾತಾವರಣದಲ್ಲೂ ವಂಚಕರು ತಮ್ಮ ನೈಪುಣ್ಯತೆ ಮೆರೆಯುತ್ತಿರುವುದು! ಆತಂಕದ ಪರಿಸ್ಥಿತಿಯನ್ನು ಮೋಸಗಾರರು ತಮ್ಮ ಲಾಭದ ಅವಕಾಶವಾಗಿ ಬಳಸಿಕೊಳ್ಳುತ್ತಿದ್ದಾರೆ. ಉಚಿತವಾಗಿ ಕೋವಿಡ್ ಟೆಸ್ಟ್ ಮಾಡಲಾಗುವುದು ಎಂದು ನಿಮ್ಮ ಫೋನು, ಮೇಲ್ ಐಡಿ, ವಾಟ್ಸ್ಆ್ಯಪ್‌ಗಳಿಗೆ ಕೆಲವು ಸಂದೇಶಗಳು ಬರುತ್ತಿದ್ದರೆ ಅಂಥವುಗಳನ್ನು ನಂಬಲು ಹೋಗಬೇಡಿ. ಅವು ನಿಮ್ಮ ಹಣವನ್ನು ಲಪಟಾಯಿಸುವ ಸಂದೇಶಗಳಾಗಿರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಜೂನ್ 21ರಿಂದ ಇಂಥ ಫಿಶ್ಯಿಂಗ್ ಮೇಲ್‌ಗಳು ರವಾನೆಯಾಗುತ್ತಿವೆ. ಮೋಸಗಾರರ […]