ಫ್ರಾನ್ಸ್‌ನಿಂದ ಐದು ರಫೇಲ್ ಯುದ್ಧವಿಮಾನಗಳು ಭಾರತಕ್ಕೆ ಆಗಮಿಸಿದ್ದು, ಅಂಬಾಲ ವಾಯುನೆಲೆಯಲ್ಲಿ ಇಳಿದಿವೆ. ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ರಫೇಲ್ ಖರೀದಿಯ ಬಗ್ಗೆ ಹೆಚ್ಚು ಚರ್ಚೆಯಾಗಿತ್ತು. ರಫೇಲ್‌ನಂಥ ಯುದ್ಧವಿಮಾನಗಳ ಖರೀದಿ ಹೊಸದಲ್ಲ, ಅಂಥ ವಿಚಾರಗಳು ಜನಸಾಮಾನ್ಯರ ನೆಲೆಯಲ್ಲಿ ಹೆಚ್ಚು ಚರ್ಚೆಯಾಗುವುದಿಲ್ಲವಾದರೂ, ರಫೇಲ್ ಫೈಟರ್‌ಜೆಟ್‌ಗಳ ವಿಚಾರದಲ್ಲಿ ಹಾಗಾಗಿಲ್ಲ. ದೇಶದ ಜನತೆ ಕುತೂಹಲದಿಂದ ಇವುಗಳನ್ನು ನೋಡಿದ್ದಾರೆ. ಇವುಗಳ ಬಗ್ಗೆ ಸಾಕಷ್ಟು ಉತ್ಪ್ರೇಕ್ಷೆಯೂ ಹಬ್ಬಿದೆ; ಹಾಗೇ ಉಡಾಫೆಯೂ ಕೆಲವು ವಲಯದಲ್ಲಿ ಇದೆ. ಈ ಎರಡೂ ವೈಖರಿಗಳನ್ನು ಕೈಬಿಟ್ಟು ವಸ್ತುನಿಷ್ಠವಾಗಿ ಈ ವಿಚಾರವನ್ನು ನೋಡುವುದು […]