ಚೀನಾಕ್ಕೆ ಭಯ ಮೂಡಿಸಿದ ಹೆದ್ದಾರಿ ಡಿಎಸ್‌ಡಿಬಿಒ

ಭಾರತ ಗಡಿಯಲ್ಲಿ ನಡೆಸುತ್ತಿರುವ ನಿರ್ಮಾಣ ಚಟುವಟಿಕೆ, ಅದರಲ್ಲೂ ಮುಖ್ಯವಾಗಿ ಡಿಎಸ್‌ಡಿಬಿಒ ರಸ್ತೆ ಎಂದೇ ಹೆಸರಾಗಿರುವ ಗಡಿಯಂಚಿನ ರಸ್ತೆ ಚೀನಾದ ಕಿರಿಕಿರಿಗೆ ಕಾರಣವಾಗಿದೆ. ಈ ರಸ್ತೆಯ ಪ್ರಾಮುಖ್ಯತೆ ಏನು? ತಿಳಿಯೋಣ ಬನ್ನಿ. ಚೀನಾ ಹಾಗೂ ಭಾರತದ ಯೋಧರ ನಡುವೆ ಚಕಮಕಿ ನಡೆದ ಗಲ್ವಾನ್ ನದಿ ಹಾಗೂ ವಾಸ್ತವಿಕ ಗಡಿ ರೇಖೆಗೆ ಸಮಾನಾಂತರವಾಗಿ ಒಂದು ಸರ್ವಋುತು ರಸ್ತೆಯನ್ನು ಭಾರತ ನಿರ್ಮಿಸುತ್ತಿದೆ. ಇದು ದರ್ಬುಕ್- ಶಾಯಕ್- ದೌಲತ್ ಬೇಗ್ ಓಲ್ಡಿ ರಸ್ತೆ (ಡಿಎಸ್‌ಡಿಬಿಒ ರೋಡ್) ಎಂದೇ ಹೆಸರಾಗಿದೆ. ವ್ಯೂಹಾತ್ಮಕವಾಗಿ ಅತ್ಯಂತ ಪ್ರಮುಖ […]

Read More

ಚೀನಾ ಗಡಿಯಲ್ಲಿ ಗುಂಡು ಹಾರಲಿಲ್ಲವೇಕೆ?

ನಲವತ್ತು ವರ್ಷಗಳಿಂದ ಈಚೆಗೆ ಗಲ್ವಾನ್‌ ಪ್ರಕರಣ ನಡೆಯುವವರೆಗೆ ಭಾರತ- ಚೀನಾ ಗಡಿಯಲ್ಲಿ ಒಂದೇ ಒಂದು ಗುಂಡು ಹಾರಿಲ್ಲ, ಒಬ್ಬನೇ ಒಬ್ಬ ಯೋಧ ಮೃತಪಟ್ಟಿಲ್ಲ. ಇದಕ್ಕೆ ಕಾರಣವಾಗಿರುವುದು ಮೂರು ಒಪ್ಪಂದಗಳು. ಚೀನಾ ಈಗ ಈ ಮೂರೂ ಒಪ್ಪಂದಗಳನ್ನು ಸಾರಾ ಸಗಟಾಗಿ ಉಲ್ಲಂಘಿಸಿದೆ. ಯಾವುವೀ ಮೂರು ಒಪ್ಪಂದ? 1993ರ ಒಪ್ಪಂದ ಭಾರತ ಹಾಗೂ ಚೀನಾದ ಗಡಿ ಭದ್ರತೆಯ ವಿಚಾರದಲ್ಲಿ ಮೊದಲ ಬಾರಿ ಏರ್ಪಟ್ಟ ಒಪ್ಪಂದ 1993ರದ್ದು. ಈ ಒಪ್ಪಂದಕ್ಕೆ ಸಹಿ ಹಾಕಿದವರು ಆಗಿನ ಭಾರತ ಪ್ರಧಾನಿ ಪಿ.ವಿ. ನರಸಿಂಹರಾವ್‌. ಇದಕ್ಕೂ […]

Read More

ಹಿಮಾಲಯದ ದಳ್ಳುರಿ

ಕನ್ನಡದ ಖ್ಯಾತ ಕಾದಂಬರಿಕಾರ ನಿರಂಜನ ಅವರು ಬರೆದ ‘ಹಿಮಾಲಯದ ದಳ್ಳುರಿ’ ಕೃತಿ ಭಾರತ ಮತ್ತು ಚೀನಾ ಸಂಘರ್ಷದ ಇತಿಹಾಸವನ್ನು ದಾಖಲಿಸಿರುವ ಒಂದು ಆಕರಗ್ರಂಥ. ಚೀನಾ ದೇಶ ಭಾರತದ ಮೇಲೆ ದುರಾಕ್ರಮಣ ನಡೆಸುತ್ತಿದ್ದ ಸಂದರ್ಭದಲ್ಲಿಯೇ (1962ರ ನವೆಂಬರ್‌ 15) ಈ ಪುಸ್ತಕ ಪ್ರಕಟವಾಗಿತ್ತು. ವಿಜಯ ಕರ್ನಾಟಕಕ್ಕಾಗಿ ಇದರ ಸಂಗ್ರಹ ನಿರೂಪಣೆ ಸುಧೀಂದ್ರ ಹಾಲ್ದೊಡ್ಡೇರಿ. – ನಿರಂಜನ ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತವನ್ನು ಬ್ರಿಟಿಷರು ಆಕ್ರಮಿಸಿದಾಗ, ಕಾಶ್ಮೀರದಿಂದ ಬರ್ಮಾದವರೆಗೂ ತಮ್ಮ ಗಡಿಯನ್ನು ಅವರು ಭದ್ರಗೊಳಿಸಿದರು. ಲಡಾಖ್‌ ಪ್ರದೇಶದಲ್ಲಿ ಆ ಮೊದಲೇ ಗಡಿಯ […]

Read More

ಗಲ್ವಾನ್‌ ಸೇಡಿಗೆ ಭಾರತ ಬಲವಾನ್

ಈಗ ಎಲ್ಲರ ಮನದಲ್ಲಿ ಇರೋ ಪ್ರಶ್ನೆ ಎರಡೇ- ಮುಂದೇನು? ಈಗ ಯಾಕೆ ಈ ಸಂಘರ್ಷ ನಡೆಯಿತು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ವಿದೇಶಾಂಗ ತಜ್ಞರು ಮಾಡುತ್ತಿದ್ದಾರೆ. ಅಣ್ವಸ್ತ್ರ ಹೊಂದಿರುವ ಎರಡು ಪ್ರಬಲ ರಾಷ್ಟ್ರಗಳು ಹೀಗೆ ಅನಪೇಕ್ಷಿತ ಸಂದರ್ಭದಲ್ಲಿ ಕಾದಾಟಕ್ಕಿಳಿದಿರುವುದು ದಿಗಿಲಿಗೆ ಕಾರಣವಾಗಿದೆ. ಆದರೆ, ಚೀನಾದಲ್ಲಿ ಕೋವಿಡ್‌ 19 ವೈರಸ್‌ ಪತ್ತೆಯಾದ ನಂತರ ಚೀನಾದ ನಡವಳಿಕೆಯನ್ನು ವಿಶ್ಲೇಷಿಸಿದರೆ ನಮ್ಮೆಲ್ಲ ಅನುಮಾನಗಳಿಗೆ ಪರಿಹಾರ ದೊರೆಯಬಹುದು. ಕಳೆದ ಕೆಲವು ತಿಂಗಳಿಂದ ಅನೇಕ ಆಕ್ರಮಣಕಾರಿ ನಡೆಗಳನ್ನು ಚೀನಾ ಪ್ರದರ್ಶಿಸಿದೆ. ಹಾಂಕಾಂಗ್‌ನಲ್ಲಿ ಅಸ್ತಿತ್ವದಲ್ಲಿದ್ದ […]

Read More

ಗಿಲ್ಗಿಟ್‌ ವಿಚಾರದಲ್ಲಿ ಭಾರತದ ನಿಲುಮೆಗೆ ಚೀನಾ ಗಿರಗಿಟ್ಲೆ

ಸ್ವಾವಲಂಬನೆಯ ಮೂಲಕ ವ್ಯಾಪಾರ ವಹಿವಾಟಿನಲ್ಲೂ ಚೀನಾವನ್ನು ಮಣಿಸಬೇಕು. – ಹರಿಪ್ರಕಾಶ್‌ ಕೋಣೆಮನೆ. ಚೀನಾದ ವುಹಾನ್‌ ಪ್ರಾಂತ್ಯದಿಂದ ಹರಡಿದ ಕೊರೊನಾ ಎಂಬ ವೈರಸ್‌ ಇಡೀ ಜಗತ್ತಿನ ತಲ್ಲಣಕ್ಕೆ ಕಾರಣವಾಗಿದೆ. ಇಡೀ ಮನುಕುಲಕ್ಕೆ ವೈರಸ್‌ ಹರಡಲು ಕಾರಣವಾದ ಅದೇ ಚೀನಾ ಭಾರತಕ್ಕೆ ಸದಾ ಮಗ್ಗಲು ಮುಳ್ಳು. ಈಗ ಕೊರೊನಾ ಕಾಟದ ಜತೆಗೆ ಮಿಲಿಟರಿ ಬೆದರಿಕೆ ಒಡ್ಡುತ್ತಿದೆ. ಇದಕ್ಕೆ ಭಾರತವೇನು ಹೆದರಿಲ್ಲ. ಈಗಂತೂ ಗಟ್ಟಿ ನಾಯಕತ್ವವೇ ಇರುವುದರಿಂದ, ಹೆದರಿಸುವ ಸ್ಥಾನದಲ್ಲೂ ಇದೆ. ಹಾಗೆ ಸುಮ್ಮನೇ 2017ರ ಸನ್ನಿವೇಶವನ್ನು ಒಮ್ಮೆ ನೆನಪಿಸಿಕೊಳ್ಳೋಣ. ಭಾರತ- […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top