– ಗೋಪಾಲ ನಾಗರಕಟ್ಟೆ. ಶ್ರೀರಾಮನ ನಿರ್ಯಾಣದ ನಂತರ ಆತನ ಸುಪುತ್ರ ಕುಶನು ತನ್ನ ಪಿತನ ಜನ್ಮಸ್ಥಾನದಲ್ಲಿ ಭವ್ಯವಾದ ಮಂದಿರ ನಿರ್ಮಿಸಿದ. ಸಹಸ್ರಾರು ವರ್ಷಗಳ ನಂತರ ರಾಜಾ ವಿಕ್ರಮಾದಿತ್ಯನಿಂದ ಆ ಭವ್ಯ ಮಂದಿರ ಜೀರ್ಣೋದ್ಧಾರದ ಪವಿತ್ರ ಕಾರ್ಯ ನೆರವೇರಿತು. ಅಯೋಧ್ಯಾ ಶ್ರೀರಾಮ ಜನ್ಮಸ್ಥಾನದ ದರ್ಶನವು ಮೋಕ್ಷ ಪ್ರಾಪ್ತಿಯ ಮಾರ್ಗವೆಂಬ ಶ್ರದ್ಧೆಯಿಂದ ಜೀವನದಲ್ಲೊಮ್ಮೆಯಾದರೂ ಅಯೋಧ್ಯಾ ದರ್ಶನ ಮಾಡಲೇಬೇಕೆಂದು ಹಂಬಲಿಸಿ ತೀರ್ಥಯಾತ್ರೆ ಮಾಡುತ್ತಾರೆ. 1528ರಲ್ಲಿ ಮತಾಂಧ ಆಕ್ರಮಣಕಾರಿ ಬಾಬರನ ಆದೇಶದಂತೆ ಆತನ ಸೇನಾಧಿಪತಿ ಮೀರ್ ಬಾಕಿ ಮಂದಿರವನ್ನು ಧ್ವಂಸಗೊಳಿಸಿ ಆ ಸ್ಥಾನದಲ್ಲಿ […]