– ಸ್ವಾವಲಂಬನೆಯೊಂದಿಗೆ ವೈಶ್ವಿಕ ಗ್ರಾಮ ಬಲಗೊಳಿಸುವ ಭಾರತೀಯ ಚಿಂತನೆ – ಹರಿಪ್ರಕಾಶ್ ಕೋಣೆಮನೆ. ಕೊರೊನಾ ವೈರಸ್‌ನಿಂದ ಪಾರಾಗುವುದು ಹೇಗೆ ಎಂಬುದೇ ಮೂರು ತಿಂಗಳ ಹಿಂದೆ ನಮ್ಮೆದುರಿನ ಬೃಹತ್ ಸವಾಲಾಗಿತ್ತು. ಕಾರಣ ಎದುರಾಗಿದ್ದ ಜೀವ ಭಯ! ಅದೊಂದು ಜೀವನ್ಮರಣದ ಪ್ರಶ್ನೆ ಎಂಬಂತೆಯೇ ಸರಕಾರವೂ ಯೋಚನೆಗೆ ಬಿದ್ದಿತ್ತು. ಆದರೆ ಈಗ ಅದು ನಮ್ಮ ಚಿಂತನೆಯ ಕೇಂದ್ರ ವಸ್ತುವಲ್ಲ. ಕೊರೊನಾದೊಂದಿಗೆ ಬದುಕಲು ಕಲಿಯಿರಿ ಎಂದು ಸರಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಮುನ್ನವೇ, ಅದರೊಟ್ಟಿಗೆ ಬದುಕಲು ಕಲಿಯಲಾರಂಭಿಸಿದ್ದೇವೆ. ಆದರೆ, ಈಗ […]