ಬದುಕಲು ಕಲಿಯಿರಿ

ರಾಷ್ಟ್ರೀಯ ಶಿಕ್ಷಣ ನೀತಿ 2020ಗೆ ಅಸ್ತು | ಜ್ಞಾನದ ಜತೆಗೆ ವೃತ್ತಿಪರ ಕೌಶಲಕ್ಕೆ ಒತ್ತು
3ನೇ ವರ್ಷದಿಂದಲೇ ಸ್ಕೂಲಿಂಗ್ | 5ನೇ ಕ್ಲಾಸಿನವರೆಗೆ ಮಾತೃಭಾಷಾ ಶಿಕ್ಷಣ

ಶಿಕ್ಷಣವನ್ನು ಕೇವಲ ಜ್ಞಾನಕ್ಕೆ ಸೀಮಿತಗೊಳಿಸದೆ ಕೌಶಲಕ್ಕೂ ಒತ್ತು ನೀಡಿ ಬದುಕಿಗೆ ಪೂರಕಗೊಳಿಸುವ ಮಹತ್ವಾಕಾಂಕ್ಷೆಯನ್ನು ಹೊತ್ತ ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. 18 ವರ್ಷದವರೆಗೆ ಕಡ್ಡಾಯ ಶಿಕ್ಷಣ, ಪದವಿಯನ್ನು ಯಾವ ಹಂತದಲ್ಲಿ ನಿಲ್ಲಿಸಿದರೂ ಪ್ರಮಾಣಪತ್ರ ನೀಡುವ ವ್ಯವಸ್ಥೆ, ವಿದ್ಯಾರ್ಥಿಗಳನ್ನು ತಂತ್ರಜ್ಞಾನದಲ್ಲಿ ಸಶಕ್ತಗೊಳಿಸಿ ವೃತ್ತಿಗೆ ಸಿದ್ಧಗೊಳಿಸುವುದು 34 ವರ್ಷದ ಬಳಿಕ ರೂಪುಗೊಂಡ ಹೊಸ ನೀತಿಯ ಮುಖ್ಯಾಂಶ.

10+2 ಅಲ್ಲ 5+3+3+4
ಹಾಲಿ ಶಿಕ್ಷಣ ವ್ಯವಸ್ಥೆಯಡಿ ಆರರಿಂದ 14 ವರ್ಷದವರೆಗೆ (7ನೇ ತರಗತಿವರೆಗೆ) ಕಡ್ಡಾಯ ಶಿಕ್ಷಣವಿದೆ. ಹೊಸ ನೀತಿಯಡಿ 18ನೇ ವರ್ಷದವರೆಗೂ ವಿಸ್ತರಿಸಲಾಗಿದೆ. 3ನೇ ವರ್ಷದಿಂದಲೇ ಶಿಕ್ಷಣ ಆರಂಭವಾಗಲಿದ್ದು, 18ನೇ ವಯಸ್ಸಿನವರೆಗೆ ನಾಲ್ಕು ಹಂತದಲ್ಲಿ ನಡೆಯಲಿದೆ.

ಯಾವಾಗ ಜಾರಿ?
1 ವರ್ಷದ ಅವಧಿಯ ಪೂರ್ವ ಪ್ರಾಥಮಿಕ ಶಿಕ್ಷಣ 2021-22ರಿಂದ ಆರಂಭ. ಹೊಸ ಪದ್ಧತಿ ಜಾರಿ 2030ಕ್ಕೆ ಪೂರ್ಣ.

ಮಾತೃ/ಪ್ರಾದೇಶಿಕ ಭಾಷಾ ಶಿಕ್ಷಣ
5ನೇ ತರಗತಿವರೆಗೆ, ಸಾಧ್ಯವಾದರೆ 8ನೇ ತರಗತಿವರೆಗೆ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ಸೂಚಿಸಲಾಗಿದೆ. ಉನ್ನತ ಶಿಕ್ಷಣವನ್ನೂ ಪ್ರಾದೇಶಿಕ ಭಾಷೆಯಲ್ಲಿ ನೀಡುವ ಚಿಂತನೆ ಇದೆ.

ಸರ್ವಸ್ಪರ್ಶಿ, ಸಮಾನ, ಗುಣಮಟ್ಟದ, ಸರ್ವರಿಗೂ ಸಿಗುವ, ಉತ್ತರದಾಯಿ ಎಂಬ ಕಂಬಗಳ ಮೇಲೆ ನಿಂತಿರುವ ಶಿಕ್ಷಣ ನೀಡಿ ಮುಂದಿನ ದಿನಗಳಲ್ಲಿ ಕೋಟ್ಯಂತರ ಜನರ ಬದುಕಿನಲ್ಲಿ ಕ್ರಾಂತಿಯಾಗಲಿದೆ.
– ನರೇಂದ್ರ ಮೋದಿ ಪ್ರಧಾನಿ

ವಿದ್ಯಾರ್ಥಿಗಳು ಪದವಿ ಪೂರೈಸಿದ ತಕ್ಷಣ ಉದ್ಯೋಗ ಪಡೆಯುವಂತಾಗಲು ಪದವಿ ಹಂತದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲಾಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
– ಪ್ರೊ.ಎಂ.ಕೆ.ಶ್ರೀಧರ್ , ಎನ್ಇಪಿ ಕರಡು ಸಮಿತಿ ಸದಸ್ಯ

ಪದವಿ, ಉನ್ನತ ಶಿಕ್ಷಣ
– ಡಿಗ್ರಿ ಶಿಕ್ಷಣದ ಅವಧಿ 3/4 ವರ್ಷ
– ಯಾವ ಹಂತದಲ್ಲಿ ಕಾಲೇಜು ಬಿಟ್ಟರೂ ಪ್ರಮಾಣಪತ್ರ ಸಿಗುತ್ತದೆ
– ಎಂಜಿನಿಯರಿಂಗ್ ವಿದ್ಯಾರ್ಥಿ ಇತಿಹಾಸ ಓದಬಹುದು. ಕಲಾ ವಿಭಾಗದ ವಿದ್ಯಾರ್ಥಿ ಗಣಿತ ಕಲಿಯಬಹುದು.
– ಯುಜಿಸಿ ಮಾದರಿಯಲ್ಲಿ ‘ಭಾರತೀಯ ಉನ್ನತ ಶಿಕ್ಷಣ ಮಂಡಳಿ’
– ವಿವಿಗಳ ಪ್ರವೇಶಕ್ಕೆ ಏಕರೂಪ ಪರೀಕ್ಷೆ
– 2030ದ ವೇಳೆಗೆ ಶಿಕ್ಷಕರ ಅರ್ಹತೆ 4 ವರ್ಷಗಳ ಬಿಇಡಿ; ಎಂ.ಫಿಲ್ ರದ್ದು.

12ನೇ ಕ್ಲಾಸಿನವರೆಗೆ
– ಪ್ರತಿ ವರ್ಷ ಪರೀಕ್ಷೆ ಇಲ್ಲ, 3,5, 8ನೇ ತರಗತಿಗೆ ಎಕ್ಸಾಂ
– 10 ಮತ್ತು 12ನೇ ತರಗತಿಗೆ ಮಾತ್ರ ಪಬ್ಲಿಕ್ ಪರೀಕ್ಷೆ
– 6ನೇ ಕ್ಲಾಸಿನಿಂದಲೇ ತಾಂತ್ರಿಕ, ವೃತ್ತಿಪರ ಕೌಶಲ ಕಲಿಕೆ
– ಅಂಕಪಟ್ಟಿಯಲ್ಲಿ ಅಂಕದ ಜತೆ ಕೌಶಲವೂ ನಮೂದು
– ಅಗತ್ಯ ವಿಷಯಗಳಿಗಷ್ಟೇ ಪಠ್ಯ
– ಮಾತೃಭಾಷಾ ಶಿಕ್ಷಣಕ್ಕೆ ಒತ್ತು, ಸಂಸ್ಕೃತಕ್ಕೂ ಆದ್ಯತೆ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top