ಧರ್ಮ ಬೋಧನೆಯ ಚಾತುರ್ಮಾಸ ಆರಂಭ

ಭಾರತೀಯ ಸಂಪ್ರದಾಯದಲ್ಲಿ ಆಷಾಢ ಮಾಸ ಶುಕ್ಲಪಕ್ಷದ ಏಕಾದಶಿಯಿಂದ ಆರಂಭಿಸಿ ಕಾರ್ತಿಕ ಮಾಸದ ಶುಕ್ಲ ಏಕಾದಶಿವರೆಗಿನ ಅವಧಿಯಲ್ಲಿ ಯತಿಗಳು ಚಾತುರ್ಮಾಸ ವ್ರತಾಚರಣೆ ಕೈಗೊಳ್ಳುತ್ತಾರೆ. ಯತಿಗಳು ಮಳೆಗಾಲದಲ್ಲಿ ಒಂದೆಡೆ ನೆಲೆ ನಿಂತು ಧರ್ಮ, ಹಿತವಚನ ಬೋಧಿಸುವ ಸುಸಂದರ್ಭ ಇದು. ಚಾತುರ್ಮಾಸದಲ್ಲಿ ನದಿ, ತೊರೆಗಳನ್ನು ದಾಟಬಾರದು ಎಂಬ ನಿಯಮವೂ ಇದೆ. ಆಹಾರದಲ್ಲೂ ಕಟ್ಟಳೆಗಳಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಯತಿಗಳ ಚಾತುರ್ಮಾಸ್ಯ ವ್ರತ ಆರಂಭವಾಗಲಿದೆ. ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ಯತಿಗಳು, ಶ್ರೀಗಳು ತಮ್ಮ ಮಠಗಳಲ್ಲೇ ಈ ಬಾರಿ ಚಾರ್ತುಮಾಸ ವ್ರತಾಚಾರಣೆ ಮಾಡುತ್ತಿದ್ದಾರೆ. – ಶೃಂಗೇರಿ […]

Read More

ಚೀನಾಗೆ ನೇರ ವಾರ್ನಿಂಗ್

– ಲಡಾಖ್ ಮುಂಚೂಣಿ ಸೇನಾ ನೆಲೆಗೆ ಮೋದಿ ಭೇಟಿ | ಸೈನಿಕರಿಗೆ ಹುರುಪು – ಆಕ್ರಮಣದ ಬುದ್ಧಿ ಬಿಡದಿದ್ದರೆ ಸರ್ವನಾಶವಾಗ್ತೀರಿ: ಮೋದಿ ಕಟು ಎಚ್ಚರಿಕೆ. ಲೆಹ್/ಹೊಸದಿಲ್ಲಿ: ಪೂರ್ವ ಲಡಾಖ್ ಸಂಘರ್ಷದ ಬಳಿಕ ಭಾರತದಿಂದ ಒಂದರ ನಂತರ ಒಂದು ಪೆಟ್ಟು ತಿನ್ನುತ್ತಿರುವ ಚೀನಾಗೆ ಶುಕ್ರವಾರ ಮತ್ತೊಂದು ಆಘಾತ ತಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ವ ಲಡಾಖ್‌ನ ಲೆಹ್‌ನಲ್ಲಿರುವ ಮುಂಚೂಣಿ ಸೇನಾ ನೆಲೆಗೆ ದಿಢೀರ್ ಭೇಟಿ ನೀಡುವ ಮೂಲಕ ನೆರೆ ರಾಷ್ಟ್ರಕ್ಕೆ ನೇರ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಚೀನಾ ಜತೆ ಗಡಿ ಹಂಚಿಕೊಂಡಿರುವ […]

Read More

ನಾವು ಕೊರೊನಾ ದಾಟಲಿದ್ದೇವೆ…

– ಡಾ. ಎಚ್ ಸುದರ್ಶನ್ ಬಲ್ಲಾಳ್.  ಸದ್ಯ ನಾವೆಲ್ಲ ಎದುರಿಸುತ್ತಿರುವ ಕೊರೊನಾ ಸಾಂಕ್ರಾಮಿಕದಂತಹ ಮತ್ತೊಂದು ಸಾಂಕ್ರಾಮಿಕದ ತೀವ್ರತೆಯನ್ನು ನಾನು ಕಳೆದ 50 ವರ್ಷಗಳ ವೃತ್ತಿ ಜೀವನದಲ್ಲಿ ಕಂಡಿರಲಿಲ್ಲ. ಏಡ್ಸ್ ಪ್ರಸರಣದ ವೇಳೆ ಅಮೆರಿಕದಲ್ಲಿದ್ದೆ, ಅಲ್ಲದೆ ಎಚ್1ಎನ್1, ಸಾರ್ಸ್, ಮೆರ್ಸ್ ಮತ್ತು ಸಿಡುಬು ರೋಗಗಳಿದ್ದಂತಹ ಅನೇಕರಿಗೆ ಚಿಕಿತ್ಸೆ ನೀಡಿದ್ದೇನೆ. ಆದರೆ ಈ ಎಲ್ಲ ಸಂದರ್ಭಗಳಲ್ಲಿ ಎಂದಿಗೂ ನನಗೆ ಸದ್ಯದ ಕೊರೊನಾ ಮಾದರಿಯಂಥದ್ದು ಗೋಚರಿಸಲಿಲ್ಲ. ನಾವು ಈಗಲೂ ಈ ಕೋವಿಡ್-19 ವೈರಾಣು ಬಗ್ಗೆ ಅರಿತುಕೊಳ್ಳುವ ಸ್ಥಿತಿಯಲ್ಲಿಯೇ ಇದ್ದೇವೆ ಮತ್ತು ಜತೆಜತೆಗೆ […]

Read More

ಕೈ ಸರಕಾರ ಪ್ರತಿಷ್ಠಾಪನೆಗೆ ಚಪ್ಪಡಿ ಕಲ್ಲಾಗುವೆ

– ಕೇಡರ್ ಬೇಸ್ ಪಕ್ಷ ಕಟ್ಟುವೆ | ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ.ಶಿವಕುಮಾರ್ ಪ್ರತಿಜ್ಞೆ. ವಿಕ ಸುದ್ದಿಲೋಕ ಬೆಂಗಳೂರು ನಾನು ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತ. ಬಳಿಕ ಅಧ್ಯಕ್ಷ . ನನಗೆ ಜೈ ಎನ್ನುವ ಬೆಂಬಲಿಗರು ಬೇಡ. ಕಾಂಗ್ರೆಸ್‌ಗೆ ಜೈ ಎನ್ನುವ ಕಾರ್ಯಕರ್ತರು ಬೇಕು. ಕಾಂಗ್ರೆಸ್ ಅನ್ನು ಅಧಿಕಾರದಲ್ಲಿ ಪ್ರತಿಷ್ಠಾಪನೆ ಮಾಡಲು ಪಕ್ಷ ದ ಪಾಲಿಗೆ ವಿಧಾನಸೌಧ ಮೆಟ್ಟಿಲುಗಳಿಗೆ ಚಪ್ಪಡಿಯಾಗುವೆ…: ಕೆಪಿಸಿಸಿ ನೂತನ ಅಧ್ಯಕ್ಷ ರಾಗಿ ಗುರುವಾರ ಪದಗ್ರಹಣ ಮಾಡಿದ ಡಿ.ಕೆ. ಶಿವಕುಮಾರ್ ಮಾತಿದು. ‘‘ಎಲ್ಲ ಐದು […]

Read More

ಕೈ ಬಲವರ್ಧನೆ ಪ್ರತಿಜ್ಞೆ

– ಕೇಡರ್ ಬೇಸ್ ಆಗಿ ಪಕ್ಷ ಕಟ್ಟಿ ಬಿಜೆಪಿಗೆ ಸಡ್ಡು ಹೊಡೆಯುವ ಪಣ – ಕೆಪಿಸಿಸಿ ಸಾರಥಿಯಾಗಿ ಡಿಕೆಶಿ | ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ. ವಿಕ ಸುದ್ದಿಲೋಕ ಬೆಂಗಳೂರು. ಕಾರ್ಯಕರ್ತರನ್ನೇ ಆಧಾರವಾಗಿಟ್ಟುಕೊಂಡು ಪಕ್ಷ ಕಟ್ಟುವ ಪ್ರತಿಜ್ಞೆಯೊಂದಿಗೆ ಡಿ.ಕೆ. ಶಿವಕುಮಾರ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೇರಿಸುವ ಅವರ ಪಣಕ್ಕೆ ಇಡೀ ಕಾಂಗ್ರೆಸ್ ಪಕ್ಷ ಒಮ್ಮತದ ಬೆಂಬಲದ ಭರವಸೆ ನೀಡಿದೆ. ಕೆಪಿಸಿಸಿ ನೂತನ ಕಚೇರಿಯಲ್ಲಿ ಗುರುವಾರ ಡಿ.ಕೆ.ಶಿವಕುಮಾರ್ ಮತ್ತು ಮೂವರು ಕಾರ್ಯಾಧ್ಯಕ್ಷರಾದ ಸತೀಶ್ […]

Read More

ಭಾರತದ ಬತ್ತಳಿಕೆ ಭರಪೂರ

-ಮಿಗ್ ವಿಮಾನ, ಸುಖೋಯಿ ಜೆಟ್ ಸೇರಿ 39,800 ಕೋಟಿ ರೂ. ವೆಚ್ಚದ ಶಸ್ತ್ರಾಸ್ತ್ರಗಳ ಖರೀದಿಗೆ ಒಪ್ಪಿಗೆ. ಭಾರತ ಎಂದಿಗೂ ತಾನಾಗೇ ಯುದ್ಧ ಮಾಡುವುದಿಲ್ಲ. ಆದರೆ, ದಾಳಿ ಮಾಡಿದರೆ ಸುಮ್ಮನೆ ಇರುವುದಿಲ್ಲ ಎಂಬ ನೀತಿಯನ್ನು ದಶಕಗಳಿಂದ ಅನುಸರಿಸಿಕೊಂಡು ಬಂದಿದೆ. ಕಳೆದ ಆರು ವರ್ಷದಲ್ಲಿ ಈ ನೀತಿಗೇನೂ ಭಂಗ ಬಂದಿಲ್ಲ. ಆದರೆ, ಸೇನೆಯ ಆಕ್ರಮಣಶೀಲತೆ ಮಾತ್ರ ಎದ್ದು ಕಾಣುತ್ತಿದೆ. ಭಾರತದ ಮುಟ್ಟಿದರೆ ತಟ್ಟೇ ಬಿಟ್ಟೇನು ಎಂಬ ನೀತಿ ಪಾಕಿಸ್ತಾನ ಮತ್ತು ಚೀನಾಗಳ ಗಡಿ ವಿಷಯದಲ್ಲಿ ನಿಜವಾಗುತ್ತಿದೆ. ಈ ಹಂತದಲ್ಲಿ ಸೇನೆ […]

Read More

ಚೀನಾ ಆ್ಯಪ್‌ ಬ್ಯಾನ್‌ ಟೆಕ್‌ ಕಿಂಗ್‌ ಆಗುವ ಕನಸಿಗೆ ಕೊಳ್ಳಿ

ವಿಶ್ವದ ತಂತ್ರಜ್ಞಾನ ವಲಯದ ಕಿಂಗ್‌ ಅನಿಸಿಕೊಳ್ಳುವ ಚಿಂತನೆ ಚೀನಾದ್ದಾಗಿತ್ತು. ಆದರೆ 59 ಆ್ಯಪ್‌ಗಳನ್ನು ನಿಷೇಧ ಮಾಡುವ ಮೂಲಕ ಭಾರತ ಚೀನಾವನ್ನು ಮಣಿಸುವ ಕ್ರಿಯೆಗಳ ಸರಪಟಾಕಿಗೆ ಬೆಂಕಿ ಹಚ್ಚಿದೆ. ಇದು ಚೀನಾದ ಕನಸಿಗೆ ಕೊಳ್ಳಿ ಇಡುವ ಕಾರ್ಯದ ಆರಂಭ ಅಷ್ಟೇ. ಕಳಪೆ ಮಾಲುಗಳ ಕಿಂಗ್‌ 1980 ಹಾಗೂ 90ರ ದಶಕದಲ್ಲಿ ಅಮೆರಿಕ, ಜಗತ್ತಿನ ಟೆಕ್ನಾಲಜಿ ಕಿಂಗ್‌ ಎನಿಸಿಕೊಂಡಿತ್ತು. ನಂತರದ ದಶಕಗಳಲ್ಲಿ ಚೀನಾ ಆ ಸ್ಥಾನಕ್ಕೆ ಲಗ್ಗೆ ಹಾಕಿತು. ಅಮೆರಿಕ ಮುಂತಾದ ಮುಂದುವರಿದ ದೇಶಗಳಿಂದ ತಂತ್ರಜ್ಞಾನವನ್ನು ಅಪಹರಿಸಿ ಅಥವಾ ಅನುಕರಿಸಿ […]

Read More

ನಿರ್ಬಂಧ ಮೊದಲ ಹೆಜ್ಜೆ – ಇದು ಸ್ವಾವಲಂಬನೆಯ ಪಾಠವಾಗಲಿ

ಚೀನಾ ಮೂಲದ 59 ಆ್ಯಪ್‌ಗಳನ್ನು ಭಾರತ ಸರಕಾರ ನಿರ್ಬಂಧಿಸಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೂ ಚೀನಾ ಮೂಲದ ವೀಬೋ ಸಾಮಾಜಿಕ ಜಾಲತಾಣದಿಂದ ಹೊರಬಂದಿದ್ದು, ಅದರಲ್ಲಿದ್ದ ತಮ್ಮ ಖಾತೆಯನ್ನು ಅಳಿಸಿಹಾಕಿದ್ದಾರೆ. ದೇಶದ ಭದ್ರತೆ, ಸಾರ್ವಭೌಮತೆ, ಸಂಸ್ಕೃತಿಗಳಿಗೆ ಹಾನಿಕಾರಕವಾದ ಅಂಶಗಳನ್ನು ಹೊಂದಿರುವುದರಿಂದ ಈ ಆ್ಯಪ್‌ಗಳನ್ನು ನಿಷೇಧಿಸುತ್ತಿರುವುದಾಗಿ ಸರಕಾರ ತಿಳಿಸಿದೆ. ಈ 59 ಆ್ಯಪ್‌ಗಳಲ್ಲಿ ಟಿಕ್‌ಟಾಕ್‌ನಂಥ ಜನಪ್ರಿಯ ವಿಡಿಯೋ ಬ್ಲಾಗಿಂಗ್‌ ಆ್ಯಪ್‌ಗಳೂ ಇದ್ದು, ಇದನ್ನು ದೇಶದಲ್ಲಿ 20 ಲಕ್ಷಕ್ಕಿಂತಲೂ ಅಧಿಕ ಮಂದಿ ಡೌನ್‌ಲೋಡ್‌ ಮಾಡಿಕೊಂಡು ಬಳಸುತ್ತಿದ್ದರು. ಕಳೆದ ತಿಂಗಳು ಭಾರತದ […]

Read More

ಒಂದು ದಿನದ ವೇತನವನ್ನು ಅತಿಥಿ ಉಪನ್ಯಾಸಕರಿಗೆ ನೀಡಲು ನಿರ್ಧಾರ

ಅತಿಥಿಗಳ ಕಷ್ಟಕ್ಕೆ ಕಾಯಂ ಉಪನ್ಯಾಸಕರ ಸ್ಪಂದನೆ. ವಿಕ ಸುದ್ದಿಲೋಕ ಬೆಳಗಾವಿ. ಕೊರೊನಾ ಹೊಡೆತಕ್ಕೆ ದುಡಿಮೆ ಕಳೆದುಕೊಂಡು ಅತಂತ್ರರಾಗಿರುವ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ನೆರವಿಗೆ ಕಾಯಂ ಉಪನ್ಯಾಸಕರು ಧಾವಿಸಿದ್ದಾರೆ. ತಮ್ಮ ಒಂದು ದಿನದ ವೇತನವನ್ನು ಅತಿಥಿ ಉಪನ್ಯಾಸಕರಿಗೆ ನೀಡುವುದಾಗಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಪ್ರಕಟಿಸಿದೆ. ಕೆಲ ಉಪನ್ಯಾಸಕರು ಮೂರು ತಿಂಗಳು ತಲಾ ಒಂದು ದಿನದ ವೇತನ ಕೊಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡುವ ಮೂಲಕ ಅತಿಥಿ ಉಪನ್ಯಾಸಕರ ಕಷ್ಟಕ್ಕೆ ಕೈ […]

Read More

ಹಾಲು ಮಾರಾಟಕ್ಕೂ ಕೊರೊನಾ ಎಫೆಕ್ಟ್

-ಹೆಚ್ಚಿದ ಉತ್ಪಾದನೆ, ಕುಸಿದ ಬೇಡಿಕೆ-ಹೆಚ್ಚಿದ ಉತ್ಪಾದನೆ, ಕುಸಿದ ಬೇಡಿಕೆ-ಶಾಲೆ, ಹೋಟೆಲ್‌ಗಳಿಂದ ಡಿಮಾಂಡಿಲ್ಲ. ಸಂತೋಷ್‌ ಕಾಚಿನಕಟ್ಟೆ ಶಿವಮೊಗ್ಗ. ರಾಜ್ಯದೆಲ್ಲೆಡೆ ಜನತೆಗೆ ಕ್ಷೀರಾಮೃತ ಉಣಿಸುವ, ರೈತರು ಮತ್ತು ಹೈನುಗಾರಿಕೆ ಪಾಲಿನ ಜೀವಾಳ ಎನಿಸಿದ ರಾಜ್ಯ ಸಹಕಾರ ಹಾಲು ಉತ್ಪಾದಕರ ಒಕ್ಕೂಟ(ಕೆಎಂಎಫ್‌)ಕ್ಕೂ ಕೊರೊನಾ ಸಂಕಷ್ಟ ತಂದಿಟ್ಟಿದೆ. ರೈತರಿಂದ ಹಾಲನ್ನು ಸಂಗ್ರಹಿಸಿ ಪೇಟೆ, ಪಟ್ಟಣಗಳಲ್ಲಿನ ಗ್ರಾಹಕರಿಗೆ ತಲುಪಿಸುವ ಸೇತುವೆಯಾಗಿ ಕೆಲಸ ಮಾಡುವ ಹಾಲು ಒಕ್ಕೂಟಕ್ಕೆ ಕೊರೊನಾ ಆರ್ಥಿಕ ಪೆಟ್ಟು ನೀಡಿದೆ. ಒಂದೆಡೆ ಹಾಲಿನ ಉತ್ಪಾದನೆ ಹೆಚ್ಚಾದ ಸಂತಸ ಮೂಡಿಸಿದರೆ, ಮತ್ತೊಂದು ಕಡೆ ಉತ್ಪಾದನೆಯಾದ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top