ಕಾಂಗ್ರೆಸ್ ಗೆ ಹೊಡೆತ ನೀಡಿದ ಮೋದಿ ಸರ್ಕಾರದ ಕಠಿಣ ನಿರ್ಧಾರಗಳು

ಬಹುನಿರೀಕ್ಷಿತ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಹಿಮಾಚಲದಲ್ಲಿ ಗರಿಷ್ಠ ಸ್ಥಾನ ಗಳಿಸಿ, ಗುಜರಾತಿನಲ್ಲಿ ಪ್ರಯಾಸ ಪಟ್ಟು ಬಿಜೆಪಿ ಅಧಿಕಾರವನ್ನು ಹಿಡಿದಿದೆ. ಇಲ್ಲಿ ಆರಂಭವಾಗುವ ಮೊದಲ ಲೆಕ್ಕಾಚಾರ ಈ ಜಿದ್ದಾಜಿದ್ದಿನಲ್ಲಿ ಗೆದ್ದವರು ಯಾರು? ಸೋತವರು ಯಾರು? ಎಂಬುದು.   ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಥಾನಗಳನ್ನು ಗೆದ್ದು ಸಂಖ್ಯಾಬಲ ಹೆಚ್ಚಿಸಿಕೊಂಡಿರುವುದು ನಿಜ. ಆದರೂ ಶತಾಯಗತಾಯ ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆಯೊಂದಿಗೆ ತನ್ನೆಲ್ಲ ಪ್ರತಿಷ್ಠೆಯನ್ನು ಪಣಕ್ಕಿಟ್ಟು, ತರಹೇವಾರಿ ಹೊಂದಾಣಿಕೆಗಳನ್ನು ಮಾಡಿಕೊಂಡು ಸೆಣೆಸಿದರೂ ಅಧಿಕಾರದ ಕನಸು ಕೈಗೂಡಲಿಲ್ಲ ಎಂಬುದೂ […]

Read More

‘ಹೊಗಳಿಕೆಯ ಹೊನ್ನಶೂಲಕೆ ಹೆದರುವೆ’

ಭಾಗ 2 ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷಿಕ್ತರಾಗಿ ಐವತ್ತು ವರ್ಷಗಳಾಗುತ್ತಿವೆ. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೆಗ್ಗಡೆಯವರು ಹಲವು ಸಂಗತಿಗಳ ಕುರಿತು ವಿವರವಾಗಿ ಮಾತನಾಡಿದ್ದಾರೆ. # ತಮ್ಮ ಸೇವೆಯ ಕಾರಣಕ್ಕೆ, ಧರ್ಮಸ್ಥಳದ ಕ್ಷೇತ್ರದ ಮಹಿಮೆಯ ಕಾರಣಕ್ಕೆ ಅಪಾರ ಹೊಗಳಿಕೆ ಕೇಳಿಬರುತ್ತಿರುತ್ತದೆ. ಇದನ್ನು ತಾವು ಹೇಗೆ ಸ್ವೀಕರಿಸುತ್ತೀರಿ? ಇಂತಹ ಹೊಗಳಿಕೆಗಳಿಂದ ಭಯವಾಗುತ್ತದೆ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಸೇವೆಯ ಅವಕಾಶಗಳು ಸಾಕಷ್ಟಿವೆ. ಇನ್ನೂ ನೂರು ಕೆಲಸಗಳನ್ನು ನಾವು ಮಾಡಬಹುದು. ಕಳೆದ ಎರಡು ವರ್ಷದಿಂದ ಕೆರೆ […]

Read More

ಸರ್ಕಾರ ಸ್ನೇಹಿತನಾಗಬೇಕೆ ವಿನಾ ದಾನಿಯಾಗಬಾರದು

ಧರ್ಮಸ್ಥಳ ದೇಶವಿದೇಶಗಳಲ್ಲಿಯೂ ಖ್ಯಾತಿ ಪಡೆದ ಪುಣ್ಯಕ್ಷೇತ್ರ, ಕಾರಣಿಕ ಕ್ಷೇತ್ರ. ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಹೆಸರೂ ಅಷ್ಟೇ ಸುಪರಿಚಿತ. ಧಾರ್ವಿುಕ, ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಹೆಗ್ಗಡೆಯವರು ಈಗ ಪಟ್ಟಾಭಿಷೇಕದ 50ನೇ ವರ್ಷದ ಮಹತ್ವದ ಕಾಲಘಟ್ಟದಲ್ಲಿದ್ದಾರೆ. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆಯವರಿಗೆ ನೀಡಿದ ಈ ವಿಶೇಷ ಸಂದರ್ಶನದಲ್ಲಿ ಡಾ.ಹೆಗ್ಗಡೆಯವರು ತಮ್ಮ ಸುದೀರ್ಘ ಪಯಣದ ವಿವರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಭಾಗ 1 # ಸಾಮಾಜಿಕ ಕಾರ್ಯ ಧರ್ಮಸ್ಥಳ ಕ್ಷೇತ್ರಕ್ಕೆ ವಿಶಿಷ್ಟ ಸ್ಥಾನಮಾನವನ್ನು […]

Read More

ದೇಶದ ಘನತೆ ಕಾಯದವರು ಆಳಲು ಅರ್ಹರೆ? (16 .09.2017)

ಕೆಲವು ಎನ್​ಜಿಒಗಳು ಭಾರತದ ಘನತೆ ಗೌರವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಲೆಂದೇ ಕಾರ್ಯನಿರ್ವಹಿಸುತ್ತಿವೆ. ಈ ಘನಂದಾರಿ ಕೆಲಸಕ್ಕಾಗಿ ಅವಕ್ಕೆ ಅಪಾರ ಪ್ರಮಾಣದ ಧನ ಸಹಾಯವೂ ಬರುತ್ತದೆ. ಈ ಹುನ್ನಾರವನ್ನು ಅರಿಯದೆ ವಿದೇಶಿ ನೆಲದಲ್ಲಿ ಭಾರತವನ್ನು ಬೈಯುವುದಕ್ಕೆ ಏನೆನ್ನಬೇಕೋ ತಿಳಿಯದು. ರಾಹುಲ್ ಗಾಂಧಿ ಕೊನೆಗೂ ಕಾಂಗ್ರೆಸ್ ಗಾಡಿಯ ನೊಗಕ್ಕೆ ಹೆಗಲು ಕೊಡಲು ಮನಸ್ಸು ಮಾಡಿದ್ದಾರೆ. ಅಷ್ಟು ಮಾತ್ರವಲ್ಲ, ದೇಶದ ಪ್ರಧಾನಮಂತ್ರಿಯೂ ಆಗುತ್ತೇನೆಂದು ಹೇಳುವ ಧೈರ್ಯ ತೋರಿದ್ದಾರೆ. ಅದು ಒಳ್ಳೆಯದೇ ಅಂತಿಟ್ಟುಕೊಳ್ಳೋಣ. ಈ ಘೊಷಣೆಯಿಂದ ಯಾರಿಗೆ ಎಷ್ಟು ಸಮಾಧಾನ, ಖುಷಿಯಾಗಿದೆಯೋ […]

Read More

ಆಗ ಚೀನಾದೆದುರು ಸೋತ ಭಾರತ ಈಗ ಗೆದ್ದಿದ್ದು ಹೇಗೆ? (02.09.2017)

ತನ್ನ ಸಾಮ್ರಾಜ್ಯವಾದ ವಿಸ್ತರಣೆಗೆ ಭಾರತವೇ ದೊಡ್ಡ ಅಡ್ಡಿ ಎಂಬುದು ಚೀನಾದ ಅಸಮಾಧಾನ. ಹೀಗಾಗಿ ಲಭ್ಯ ವೇದಿಕೆಗಳನ್ನೆಲ್ಲ ಬಳಸಿಕೊಂಡು ಭಾರತಕ್ಕೆ ತಲೆನೋವು ತರುವುದು ಅದರ ಕಾರ್ಯತಂತ್ರ. ಆದರೆ ಭಾರತ ಬದಲಾಗಿದೆ ಎಂಬ ಸ್ಪಷ್ಟ ಸಂದೇಶ ಡೋಕ್ಲಂ ಬಿಕ್ಕಟ್ಟಿನ ಸಂದರ್ಭದಲ್ಲಿ ರವಾನೆಯಾಗಿದೆ. ಇನ್ನೇನು ಭಾರತದ ಮೇಲೆ ಚೀನಾ ಯುದ್ಧ ನಡೆಸಿಯೇಬಿಟ್ಟಿತು ಎಂಬ ಸ್ಥಿತಿ ನಿರ್ಮಾಣ ಆದಾಗಲೂ ಪ್ರಧಾನಿ ನರೇಂದ್ರ ಮೋದಿ ಯಾಕೆ ಮೌನ ಮುರಿಯಲಿಲ್ಲ? ಚೀನಾದ ಸತತ ತರ್ಲೆಗಳಿಗೆ ಬಹಿರಂಗ ಉತ್ತರ ಕೊಡುವುದಕ್ಕೆ ಅವರೇಕೆ ಮುಂದಾಗಲಿಲ್ಲ ಎಂಬ ಪ್ರಶ್ನೆಗಳಿಗೆ ಈಗ […]

Read More

ಈಶ್ವರಪ್ಪ ರಾ.ಬ್ರಿ.ಯಿಂದ ಬಿಜೆಪಿಗೇಕೆ ಗಾಬರಿ?

  ಮಾಯಾವತಿ, ಮಹಂತ, ಕೇಜ್ರಿವಾಲ್ ಮುಂತಾದವರ ಮಾತು ಹಾಗಿರಲಿ, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದ ನೆಲೆಗಟ್ಟಿನಲ್ಲಿ ಬಲಾಢ್ಯ ಆಗಿರುವ ಮೋದಿಗೇ ಕೇವಲ ಸಿದ್ಧಾಂತದಿಂದ, ಜಾತಿಯಿಂದ, ಭಾವನಾತ್ಮಕ ಅಂಶಗಳಿಂದ ಜನರನ್ನು ಬಹಳ ಕಾಲ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾದಂತಿದೆ. ಅಜಮಾಸು ನಾಲ್ಕು ವರ್ಷಗಳ ಹಿಂದಿನ ಮಾತು. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಈಗ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಜನಜಾತಿಗಳ ಸಮಾವೇಶ ನಡೆಯುತ್ತಿತ್ತು. ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪನೆಗೊಳಿಸಲೇಬೇಕೆಂಬ […]

Read More

ಮೋದಿ ಸರ್ಕಾರಕ್ಕೆ ಜನರ ನಾಡಿಮಿಡಿತ ಅರ್ಥವಾಗುವುದಿಲ್ಲವೆ?

ಕೇಂದ್ರ ಸರ್ಕಾರ ಯಾಕೆ ಹೀಗೆ ಕೆಲವೊಂದು ಮುಖ್ಯ ವಿಷಯಗಳಲ್ಲಿ ವಿವೇಚನಾರಹಿತವಾಗಿ ನಡೆದುಕೊಳ್ಳುತ್ತಿದೆ ಎಂಬ ಚರ್ಚೆಗೆ ಪರಿಚಿತರೊಬ್ಬರು ಮುಂದಿಟ್ಟ ತರ್ಕ ಬಹಳ ಕುತೂಹಲಕರವಾಗಿತ್ತು. ‘ಕಾರಣ ಸರಳ. ಮೋದಿ ಸರ್ಕಾರವೇ ಒಂದು ಕಾರ್ಪೆರೇಟ್ ಕಂಪನಿಯ ರೀತಿಯಲ್ಲಿ ನಡೆಯುತ್ತಿದೆ. ಬಹಳಷ್ಟು ಸಚಿವರು ಅದರಲ್ಲೂ ಆಯಕಟ್ಟಿನ ಖಾತೆಗಳನ್ನು ನಿರ್ವಹಿಸುವ ಮತ್ತು ಸರ್ಕಾರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಬಹುತೇಕ ಸಚಿವರು ಜನರಿಂದ ಆಯ್ಕೆಯಾದವರಲ್ಲ. ಜನಸಾಮಾನ್ಯರ ಕಷ್ಟ-ಸುಖ ಅರಿತವರಲ್ಲ. ಎಸಿ ರೂಮಲ್ಲಿ ಕುಳಿತು, ಪವರ್ ಪಾಯಿಂಟ್ ಪ್ರಸೆಂಟೇಶನ್ ಮಾಡುತ್ತ, ನೋಡುತ್ತ ಬೆಳೆದವರು. ಅವರು ಮತ್ತಿನ್ನೇನು ಮಾಡಿಯಾರು? […]

Read More

ಈ ಗುಲ್ಲಿನ ಹಿ೦ದಿರುವ ಗುಟ್ಟೇನೆ೦ದರೆ…

ಹ್ಯೆದರಾಬಾದ್ ವಿವಿಯಲ್ಲಿ ನಡೆದ ರೋಹಿತ್ ವೇಮುಲ ಆತ್ಮಹತ್ಯೆ ರಾದ್ಧಾ೦ತ, ಜೆಎನ್‍ಯುನಲ್ಲಿ ಅಫ್ಜಲನ ಬೆ೦ಬಲಿಸುವ ವಗ೯ ಹುಟ್ಟಿಕೊ೦ಡದ್ದು ಮತ್ತು ಸ೦ಸತ್ತಿನಲ್ಲಿ ಸತತ ಎರಡು ವಷ೯ಗಳಿ೦ದ ನಡೆಯುತ್ತಿರುವ ಪ್ರಹಸನ ಇವೆಲ್ಲವನ್ನು ಬಿಡಿಬಿಡಿಯಾಗಿ ನೋಡಲಾದೀತೆ? ಕನ್ಹಯ್ಯಾ ಕುಮಾರ್ ತಾನೇ ಹೆಣೆದ ಬಲೆಯಲ್ಲಿ ಹೇಗೆ ಸಿಕ್ಕಿಬಿದ್ದರು ನೋಡಿ. ಅಷ್ಟು ಮಾತ್ರವಲ್ಲ ಮಾಡಬಾರದ್ದನ್ನು ಮಾಡಲು ಹೋದ ಕಾಮೆ್ರೀಡ್ಗಳ ಮುಖವಾಡವೂ ಕಳಚಿತು ಅನ್ನಿ. ಈ ದೇಶದಲ್ಲಿ ಯಾರು ಯಾವ ಪಕ್ಷದ ಪರ ಬೇಕಾದರೂ ಪ್ರಚಾರ ಮಾಡಬಹುದು. ಅದು ಅವರು ಹೊ೦ದಿರುವ ಸ೦ವಿಧಾನಬದ್ಧ ಹಕ್ಕು. ಯಾರೂ ಅದನ್ನು […]

Read More

ಈ ಬೃಹನ್ನಾಟಕದ ಪರಿಗೆ ಏನೆನುವುದು…

ಗಣಿ ದುಡ್ಡು ಮತ್ತು ರೆಸಾರ್ಟ್ ರಾಜಕಾರಣ ಜನರಲ್ಲಿ ಅಸಹ್ಯ ಹುಟ್ಟಿಸಿದ್ದರಿಂದಲೇ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಸರ್ಕಾರ ಸ್ಥಾಪನೆ ಆಗಿರುವುದು. ಈಗ ಅದೇ ರೆಸಾರ್ಟ್ ರಾಜಕಾರಣ ಪಾಲಿಕೆ ಅ ಧಿಕಾರ ಹಿಡಿಯುವುದಕ್ಕೂ ಬಳಕೆಯಾಗುತ್ತಿರುವುದು ಸೋಜಿಗದ ಸಂಗತಿ. ರಾಜಕೀಯ ವ್ಯವಸ್ಥೆಯ ಬಗೆಗೇ ವಾಕರಿಗೆ ಹುಟ್ಟುತ್ತಿರುವ ಕಾಲ ಇದು. ಅಂಥದ್ದರಲ್ಲಿ ಬಿಬಿಎಂಪಿ ಎಂಬ ಸಂಪತ್ತಿನ ಕೋಟೆಗೆ ಲಗ್ಗೆ ಹಾಕಲು ಮೂರೂ ಪಕ್ಷಗಳಲ್ಲಿ ಅದಿನ್ನೆಂತಹ ಅಸಹ್ಯಕರ ಪೈಪೋಟಿ ಶುರುವಾಗಿದೆ ನೋಡಿ. ದೂರ ನಿಂತು ನೋಡುವ ಜನರು ಹಾದಿಬೀದಿಯಲ್ಲಿ ಹಿಡಿಶಾಪ ಹಾಕತೊಡಗಿದ್ದಾರೆ. ಆದರೆ ಲಜ್ಜೆಗೆಟ್ಟು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top